ಕಣ್ಣುಕುಟರೆ ಸಮಸ್ಯೆಯನ್ನು ಈ ಕರಿಬೇವಿನ ಎಲೆಯೊಂದಿಗೆ ಹೇಗೆ ವಾಸಿ ಮಾಡಬಹುದು ಅನ್ನೋದು ಇಲ್ಲಿದೆ ನೋಡಿ, ಕರಿಬೇವಿನ ಎಲೆಗಳೊಂದಿಗೆ ಎದೆಹಾಲನ್ನು ಸೇರಿಸಿ ಅರೆದು, ಅದನ್ನು ಕಣ್ಣುಕುಟರೆ ಬಂದಿರುವ ಸ್ಥಳದಲ್ಲಿ ಸವರಿದರೆ ಕಣ್ಣುಕುಟರೆ ವಾಸಿಯಾಗುತ್ತದೆ.
ಕಫ ಹಾಗೂ ಕೆಮ್ಮು ನಿವಾರಿಸುವ ಮನೆಮದ್ದು; ಪಗಡೆ ಹೂವು ಗಿಡದ ತೊಗಟೆಯನ್ನು ಸ್ವಲ್ಪ ತೆಗೆದುಕೊಂಡು, ಎಲೆ ಅಡಿಕೆಯೊಂದಿಗೆ ಸೇರಿಸಿಕೊಂಡು ಮೆಲುಕು ಹಾಕಿದರೆ ಕಫ ಕರಗಿ ಕಪದ ಕೆಮ್ಮು ದೂರವಾಗುತ್ತದೆ. ಚರ್ಮ ರೋಗಗಳನ್ನು ನಿವಾರಿಸುವ ನೆಲನೆಲ್ಲಿ: ನೆಲನೆಲ್ಲಿ ಗಿಡದ ಎಲೆಗಳೊಂದಿಗೆ ಉಪ್ಪನ್ನು ಸೇರಿಸಿ ಅರೆದು ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಿದರೆ ಕಜ್ಜಿ, ತುರಿಕೆಗಳಂಥ ಚರ್ಮ ರೋಗಗಳು ಬರೋದಿಲ್ಲ.
ಒಂದು ಲೀಟರ್ ನೀರಿನಲ್ಲಿ ಒಂದು ಚಮಚ ಓಮವನ್ನು ಹಾಕಿ ಕುದಿಸಿ ಅರ್ಧದಷ್ಟು ಆದ ಮೇಲೆ ಶೋಧಿಸಿ ಕುಡಿಯಿರಿ. ಅದರಿಂದ ಹೃದಯಶೂಲೆ, ವಾಯು ಪೀಡೆ ಹೊಟ್ಟೆಯ ಗುಡುಗುಡು, ಬಿಕ್ಕಳಿಕೆ, ಅರುಚಿ, ಮಂದಾಗ್ನಿ, ಜಂತು ಹುಳು, ಬೆನ್ನು ನೋವು ಅಜೀರ್ಣ ಬೇಧಿ ಕಾಲರಾ ನೆಗಡಿ ಬಹುಮೂತ್ರ, ಸಿಹಿಮೂತ್ರ, ರೋಗಗಳು ನಿವಾರಣೆಯಾಗುತ್ತವೆ.
ಒಂದು ಲೀಟರ್ ನೀರಿನಲ್ಲಿ ಒಂದೂವರೆ ಚಮಚ ಜೀರಿಗೆ ಹಾಕಿ ಕುದಿಸಿ 750 ಗ್ರಾಮ್ಗೆ ಇಳಿದಾದ ಅದನ್ನು ಇಳಿಸಿ ಆರಿಸಿ ಶೋಧಿಸಿ ಕುಡಿಯಬೇಕು. ಅದರಿಂದ ಗರ್ಭಕೋಶದ ಉಷ್ಣತೆ ದಿನ ಬಿಟ್ಟು ದಿನ ಬರುವ ಚಳಿ ಜ್ವರ, ಮಲೇರಿಯಾ ಜ್ವರ ಉಷ್ಣದಿಂದ ಆಗುವ ಕಣ್ಣು ಕೆಂಪು ಕೈ ಕಾಲು ಉರಿತ ವಾಯು ಅಥವಾ ಪಿತ್ತದ ವಾಂತಿ, ಉಷ್ಣದಿಂದ ಉಂಟಾಗುವ ಭೇದಿ ಮೊದಲಾದ ರೋಗಗಳು ನಿವಾರಣೆಯಾಗುತ್ತವೆ.
ಒಂದು ಅಗಲವಾದ ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಮುಖವನ್ನು ಎತ್ತು ಕಣ್ಣುಗಳನ್ನು ಮುಚ್ಚಿ ಮಚ್ಚಿ ತೆಗಿಯುತ್ತಿದ್ದರೆ ಕಣ್ಣಿನಲ್ಲಿ ಬಿದ್ದಿರುವ ಕಸಗಳು ಹೊರಗೆ ಬರುತ್ತವೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.