ಹೌದು ಕೆಲವರಿಗೆ ಪ್ರಯಾಣ ಅಂದ್ರೆ ಸಾಕು ಚಿಂತೆಯಾಗಿಬಿಡುತ್ತದೆ, ಯಾಕೆಂದ್ರೆ ಅವರಿಗೆ ವಾಹನ ಹತ್ತಿದರೆ ಸಾಕು ವಾಂತಿ ಆರಂಭವಾಗಿಬಿಡುತ್ತದೆ. ಈ ಸಮಸ್ಯೆಗೆ ಏನು ಮಾಡಬೇಕು ಅನ್ನುವುದೇ ಒಂದು ದೊಡ್ಡ ಸಮಸ್ಯೆಯಾಗಿ ಉಳಿದುಬಿಡುತ್ತದೆ. ಆದ್ದರಿಂದ ಅದಕ್ಕೆ ಏನು ಕಾರಣ ಇರಬಹುದು ಮತ್ತು ಅದನ್ನು ಹೇಗೆ ತಡೆಯಬಹುದು ಅನ್ನುವುದಕ್ಕೆ ಇಲ್ಲಿದೆ ಸುಲಭ ಪರಿಹಾರ.
ಸಾಮಾನ್ಯವಾಗಿ ಪ್ರಯಾಣ ಮಾಡುವಾಗ ವಾಂತಿ ಬರಲು ಕಾರಣ ನೀವು ಸೇವಿಸಿದಂತ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ಮತ್ತು ಪಿತ್ತ ಸಮಸ್ಯೆ ಏನಾದರು ಇದ್ದರೆ ಅಥವಾ ಪ್ರಯಾಣಿಸುವಾಗ ಬೇರೆ ರೀತಿಯ ವಾಸನೆಗಳಿಂದ ವಾಂತಿ ಬರುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಆದ್ದರಿಂದ ಇದನ್ನು ತಡೆಯುವುದು ಹೇಗೆ ಗೊತ್ತಾ.?
ಪ್ರಯಾಣ ಮಾಡುವ ಮುನ್ನ ಅತಿ ಹೆಚ್ಚು ಊಟ ಸೇವನೆ ಮಾಡುವುದು ಒಳ್ಳೆಯದಲ್ಲ ಇದು ಸರಿಯಾಗಿ ಜೀರ್ಣವಾಗದೇ ವಾಂತಿ ಬರುವಂತೆ ಮಾಡುತ್ತದೆ, ಆದ್ದರಿಂದ ಸುಮಾರಾಗಿ ಆಹಾರವನ್ನು ತಿನ್ನಬೇಕು. ಅಷ್ಟೇ ಅಲ್ಲದೆ ಒಂದು ಕಪ್ ನಿಂಬೆ ಜ್ಯೂಸ್‌ಗೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿದ ಬಳಿಕ ಪ್ರಯಾಣ ಆರಂಭಿಸಬೇಕು.
ಪ್ರಯಾಣ ಮಾಡುವಾಗ ವಾಂತಿಯಾಗೋದನ್ನ ತಡೆಯಲು ಬಾಯಲ್ಲಿ ಒಂದೆರಡು ಪುದಿನಾ ಎಲೆಗಳನ್ನು ಹಾಕಿಕೊಂಡು ಜಗಿಯುತ್ತಾ ಇದ್ರೆ ಒಳ್ಳೆಯದು ಇದ್ರಿಂದ ವಾಂತಿ ಬರುವುದನ್ನು ತಡೆಯುತ್ತದೆ. ಒಂದು ವೇಳೆ ಊಟ ಮಾಡಿದ ಬಳಿಕ ಪ್ರಯಾಣ ಮಾಡುವುದಾದರೆ ಒಂದು ಲೋಟ ಹಸಿ ಶುಂಠಿಯ ಟೀ ಕುಡಿದು ಹೊರಡಬೇಕು. ಇದು ಜೀರ್ಣಕ್ರಿಯೆಗೂ ಉತ್ತಮವಾಗಿದೆ ಮತ್ತು ವಾಂತಿಯಾಗದಂತೆ ಕೂಡ ಸಹಕರಿಸುತ್ತದೆ.
ಬಸ್ ಪ್ರಯಾಣದ ಅವಧಿಗೂ ಮುನ್ನ ಒಂದೆರಡು ಲವಂಗಗಳನ್ನು ಬಾಯಿಗೆ ಹಾಕಿ ಜಗಿಯುತ್ತಿರಬೇಕು. ಪೂರ್ಣ ನೀರಾದ ಬಳಿಕ ನುಂಗಬೇಕು. ಪ್ರಯಾಣದ ಅವಧಿಯಲ್ಲಿ ವಾಕರಿಕೆ ಉಂಟಾದರೆ ಏಲಕ್ಕಿಯೊಂದನ್ನು ಬಾಯಿಗೆ ಹಾಕಿ ಜಗಿಯಲು ಪ್ರಾರಂಭಿಸಬೇಕು. ಇದು ನಿಮಗೆ ವಾಂತಿ ಬರುವ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.