ಕೊಬ್ಬರಿಎಣ್ಣೆಗೆ ನಿಲ್ಲಿಕಾಯ ಪುಡಿಯನ್ನಾಗಲಿ ಅಥವಾ ರಸವನ್ನಾಗಲಿ ಬೆರಸಿ ಕುದಿಸಿ, ನೀರು ಹಿಂಗಿದ ಮೇಲೆ ಒಂದು ಬಾಟಲಿಗೆ ಹಾಕಿಕೊಂಡು ಪ್ರತಿದಿನವೂ ತಲೆಗೆ ಹಚ್ಚುತ್ತಾ ಬಂದರೆ ಸ್ಥಿರವಾದ ಕಪ್ಪುಕೂದಲು ಕಾಂತಿಯುತವಾಗಿರುತ್ತದೆ. ಕೊಬ್ಬರಿಎಣ್ಣೆಯಲ್ಲಾಗಲಿ, ಹಳೆಣ್ಣೆಯಲ್ಲಾಗಲಿ ಅಥವಾ ಎಳ್ಳೆಣ್ಣೆಯಲ್ಲಾಗಲಿ ಅರಿಶಿನವನ್ನು ಹಾಕಿ ಚೆನ್ನಾಗಿ ಕಾಯಿಸಿ ಅದನ್ನು ತಣಿಸಿ ನೆತ್ತಿಗೆ ಚನ್ನಾಗಿ ಉಜ್ಜಿ ಸ್ನಾನ ಮಾಡುವುದರಿಂದ ಕೂದಲು ಹುದುರುವುದು ನಿಂತು, ಸೊಂಪಾಗಿ ಬೆಳೆಯುತ್ತದೆ.
ಹರಳೆಲೆಯನ್ನು ತಂದುಕುತ್ತಿ ಆ ರಸವನ್ನು ಹರಳೆಣ್ಣೆಗೆ ಸೇರಿಸಿ ತಲೆಗೆ ಹಚ್ಚ್ಚಿ ಎರಡು ಗಂಟೆಗಳ ಕಾಲ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಬೆಳ್ಳಗಾಗುವುದು ಮತ್ತು ಅಕಾಲದಲ್ಲಿ ಉದುರುವುದು, ತಲೆಯಲ್ಲಿ ಒಟ್ಟು ಆಗುವುದು ನಿಲ್ಲುತ್ತದೆ.
ಎಳ್ಳೆಲೆಯಲ್ಲಿ ವೀಳ್ಯದೆಲೆಯನ್ನು ನುಣ್ಣಗೆ ಅರೆದು ಮಿಶ್ರಣ ಮಾಡಿ ರಾತ್ರಿ ತಲೆಗೆ ಹಚ್ಚ್ಚಿ ಬೆಳಗ್ಗೆ ಎದ್ದು ಸ್ನಾನ ಮಾಡುವುದರಿಂದ ಹೊಟ್ಟು ಆಗುವುದು, ಕೂದಲು ಹುದುರುವುದು ನಿಂತು ಹೋಗುವುದು. ನೆರೆ ಕೂದಲು ಕಾಣಿಸಿದರೆ ದಂಟಿನ ಸೊಪ್ಪಿನ ರಸವನ್ನು ತೆಗೆದು ತಲೆಗೆ ಹಚ್ಚಿ ಮಾರನೇ ದಿನ ಸ್ನಾನ ಮಾಡುವುದರಿಂದ ಕೂದಲು ಮೃದುವಾಗಿ ರೇಷ್ಮೆಯಂತೆ ಹೊಳೆಯುವುದು.
ಕರಿಲಕ್ಕಿ ಸೊಪ್ಪಿನ ರಸಕ್ಕೆ ಎಳ್ಳೆಣ್ಣೆಯನ್ನು ಹಾಕಿ ಕಾಯಿಸಿ ಕೂದಲಿಗೆ ಪ್ರತಿದಿನವೂ ಹಚ್ಚುತ್ತಾ ಬಂದರೆ ಕೂದಲು ಕಪ್ಪಾಗುವುದು. ತೆಂಗಿನಕಾಯಿ ತುರಿಯ ಜೊತೆಗೆ ನೆನೆಸಿದ ಮ್ಯಾಂಟೆ ಸೇರಿಸಿ ರುಬ್ಬಿ ತಲೆಗೆ ಹಚ್ಚಿಕೊಂಡು ಎರಡು ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ತಲೆಯಲ್ಲಿ ಹೊಟ್ಟು ಮತ್ತು ಹೇನು ಬರುವುದೇ ಇಲ್ಲ.
ಕೂದಲು ಕೆಲವರಿಗೆ ಹುದುರುತ್ತ ಇರುತ್ತದೆ ಅಕಾಲದಲ್ಲಿ ಬಿಳಿಯ ಕೂದಲು ಹುಟ್ಟುತ್ತದೆ. ಆಗ ಬೇವಿನ ಬೀಜಗಳನ್ನು ಅರೆದು ಕೂದಲಿಗೆ ಹಚ್ಚಿಕೊಂಡು ಸಾಯಂಕಾಲದವರೆಗೂ ಇದ್ದು ಬೇವಿನ ಕಷಾಯದಿಂದ ತಲೆ ತೊಳೆಯುತ್ತಿದ್ದರೆ ನರೆತ ಕೂದಲು ಕಪ್ಪಾಗಿ ಹುದುರುವುದು ನಿಂತು ಹೋಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.