ಸೊಳ್ಳೆಗಳನ್ನು ಓಡಿಸಲು ಕಿಮಿಕಲ್ ಯುಕ್ತ All Out, Good night, ಗಳನ್ನು ಕೊಂಡು ಕೊಳ್ಳುವುದರಿಂದ ಅದರ ವಾಸನೆ ನಿಮ್ಮ ಉಸಿರಾಟದಲ್ಲಿ ತೊಂದರೆಯನ್ನು ಉಂಟು ಮಾಡುತ್ತವೆ, ಅದಕ್ಕಾಗಿ ನೀವು ಮನೆಯಲ್ಲಿಯೇ ಸ್ವದೇಶಿ ಪರಿಸ ಸ್ನೇಹಿಯಾದ ಕೀಟ ನಾಶಕವನ್ನು ನೀವೇ ಮನೆಯಲ್ಲಿ ತಯಾರಿಸುವುದನ್ನು ತಿಳಿಸುತ್ತೇವೆ, ಇದಕ್ಕಾಗಿ ಆಲ್ ಔಟ್, ಗುಡ್ ನೈಟ್ ಗಳ ಹಳೇ ರೀಫಿಲ್ ಇದ್ದರೆ ಸಾಕು.
ಹಳೆಯ ಆಲ್ ಔಟ್, ಗುಡ್ ನೈಟ್ ಗಳ ರೀಫಿಲ್ ತೆಗೆದು ಕೊಂಡು ಅವುಗಳ ಮುಚ್ಚಳಿಕೆ ತೆಗೆಯಬೇಕು. ಹಾಗೆ ಖಾಲಿಯಾಗಿರುವ ರೀಫಿಲ್’ನಲ್ಲಿ ಮೂರು ನಾಲ್ಕು ಪೂಜೆಗೆ ಉಪಯೋಗಿಸುವ ಕರ್ಪೂರದ ಗುಳಿಗೆಗಳನ್ನು ಹಾಕಿ, ಅವು ಮುಳುಗುವಂತೆ ಬೇವಿನ ಎಣ್ಣೆಯನ್ನು ಹಾಕುವುದು. ರೀಫಿಲ್’ನಿಂದ ತೆಗೆದ ಮುಚ್ಚಳವನ್ನು ಮತ್ತೆ ಮುಚ್ಚಬೇಕು.
ಸಾಮಾನ್ಯ ರೀಫಿಲ್’ಗಳನ್ನು ಹೇಗೆ ಬಳಸುತ್ತೇವೋ ಹಾಗೆ ಇವುಗಳನ್ನು ಸಹ ಮಿಶನ್’ನಲ್ಲಿ ಫಿಕ್ಸ್ ಮಾಡಿ ಸ್ವಿಚ್ ಆನ್ ಮಾಡಿದರೆ ಸಾಕು. ಸ್ವಂತವಾಗಿ ತಯಾರಿಸಿಕೊಂಡಂತಹ ಸೊಳ್ಳೆಗಳ ನಿವಾರಕಗಳಿಂದ ಉಂಟಾಗುವ ಲಾಭಗಳು.
೧೦೦% ಪರಿಸರ ಸ್ನೇಹಿ ಯಾವುದೇ ಕೆಮಿಕಲ್ಸ್ ಗಳನ್ನು ಸೇರಿಸಿಲ್ಲವಾದ್ದರಿಂದ ಆರೋಗ್ಯ ಉತ್ತಮವಾಗಿರುತ್ತದೆ, ಕರ್ಪೂರದ ವಾಸನೆಯಿಂದ ಉಸಿರಾಟ ಸಮಸ್ಯೆ ನಿವಾರಣೆಯಾಗುತ್ತದೆ, ಬೇವಿನ ಎಣ್ಣೆಯ ವಾಸನೆಯಿಂದ ಶರೀರದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ, ಕೃತಕ ಸೊಳ್ಳೆ ನಿವಾರಕಗಳಿಂದ ಉಸಿರಾಟಕ್ಕೆ ಸಂಬಂಧಿಸಿದ ರೋಗಗಳು ಬರುವ ಅವಕಾಶವಿರುತ್ತದೆ ಆದರೆ ನೀವು ತಯಾರಿಸಿದ ನಿವಾರಕದಿಂದ ಎಂತಹ ಕಾಯಿಲೆಗಳು ಬರುವುದಿಲ್ಲ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.