ಬರಿ 5 ದಿನದಲ್ಲಿ ಕಿಡ್ನಿಯಲ್ಲಿನ ಕಲ್ಲು ಕರಗಿಸುತ್ತೆ ಈ ಗಿಡದ ಎಲೆ

ಆರೋಗ್ಯ

ಗಿಡಮೂಲಿಕೆಗಳಲ್ಲಿ ಔಷಧೀಯ ಗುಣಗಳಿದ್ದು ಒಂದೊಂದು ಗಿಡಮೂಲಿಕೆಯು ಒಂದೊಂದು ವಿಶಿಷ್ಟ ಗುಣಗಳನ್ನು ಹೊಂದಿರುತ್ತದೆ. ಇಂತಹುದೇ ಒಂದು ಗಿಡಮೂಲಕೆಯ ಸಹಾಯದಿಂದ ಶಸ್ತ್ರಚಿಕಿತ್ಸೆ ಇಲ್ಲದೆ, ನೋವಿಲ್ಲದೆ ಕಿಡ್ನಿಯಲ್ಲಿ ಕಲ್ಲು ಕರಗುವಂತಹ ವಿಧಾನವಿದೆ. ಕಿಡ್ನಿಯಲ್ಲಿ ಕಲ್ಲು ಬೆಳೆದಾಗ ಅತಿಯಾದ ಹೊಟ್ಟೆ ನೋವು ಅನುಭವಿಸಬೇಕಾಗುತ್ತದೆ. ಕೆಲವೊಬ್ಬರಲ್ಲಿ 5 ಮಿಲಿಮೀಟರ್ ಗಿಂತಲೂ ದೊಡ್ಡದಾದ ಕಲ್ಲುಗಳು ಬೆಳೆಯುತ್ತವೆ ಇಂತಹ ಸಂದರ್ಭದಲ್ಲಿ ವೈದ್ಯರು ಔಷಧಿಗಳಿಂದ ಕಲ್ಲನ್ನು ಕರಗಿಸಲು ಸಾಧ್ಯವಿಲ್ಲದಿದ್ದಾಗ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ, ಅಂತವರು ಈ ಮನೆ ಮದ್ದನ್ನು ಉಪಯೋಗಿಸಬೇಕು. ಕೆಲವರಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇರುವುದಿಲ್ಲ. ಅವರಿಗೆ ವೈದ್ಯರು ನೀಡುವ ಔಷಧಿಯ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಅಂತವರು ಈ ಮನೆ ಮದ್ದನ್ನು ತೆಗೆದುಕೊಳ್ಳಬಾರದು ಏಕೆಂದರೆ ಇಲ್ಲಿ ಬಳಸುವ ಎಲೆಯು ತುಂಬಾ ಉಷ್ಣವಾಗಿರುತ್ತದೆ.

ಈ ಮನೆ ಮದ್ದಿನಲ್ಲಿ ಬಳಸುವ ಎಲೆಯನ್ನು ಕಾಡುಬಸಳೆ ಅಥವಾ ಪರ್ಣ ಬೀಜ ಹಾಗೂ ಸಂಸ್ಕೃತದಲ್ಲಿ ಅಸ್ತಿಭಕ್ಷ ಎಂದು ಕರೆಯುತ್ತಾರೆ. ಸೈಂಧವ ಲವಣವನ್ನು ಕೂಡ ಈ ಔಷಧಿಯಲ್ಲಿ ಬಳಸುತ್ತಾರೆ. ಸೈಂಧವ ಲವಣ ಒಂದು ಬಗೆಯ ಉಪ್ಪಾಗಿದ್ದು ಎಲ್ಲಾ ಉಪ್ಪಿಗಿಂತ ಇದು ಶ್ರೇಷ್ಠವಾಗಿದೆ. ವಾತ ಇದ್ದವರು ಈ ಉಪ್ಪನ್ನು ಬಳಸುವುದರಿಂದ ವಾತ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಉಪ್ಪಿನಲ್ಲಿ ಔಷಧೀಯ ಗುಣವಿದ್ದು ವಾರದಲ್ಲಿ ಒಂದು ದಿನ ಉಪಯೋಗಿಸುವುದರಿಂದ ಹೃದಯಾಘಾತ ಆಗುವುದನ್ನು ತಪ್ಪಿಸಬಹುದು ಹಾಗೂ ಹೃದಯ ಸಂಬಂಧಿ ಖಾಯಿಲೆಗಳು ಬರದಂತೆ ತಡೆಯಲು ಸಹಾಯ ಮಾಡುತ್ತದೆ. ಇದನ್ನು ಪಿಂಕ್ ಸಾಲ್ಟ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ಇದು ಸಾಧಾರಣ ಉಪ್ಪಿಗಿಂತ ಸ್ವಲ್ಪ ದುಬಾರಿಯಾಗಿರುತ್ತದೆ.

ದೊಡ್ಡದಾದ ಒಂದು ಕಾಡು ಬಸಳೆ ಎಲೆಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ಅದರ ಮೇಲೆ ಆರೇಳು ಕಾಳು ಸೈಂಧವ ಲವಣವನ್ನು ಹಾಕಬೇಕು. ಕಲ್ಲು ಸೈಂಧವ ಲವಣವನ್ನು ಬಳಸುವುದು ಉತ್ತಮ. ಎರಡರಿಂದ ಮೂರು ಕರಿ ಮೆಣಸನ್ನು ಹಾಕಿ ಎಲೆಗಳನ್ನು ಮುಚ್ಚಿ ಬಾಯಲ್ಲಿ ಅಗೆದು ಅದರ ರಸವನ್ನು ನುಂಗುತ್ತಾ ತಿನ್ನಬೇಕು. ಸುಮಾರು ನಲವತ್ತೈದು ನಿಮಿಷಗಳ ನಂತರ ಎಳೆ ನೀರನ್ನು ಕುಡಿಯಬೇಕು. ದಿನಕ್ಕೆ 5 ಎಳನೀರನ್ನು ಕಡ್ಡಾಯವಾಗಿ ಕುಡಿಯಬೇಕು. ಈ ಮನೆಮದ್ದನ್ನು ಪ್ರಾರಂಭಿಸಿದ ದಿನದಿಂದ 5 ದಿನದವರೆಗೆ ಪ್ರತಿನಿತ್ಯ ಎಳೆನೀರನ್ನು ಕುಡಿಯಬೇಕು. ಮೂರು ದಿನಗಳ ನಂತರ ಹೋಗಿ ಸ್ಕ್ಯಾನ್ ಮಾಡಿಸಿದಾಗ ಕಿಡ್ನಿಯ ಕಲ್ಲುಗಳು ಇರುವುದಿಲ್ಲ. ಒಂದು ಬಟ್ಟೆ ಇಟ್ಟು ಅದರ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ ಕಿಡ್ನಿಯ ಕಲ್ಲು ಪುಡಿ ಪುಡಿಯಾಗಿ ಇರುವುದನ್ನು ಬಟ್ಟೆಯ ಮೇಲೆ ಕಾಣಬಹುದು. ಕಾಡು ಬಸಳೆಯನ್ನು ಮನೆಯಲ್ಲಿ ಸುಲಭವಾಗಿ ಬೆಳೆಸಬಹುದು. ಪ್ರತಿಯೊಂದು ಆರೋಗ್ಯ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಒಂದೇ ಪರಿಹಾರವಲ್ಲ. ನಮ್ಮ ಆಯುರ್ವೇದದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅಡ್ಡ ಪರಿಣಾಮವಿಲ್ಲದ ಔಷಧಿಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಉತ್ತಮ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಮತ್ತು ಇದರ ಸರಿಯಾದ ಉಪಯೋಗ ಪಡೆಯಿರಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *