ಕೆಮ್ಮು ಅಲರ್ಜಿ, ಪಿತ್ತ ಗಂಧೆ, ಕ್ರಿಮಿ ಕೀಟಗಳ ಕಡಿತದ ಉರಿ ನಿವಾರಿಸುವಲ್ಲಿ ಅದ್ಭುತ ಗುಣವುಳ್ಳ ದೊಡ್ಡಪತ್ರೆ.

ಆರೋಗ್ಯ

ಕನ್ನಡದಲ್ಲಿ ದೊಡ್ಡಪತ್ರೆ, ದೊಡ್ಡಿಪತ್ರೆ, ಕರ್ಪೂರಬಳ್ಳಿ, ಸಾಂಬಾರ ಎಲೆ ಎಂದು ಕರೆಯಲ್ಪಡುತ್ತದೆ. ಪರಿಮಳಭರಿತ, ದುಂಡನೆಯ ದಪ್ಪ ಎಲಗಳಿದ್ದು, ಪೊದೆಯಂತೆ ಬೆಳೆಯುವ ಈ ಗಿಡಬನ್ನು ಸಾಮಾನ್ಯವಾಗಿ ಹಿತ್ತಲು, ಅಂಗಳದಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಮುಖ್ಯವಾಗಿ ದಕ್ಷಿಣಭಾರತದಲ್ಲಿ ಇದರ ಬಳಕೆ ಹೆಚ್ವು. ಅಲಂಕಾರಕ್ಕಾಗೂ,ಮನೆಮದ್ದಿಗೂ, ಅಹಾರದಲ್ಲೂ ಇದನ್ನು ಬಳಸಲಾಗುತ್ತದೆ.

ಆರೋಗ್ಯದ ಗಣಿಯಾಗಿರುವ ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ಬೆಳೆಯುವುದರಿಂದ ಹಲವು ರೀತಿಯ ಉಪಯೋಗ ಪಡೆಯಬಹುದು ನೆಗಡಿ, ಕೆಮ್ಮು, ಪಿತ್ತದ ಗಂಧೆ, ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆ ಮುರಿತಗಳಿಗೆ: ದೊಡ್ಡಪತ್ರೆ ರಸ ಒಂದು ಚಮಚ, ಒಂದು ಚಮಚ ಜೇನು ತುಪ್ಪ ಬೆರೆಸಿ ಕುಡಿಯಬೇಕು. ಮಕ್ಕಳಿಗೆ ಅರ್ಧ ಚಮಚ ಕೊಡಬೇಕು.

ಅಜೀರ್ಣಕ್ಕೆ: ದೊಡ್ಡಪತ್ರೆ ರಸ ಒಂದು ಚಮಚ, ಜೀರಿಗೆ ಪೋಡಿ ೨ಗ್ರಾಮ್, ಉಪ್ಪು ೨ಗ್ರಾಮ್ ಬೆರೆಸಿ ಕುಡಿದರೆ ಅಜೀರ್ಣಶಕ್ತಿ ಹೆಚ್ಚುವುದು. ಆಹಾರ ಸೇವನೆಯಲ್ಲಿ ರುಚಿ ಕಂಡುವರುವುದು. ಹೊಟ್ಟೆ ಉಬ್ಬರ, ಹೊಟ್ಟೆಮುರಿತ ನಿವಾರಣೆಯಾಗುವುದು. ಮಕ್ಕಳಿಗೆ ಇದರ ಅರ್ಧ ಭಾಗ ಕೊಡಬೇಕು. ದೊಡ್ಡಪತ್ರೆ ಎಲೆಯನ್ನು ಉಪ್ಪಿನ ಸಹಿತ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ.

ಪಿತ್ತ ಗಂಧೆ: ದೊಡ್ಡಪತ್ರೆ ಎಲೆಗಳನ್ನು ಪೇಸ್ಟಿನಂತೆ ಅರೆದು ಗಂಧ ತಯಾರಿಸಿಕೊಂಡು ಪಿತ್ತದ ಗಂಧೆಗಳಿಗೆ ಸವರಬೇಕು ಮತ್ತು ಎರಡು ಚಮಚ ರಸವನ್ನು ಹೊಟ್ಟೆಗೆ ತೆಗೆದುಕೊಳ್ಳಬೇಕು.

ಅರಿಶಿಣ ಕಾಮಾಲೆಗೆ: ಒಂದು ವಾರದವರೆಗೆ ದೊಡ್ಡ ಪತ್ರೆಯ ಎಲೆಗಳನ್ನು ತಿಂದರೆ ಅರಿಶಿಣ ಕಾಮಾಲೆ ವಾಸಿಯಾಗುತ್ತದೆ.

ಮಕ್ಕಳ ಶೀತ, ನೆಗಡಿ ಕೆಮ್ಮುಗಳಿಗೆ: ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ. ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆ ಬಾಡಿಸಿ ನೆತ್ತಿಯ ಮೇಲೆ ಇಡುತ್ತಾರೆ.

ಚೇಳು ಕಚ್ಚಿದ ಗಾಯಕ್ಕೆ: ಈ ಎಲೆಗಳ ಪೇಸ್ಟ್ ತಯಾರಿಸಿ ಅದನ್ನು ಚೇಳು ಕಚ್ಚಿದ ಗಾಯಕ್ಕೆ ಹಚ್ಚಿದರೆ ನೋವು ದೂರವಾಗುತ್ತದೆ.

ಪಿತ್ತದ ಖಾಯಿಲೆ ನಿವಾರಣೆಗೆ: ದೊಡ್ಡಪತ್ರೆಯನ್ನು ಜೀರಿಗೆ, ಎಳ್ಳಿನೊಂದಿಗೆ ಹುರಿದು ಕಾಯಿತುರಿ ಜೊತೆ ರುಬ್ಬಿ ಅದಕ್ಕೆ ಉಪ್ಪು, ಮಜ್ಜಿಗೆ ಹಾಕಿ ತಂಬುಳಿ ಮಾಡಿ ಕುಡಿದರೆ ಪಿತ್ತದ ಖಾಯಿಲೆಗಳು ಗುಣಮುಖವಾಗುವುದು.

ಹುಳುಕಡ್ಡಿಯ ನಿವಾರಣೆಗೆ: ದೊಡ್ಡ ಪತ್ರೆ ಎಲೆಯನ್ನು ಹುಳುಕಡ್ಡಿಯ ಭಾಗಕ್ಕೆ ತಿಕ್ಕುತ್ತಿದ್ದರೆ ಹುಳುಕಡ್ಡಿಯ ನಿವಾರಣೆ ಸಾಧ್ಯ.

ಕಾಲರಾ ಹತೋಟಿಗೆ ಬರುವುದು: ಇನ್ನು ಎಲೆಗಳ ರಸವನ್ನು ತೆಗೆದು ಗಂಟೆಗೊಮ್ಮೆ ಒಂದು ಚಮಚದಷ್ಟು ಕಾಯಿಸಿ ಆರಿಸಿದ ನೀರಿನಲ್ಲಿ ಹಾಕಿ ಕುಡಿದರೆ ಕಾಲರಾ ಹತೋಟಿಗೆ ಬರುವುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *