ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಕಿಡ್ನಿಗಳನ್ನೂ ಒಮ್ಮೆ ಪರೀಕ್ಷಿಸಿಕೊಳ್ಳಬೇಕು. ಸಮಸ್ಯೆ ಇದ್ದರೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ತಲೆನೋವು ಬರುತ್ತದೆ. ಕೆಲಸ ಮಾಡಿದರೂ, ಮಾಡದಿದ್ದರೂ ಸುಸ್ತಾದಂತೆ ಇರುತ್ತದೆ. ಈ ಲಕ್ಷಣಗಳು ಇದ್ದರೆ ಕಿಡ್ನಿ ಸಮಸ್ಯೆ ಇದೆ ಎಂದು ಅನುಮಾನಿಸಬೇಕು. ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ದೇಹದಲ್ಲಿನ ವ್ಯರ್ಥ ದ್ರವಗಳು ಹಾಗೆಯೇ ಉಳಿಯುತ್ತವೆ. ಅವು ಚರ್ಮದ ಕೆಳೆಗೆ ಸೇರಿ ತುರಿಕೆಯನ್ನು ಉಂಟು ಮಾಡುತ್ತವೆ. ಇದರ ಜತೆಗೆ ಚರ್ಮ ಒಣಗಿದಂತೆ ಕಾಣುತ್ತದೆ.
ಕಿಡ್ನಿಗಳು ಕಾರ್ಯ ಕ್ಷೀಣಿಸಿದರೆ ಬಾಯಿ ದುರ್ವಾಸನೆ ಬರುತ್ತದೆ. ನಾಲಿಗೆ ಲೋಹದ ರುಚಿಯಲ್ಲಿ ಇರುತ್ತದೆ. ಕಿಡ್ನಿಗಳು ಚೆನ್ನಾಗಿ ಕೆಲಸ ಮಾಡದಿದ್ದರೆ ಉಸಿರಾಟ ಸೂಕ್ತ ರೀತಿಯಲ್ಲಿ ಇರಲ್ಲ. ಉಸಿರಾಡುವುದು ಕಷ್ಟಕರವಾಗಿರುತ್ತದೆ. ಹಿಮ್ಮಡಿ, ಕಾಲು, ಕೈಗಳಲ್ಲಿ ದ್ರವಗಳು, ನೀರು ಸಂಗ್ರಹವಾಗಿ ಅವು ಊತಕ್ಕೆ, ನೋವುಗಳಿಗೆ ಒಳಗಾದರೆ ಕಿಡ್ನಿಗಳು ಅನಾರೋಗ್ಯಕ್ಕೆ ಒಳಗಾಗಿವೆ ಎಂದು ತಿಳಿದುಕೊಳ್ಳಬೇಕು. ಈ ರೀತಿ ಲಕ್ಷಣಗಳು ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
ಕಿಡ್ನಿಗಳು ಕೆಟ್ಟರೆ ಯಾವಾಗಲೂ ಬ್ಯಾಕ್ ಪೆಯಿನ್ ಬರುತ್ತಿರುತ್ತದೆ. ಕಿಡ್ನಿಗಳು ಇರುವ ಜಾಗದಲ್ಲಿ ವಿಪರೀತ ನೋವು ಇರುತ್ತದೆ. ಬಗ್ಗಿದರೂ, ಕುಳಿತರೂ ಆ ಜಾಗದಲ್ಲಿ ನೋವು ಅನ್ನಿಸುತ್ತದೆ. ಈ ಲಕ್ಷಣಗಳು ಇದ್ದರೂ ಕಿಡ್ನಿಗಳು ಚೆನ್ನಾಗಿ ಇಲ್ಲ ಎಂದು ತಿಳಿದುಕೊಳ್ಳಬೇಕು.
ಕಿಡ್ನಿಗಳು ಚೆನ್ನಾಗಿ ಕೆಲಸ ಮಾಡದಿದ್ದರೆ ಮೂತ್ರದ ಮೂಲಕ ಪ್ರೋಟೀನ್ ಹೊರಹೋಗುತ್ತದೆ. ಈ ರೀತಿ ಕಣ್ಣುಗಳು ಊದಿಕೊಳ್ಳುತ್ತವೆ, ಉಬ್ಬಿದಂತೆ ಕಾಣುತ್ತವೆ. ಇಂತಹ ಲಕ್ಷಣಗಳು ಇದ್ದರೆ ಕಿಡ್ನಿಗಳ ಆರೋಗ್ಯ ಹದಗೆಟ್ಟಿದೆ ಎಂದು ತಿಳಿಯಬೇಕು. ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಕಾಣಿಸುವ ಇನ್ನೊಂದು ಲಕ್ಷಣ ಹೈ ಬಿಪಿ. ಈ ಸಮಸ್ಯೆ ಇದ್ದರೂ ಕಿಡ್ನಿ ರೋಗ ಎಂದು ಅನುಮಾನಿಸಿ ಪರೀಕ್ಷಿಸಿಕೊಳ್ಳಬೇಕು.
ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಬರುವ ಮೂತ್ರ ದುರ್ವಾಸನೆಯಿಂದ ಕೂಡಿರುತ್ತದೆ. ಇದರ ಜತೆಗೆ ಹೆಚ್ಚು ಮೂತ್ರ ಹೋಗುತ್ತಿರುತ್ತದೆ. ನಿತ್ಯ 4 ರಿಂದ 10 ಸಲ ಮೂತ್ರ ವಿಸರ್ಜನೆ ಸಹಜ. ಇದಕ್ಕಿಂತಲೂ ಹೆಚ್ಚಿನ ಸಲ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಅದನ್ನು ಕಿಡ್ನಿ ಸಮಸ್ಯೆ ಎಂದು ಅನುಮಾನಿಸಬೇಕು. ವೈದ್ಯರನ್ನು ಭೇಟಿಯಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.