ಅಜೀರ್ಣ ಮತ್ತು ಹೊಟ್ಟೆಯ ಬಾಧೆಗೆ: ಕಾಮಕಸ್ತೂರಿ ಗಿಡದ ಹೂಗಳನ್ನು ನೀರಿನಲ್ಲಿಅರೆದು ಶೋಧಿಸಿ, ಸ್ವಲ್ಪಜೇನು ಕೂಡಿಸಿ ಸೇವಿಸುವುದು. ಒಂದು ವೇಳೆಗೆ ಅರ್ಧಟೀ ಚಮಚ ರಸ ಸಾಕಾಗುವುದು.
ಮಲಬದ್ಧತೆ ಮತ್ತು ಮೂಲವ್ಯಾಧಿಗಳ ನಿವಾರಣೆಗೆ: ಕಾಮಕಸ್ತೂರಿ ಬೀಜಗಳು ಗ್ರಂಧಿಗೆ ಅಂಗಡಿಗಳಲ್ಲಿ ನಮಗೆ ದೊರೆಯುತ್ತದೆ. ಒಂದು ಟೀ ಚಮಚ ಕಾಮಕಸ್ತೂರಿ ನೀರಿನಲ್ಲಿ ನೆನೆಹಾಕಿದಾಗ ಅದು ನೆನೆದು ಲೋಳಿ ಸರದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ. ಇದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುತ್ತಾರೆ. ಇದು ಶರೀರಕ್ಕೆ ತಂಪು ನೀಡುತ್ತವೆ. ಆದ್ದರಿಂದ ಮಲಬದ್ಧತೆ ಮತ್ತು ಮೂಲವ್ಯಾಧಿಗೆ ಉಪಯೋಗಕಾರಿಯಾಗಿದೆ.
ಗಂಟಲು ಬೇನೆ, ರಕ್ತ ಭೇದಿ ನಿವಾರಣೆಗೆ: ಒಂದು ಟೀ ಚಮಚ ಕಾಮಕಸ್ತೂರಿ ನೀರಿನಲ್ಲಿ ನೆನೆಹಾಕಿದಾಗ ಅದು ನೆನೆದು ಲೋಳಿ ಸರದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ. ಇದಕ್ಕೆ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುತ್ತಾರೆ. ಇದು ರಕ್ತ ಭೇದಿಗೆ ಉಪಯೋಗಕಾರಿ. ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ ಜೇನುತುಪ್ಪದಲ್ಲಿ ಬೆರೆಸಿ ನೆಕ್ಕಿದರೆ ಗಂಟಲು ಬೇನೆ ಗುಣಮುಖವಾಗುತ್ತದೆ.
ಗಂಟಲು ಬೇನೆ: ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ, ಜೇನುತುಪ್ಪದಲ್ಲಿ ಬೆರೆಸಿ ನೆಕ್ಕುವುದು. ಮೂಗಿನಿಂದ ನೀರು ಸುರಿಯುವುದು, ಶೀತ ಮತ್ತುಜ್ವರಕ್ಕೆ ಕಾಮಕಸ್ತೂರಿ ಎಲೆಗಳ ಕಷಾಯ ಮಾಡಿ 1/4 ಒಳಲೆ ಕಷಾಯಕ್ಕೆ ಸ್ವಲ್ಪಜೇನು ಸೇರಿಸಿ ಕುಡಿಸುವುದು.
ಬೇಸಿಗೆಯಲ್ಲಿ ತಂಪಾದ ಶರಬತ್ತು ಬಾಯಾರಿಕೆ ಶಮನಕ್ಕೆ: ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಹಾಕಿ ಅದಕ್ಕೆ ಸಕ್ಕರೆ, ಸ್ವಲ್ಪ ಮಂಜುಗಡ್ಡೆ ಪುಡಿ ಬೆರೆಸಿ, ಅದಕ್ಕೆ ಸ್ವಲ್ಪ ಕೇಸರಿ ಬಣ್ಣ ಸೇರಿಸಿ ಶರಬತ್ತು ತಯಾರಿಸುತ್ತಾರೆ. ಇದರಿಂದ ಬಾಯರಿಕೆ ನಿವಾರಣೆಯಾಗುತ್ತದೆ. ಅಲ್ಲದೆ ಇದು ಶರೀರಕ್ಕೆ ತಂಪು ನೀಡುತ್ತವೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.