ಸಾಮಾನ್ಯವಾಗಿ ನಿಮಗೆ ಗೊತ್ತಿರುತ್ತದೆ ಸಸ್ಯಗಳು ಗಿಡಗಳು ಹಸಿರು ಬಣ್ಣದಲ್ಲಿರಲು ಕಾರಣವೇನು ಅನ್ನೋದು? ಇದಕ್ಕೆ ಪತ್ರಹರಿತ್ತು ಅನ್ನೋದು ನಿಮಗೆ ಗೊತ್ತು, ಇದೀಗ ಈ ಡಯಟಿಶಿಯನ್‌ಗಳ ಕಣ್ಣು ಹರಿದಿದೆ. ಆರೋಗ್ಯ ಮತ್ತು ತೂಕ ಇಳಿಕೆಯ ಹೊಸ ಮಂತ್ರವಾಗಿ ಕ್ಲೋರೋಫಿಲ್ ವಾಟರ್ ಗಮನ ಸೆಳೆಯುತ್ತಿದೆ.ಈ ಕ್ಲೋರೋಫಿಲ್ ವಾಟರ್‌ನಿಂದ ಆರೋಗ್ಯಹೆಚ್ಚುತ್ತದೆ ಹಾಗೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಿದ್ದಾರೆ ಡಯಟ್ ಸ್ಪೆಶಲಿಸ್ಟ್ಸ್.
ಏನಿದು ಕ್ಲೋರೋಫಿಲ್: ಸಸ್ಯಗಳು ಫೋಟೋಸಿಂಥೆಸಿಸ್ ಮೂಲಕ ಆಹಾರ ತಯಾರಿಸಿಕೊಳ್ಳುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಹೀಗೆ ತಯಾರಿಸುವಾಗ ಸೂರ್ಯನ ಬೆಳಕನ್ನು ಹೀರಿಕೊಂಡು, ಅದರಿಂದ ಆಹಾರ ತಯಾರಿಸಿ ಎನರ್ಜಿ ಗಳಿಸುತ್ತವೆ. ಹಾಗೆ ಸೂರ್ಯನ ಬೆಳಕನ್ನು ಹೀರಲು ನೆರವಾಗುವುದೇ ಕ್ಲೋರೋಫಿಲ್.
ಈ ಕ್ಲೋರೋಪಿನ್ ವಾಟರ್ ತಯಾರಿಸಲುಬೇಕಾಗುವ ಮೊದಲ ಅಂಶ ಕ್ಲೋರೋಫಿಲಿನ್. ಕ್ಲೋರೋಫಿಲ್‌ನಿಂದ ಪಡೆದ ಉಪ್ಪುಗಳ ಮಿಕ್ಸ್‌ಚರ್ ಇದು. ಕಾಪರ್ ಹೊಂದಿರುತ್ತದೆ. ಇದು ನೀರಿನಲ್ಲಿ ಕರಗುವ ಸಪ್ಲಿಮೆಂಟ್ ಆಗಿದ್ದು, ಮೈಕ್ರೋನ್ಯೂಟ್ರಿಯೆಂಟ್ಸ್ ಹಾಗೂ ಆ್ಯಂಟಿಆಕ್ಸಿಡೆಂಟ್ಸ್‌ಗಳ ಕಣಜ ಎನ್ನಲಾಗುತ್ತಿದೆ. ಕ್ಲೋರೋಫಿಲ್ ಬೆರೆಸಿದ ಆಹಾರಕ್ಕಿಂತ ಕ್ಲೋರೋಫಿಲ್ ವಾಟರ್ ಹೆಚ್ಚು ಬೇಗ ಫಲಿತಾಂಶ ನೀಡುತ್ತದೆ. ಜಗತ್ತಿನ ಹಲವು ಜ್ಯೂಸ್ ಬಾರ್‌ಗಳಲ್ಲಿ ಇದು ಈಗಾಗಲೇ ಹಾಟ್ ಟ್ರೆಂಡ್ ಆಗಿದೆ.
ತೂಕ ಇಳಿಕೆ: ಕ್ಲೋರೋಫಿಲ್ ವಾಟರನ್ನು ಪ್ರತಿ ದಿನ ಸೇವಿಸುವುದರಿಂದ ಬೇಗ ತೂಕ ಇಳಿಯುವುದಲ್ಲದೆ ಜಂಕ್ ಆಹಾರ ತಿನ್ನುವ ಆಸೆ ಕೂಡಾ ಇಳಿಯುತ್ತದಂತೆ. ಅಷ್ಟೇ ಅಲ್ಲ, ದೇಹದಲ್ಲಿ ಕೆಟ್ಟ ಕೊಲೆಸ್ಟೆರಾಲ್ ಮಟ್ಟ ಕೂಡಾ ಕಡಿಮೆಯಾಗುತ್ತದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ದೇಹಕ್ಕೆ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದು ಹಾಗೂ ಚರ್ಮ ರೋಗಗಳನ್ನು ನಿವಾರಿಸುವುದು ಹೀಗೆ ಹತ್ತಾರು ಆರೋಗ್ಯಕಾರಿ ಉಪಯೋಗಗಳನ್ನು ಈ ಕ್ಲೋರೋಪಿನ್ ವಾಟರ್ ಹೊಂದಿದೆ ಎಂಬುದಾಗಿ ಹೇಳಲಾಗುತ್ತಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.