ನೀವು ಯಾವಾಗಲಾದ್ರೂ ಬಿಸಿ ನೀರು ಕುಡಿತೀರಾ ಹಾಗಾದ್ರೆ ಈ ವಿಚಾರ ತಿಳಿದಿಕೊಳ್ಳೋದು ತುಂಬ ಮುಖ್ಯ

ಆರೋಗ್ಯ

ಊಟದ ನಂತರ ತಣ್ಣೀರು ಕುಡಿಯುವುದರಿಂದ ಆಹಾರ ಪದಾರ್ಥದಲ್ಲಿ ಇರುವ ಎಣ್ಣೆಯ ಪದಾರ್ಥವು ಗಟ್ಟಿಗೊಳ್ಳುತ್ತದೆ. ಇದರಿಂದ ಕರುಳಿನ ಕೆಳಭಾಗದಲ್ಲಿ ಕೊಬ್ಬಿನಂಶ ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಇದು ದೀರ್ಘಾವಧಿಯ ಕರುಳು ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ದೇಹದ ಎಲ್ಲಾ ಭಾಗದಲ್ಲೂ ರಕ್ತ ಪರಿಚಲನೆಯು ಸುಗಮವಾಗಿ ಆಗುವುದು. ಅಲ್ಲದೆ ಅಪಧಮನಿ ಮತ್ತು ಅಭಿಧಮನಿಗಳ ಕಾರ್ಯವು ಸುಗಮವಾಗುವುದು.ಬೆಳಗ್ಗೆ ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಗ್ರಂಥಿಗಳನ್ನು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಪ್ರಚೋದಿಸುತ್ತದೆ.

ಬೆಚ್ಚಗಿನ ನೀರು ರಕ್ತದ ಹರಿವು ಆರೋಗ್ಯಕರವಾಗಿರುತ್ತದೆ. ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗದು. ಜೊತೆಗೆ ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ದೇಹದಲ್ಲಿ ನೀರಿನ ಕೊರತೆಯು ದೀರ್ಘಾವಧಿಯ ಮಲಬದ್ಧತೆಯನ್ನು ಸೃಷ್ಟಿಸುತ್ತದೆ. ಆಹಾರ ಪದಾರ್ಥಗಳು ಕರುಳಿನಲ್ಲಿ ಸಂಗ್ರಹವಾದಾಗ, ಕರುಳಿನ ಚಲನೆ ನಿಧಾನವಾಗುತ್ತದೆ. ಹೊಟ್ಟೆ ಖಾಲಿ ಇರುವಾಗ ಬೆಚ್ಚಗಿನ ನೀರು ಕುಡಿದರೆ ಜೀರ್ಣ ಕ್ರಿಯೆ ಸುಗಮವಾಗುತ್ತದೆ.

ಋುತುಚಕ್ರದ ಸಮಯದಲ್ಲಿ ಉಂಟಾಗುವ ಸೆಳೆತವನ್ನು ಬಿಸಿ ನೀರು ಕುಡಿಯುವುದರ ಮೂಲಕ ನಿಯಂತ್ರಿಸಬಹುದು. ಸ್ವಲ್ಪ ಜೀರಿಗೆಯನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಮುಟ್ಟಿನ ಸೆಳೆತವು ಕಡಿಮೆಯಾಗುತ್ತದೆ. ಇದು ಕಿಬ್ಬೊಟ್ಟೆಯ ಸ್ನಾಯುಗಳ ಮೇಲೆ ಪರಿಣಾಮ ಬೀರಿ ನೋವನ್ನು ಶಮನಗೊಳಿಸುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *