ಸ್ವಲ್ಪ ಬೆಲ್ಲದ ತುಂಡನ್ನು ಊಟ ಆದ ಮೇಲೆ ತಿಂದರೆ ಆಗುವ ಆರೋಗ್ಯ ಲಾಭಗಳು ಗೊತ್ತಾದ್ರೆ ಬೆಲ್ಲ ಎಲ್ಲಿದ್ದರೂ ಬಿಡಲ್ಲ ನೀವು

ಆರೋಗ್ಯ

ಸ್ನೇಹಿತರೆ ಹಿಂದಿನ ಕಾಲದಲ್ಲಿ ನಾವು ಪೂರ್ವಿಕರು ಯಾವುದನ್ನು ಅರಿತುಕೊಳ್ಳದೆ ಏನನ್ನು ಹೇಳುವುದಿಲ್ಲ. ಹಾಗೆ ಯಾವುದನ್ನು ತಿಳಿದುಕೊಳ್ಳದೆ ಯಾವ ಕೆಲಸವನ್ನು ಸಹ ಮಾಡುವುದಿಲ್ಲ. ಹಿರಿಯರು ಹೇಳಿದ್ದೆಲ್ಲವೂ ನಿಜವಾಗಿರುತ್ತದೆ. ಮತ್ತು ಅವರು ಹೇಳಿರುವ ಮಾತುಗಳು ಸಹ ನಿಜವಾಗಿದೆ. ಅದರಲ್ಲೂ ಊಟ ಆದಮೇಲೆ ಬೆಲ್ಲವನ್ನು ತಿಂದರೆ ಆರೋಗ್ಯದ ಮಹತ್ವ ಗಳು ಸಿಗುತ್ತದೆ ಎಂದು ಹೇಳಿರುವುದು ಕೂಡ ಸುಳ್ಳಲ್ಲ.

ಇದನ್ನು ತಿಂದರೆ ಸಾಕಷ್ಟು ಆರೋಗ್ಯದ ಪ್ರಯೋಜನಗಳನ್ನು ದೇಹಕ್ಕೆ ಸಿಗುತ್ತದೆ ಎಂದು ಹೇಳಬಹುದು. ಸಾಮಾನ್ಯವಾಗಿ ಕೆಲವರು ಊಟ ಆದ ಮೇಲೆ ಸ್ವಲ್ಪ ಬೆಲ್ಲದ ತುಂಡನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಹೀಗೆ ಇದನ್ನು ಏಕೆ ತಿನ್ನುತ್ತಾರೆ ಎಂದು ಕೆಲವರಿಗೆ ಗೊತ್ತೇ ಇರುವುದಿಲ್ಲ. ಹಾಗಾದರೆ ಊಟ ಆದಮೇಲೆ ಬೆಲ್ಲವನ್ನು ತಿಂದರೆ ಏನೆಲ್ಲ ಪ್ರಯೋಜನಗಳು ಸಿಗುತ್ತವೆ ಎಂದು ತಿಳಿದುಕೊಳ್ಳೋಣ ಬನ್ನಿ.

ಚಳಿಗಾಲದಲ್ಲಿ ಬೆಲ್ಲವನ್ನು ತಿಂದರೆ ಇದರಲ್ಲಿರುವ ವಿಟಮಿನ್ಸ್ ಮತ್ತು ಲವಣಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಬೆಚ್ಚಗಿಡುವ ಅಂತೆ ಸಹಾಯಮಾಡುತ್ತದೆ. ಹಾಗೆ ಬೆಲ್ಲವನ್ನು ತಿಂದರೆ ಶೀತ, ಕಫ, ನೆಗಡಿ, ಕೆಮ್ಮಿನ ಸಮಸ್ಯೆಗಳು ದೂರವಾಗುತ್ತದೆ. ಇನ್ನು ಊಟ ಆದಮೇಲೆ ಬೆಲ್ಲವನ್ನು ತಿಂದರೆ ಬೆಲ್ಲವು ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೆ ಇದನ್ನು ಊಟ ಆದಮೇಲೆ ತಿಂದರೆ ಆರೋಗ್ಯಕ್ಕೆ ತುಂಬಾ ಅತ್ಯುತ್ತಮ ಎಂದು ಹೇಳಬಹುದು.

ಬೆಲ್ಲವನ್ನು ಸೇವಿಸಿದರೆ ಮೂತ್ರಪಿಂಡ ಗಳಲ್ಲಿರುವ ವಿಷದ ರಾಸಾಯನಿಕಗಳನ್ನು ದೇಹದಿಂದ ಹೊರಗೆ ಹಾಕುತ್ತದೆ. ಬೆಲ್ಲದಲ್ಲಿ ಆಂಟಿಆಕ್ಸಿಡೆಂಟ್, ಸೆಲೆನಿಯಂ ಲವಣಗಳು, ಝಿಂಕ್ ಮಿನರಲ್ಸ್ ತುಂಬಾ ಹೇರಳವಾಗಿರುವುದರಿಂದ ವಿವಿಧ ರೀತಿಯ ಸೋಂಕುಗಳ ವಿರುದ್ಧ ಹೋರಾಡಿ ರಕ್ತದಲ್ಲಿರುವ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *