ಟೊಮ್ಯಾಟೋ ರಸ ಅಥವಾ ನಿಂಬೆರಸ ಮೊಡವೆಗೆ ಲೇಪಿಸಿ 1/2 ಗಂಟೆಯ ಬಳಿಕ ಹೆಸರು ಹಿಟ್ಟು ಮತ್ತು ಕಡಲೆಹಿಟ್ಟಿನ ಮಿಶ್ರಣದಿಂದ ಮುಖ ತೊಳೆದರೆ ಮೊಡವೆ, ಮೊಡವೆ ಕಲೆ ನಿವಾರಣೆಯಾಗುತ್ತವೆ. ಮೊಸರು, ಆಲಿವ್‌ತೈಲ ಹಾಗೂ ಅರಸಿನ ಹುಡಿಯ ಮಿಶ್ರಣದಿಂದ ಫೇಸ್‌ಪ್ಯಾಕ್ ಮಾಡಬೇಕು. 20 ನಿಮಿಷದ ಬಳಿಕ ತೊಳೆದರೆ ಮೊಡವೆ ಹಾಗೂ ಕಲೆ ಶಮನವಾಗುತ್ತದೆ.
ಗುಲಾಬಿಯ ಪಕಳೆ 6, ನಿಂಬೆರಸ 6 ಹನಿ, ಅರಸಿನ ಹುಡಿ 2 ಚಿಟಿಕೆ, ಜೇನು 1 ಚಮಚ, ಹೆಸರುಹಿಟ್ಟು 2 ಚಮಚ ಇವೆಲ್ಲವನ್ನೂ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಫೇಸ್‌ಪ್ಯಾಕ್ ಮಾಡಿ, 20 ನಿಮಿಷದ ಬಳಿಕ ತೊಳೆದರೆ ಮೊಡವೆ ಕಲೆಗಳು ನಿವಾರಣೆಯಾಗಿ ಮೊಗ ಕಾಂತಿಯುತವಾಗುತ್ತದೆ. ಹಸಿ ಪಪ್ಪಾಯದ ಪೇಸ್ಟನ್ನು ಮುಖಕ್ಕೆ ಲೇಪಿಸಿ 15 ನಿಮಿಷಗಳ ಬಳಿಕ ತೊಳೆದರೆ ಮುಖದ ಮೊಡವೆ ಹಾಗೂ ಕಲೆಗಳು ನಿವಾರಣೆಯಾಗುತ್ತವೆ.
ಎಳನೀರನ್ನು ಹತ್ತಿಯ ಉಂಡೆಯಿಂದ ಮೊಡವೆಯ ಕಲೆ ಇರುವ ಭಾಗದಲ್ಲಿ ಆಗಾಗ್ಗೆ ಲೇಪಿಸುತ್ತಿದ್ದರೆ, ಕಲೆ ನಿವಾರಣೆಯಾಗುತ್ತದೆ. ಜಾಜಿ ಅಥವಾ ಮಲ್ಲಿಗೆ ಹೂವನ್ನು ಹಾಲಲ್ಲಿ ನೆನೆಸಿಟ್ಟು ಬಾದಾಮಿಯ ಜೊತೆ ಅರೆಯಬೇಕು. ಈ ಲೇಪವನ್ನು ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ತೊಳೆದರೆ ಮೊಡವೆ ಕಲೆ ಶಮನಕಾರಿ.
ಯಾವುದೇ ಫೇಸ್‌ಪ್ಯಾಕ್ ಬಳಸುವಾಗ ನೀರಿನ ಬದಲು ಟೊಮ್ಯಾಟೊ ರಸ ಬಳಸಿದರೆ ಮೊಡವೆಗಳು ಶೀಘ್ರ ಶಮನವಾಗುತ್ತವೆ. ಹಲಸಿನ ಎಲೆಯನ್ನು ಸುಟ್ಟು ಕರಕು ಮಾಡಿ ಮೊಡವೆಗೆ ಲೇಪಿಸಿದರೆ ಮೊಡವೆ ಮಾಯುತ್ತದೆ. ಈರುಳ್ಳಿ ರಸಕ್ಕೆ ಜೇನು ಬೆರೆಸಿ ಲೇಪಿಸಿದರೆ ಮೊಡವೆಯ ಕಲೆಗಳು ನಿವಾರಣೆಯಾಗುತ್ತವೆ. ಹುಣಸೇ ಬೀಜವನ್ನು ನಿಂಬೆರಸದಲ್ಲಿ ತೇದು ಲೇಪಿಸಿದರೆ ಮೊಡವೆ ಶಮನವಾಗುತ್ತದೆ.
ಕುಂಬಳಕಾಯಿಯ ಸೊಪ್ಪಿನ ರಸಕ್ಕೆ ಶುದ್ಧ ಜೇನು ಬೆರೆಸಿ ಮೊಡವೆ ಇರುವ ಭಾಗದಲ್ಲಿ ಲೇಪಿಸಿದರೆ ಮೊಡವೆ ಬೇಗನೆ ಮಾಯುತ್ತದೆ. ಮಂಜುಗಡ್ಡೆಯನ್ನು ತೆಳ್ಳಗಿನ ಬಟ್ಟೆಯಲ್ಲಿ ಸುತ್ತಿ ಅದನ್ನು ಮೊಡವೆ ಮತ್ತು ಕಲೆ ಇರುವ ಭಾಗದಲ್ಲಿ ಮೃದುವಾಗಿ ಮಾಲೀಶು ಮಾಡಿದರೆ ಮೊಡವೆ ಮತ್ತು ಕಲೆಗಳು ನಿವಾರಣೆಯಾಗುತ್ತವೆ.
ಉಂಡೆಯಲ್ಲಿ ತಾಜಾ ನಿಂಬೆರಸವನ್ನು ಅದ್ದಿ ರಾತ್ರಿ, ಅದನ್ನು ಮೊಡವೆಯ ಭಾಗಕ್ಕೆ ಲೇಪಿಸಿ ಮರುದಿನ ತೊಳೆಯಬೇಕು. ಇದು ಮೊಡವೆ ಶೀಘ್ರ ಮಾಯಲು ಸಹಕಾರಿ. ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ಮೊಡವೆ ಹಾಗೂ ಕಲೆಗಳ ಭಾಗವನ್ನು 5-10 ನಿಮಿಷ ಮಾಲೀಶು ಮಾಡಿದರೆ ಮೊಡವೆ ಹಾಗೂ ಕಲೆಗಳು ನಿವಾರಣೆಯಾಗುತ್ತವೆ.
ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ತುರಿದು, ಆ ಹಸಿ ಆಲೂಗಡ್ಡೆಯ ತುರಿಯನ್ನು 10 ನಿಮಿಷ ಮುಖಕ್ಕೆ ಮಾಲೀಶು ಮಾಡಿದರೆ ಮೊಡವೆಯ ಕಲೆಗಳು ನಿವಾರಣೆಯಾಗಿ ಮುಖದ ಕಾಂತಿ ವರ್ಧಿಸುತ್ತದೆ.
ಟೂತ್‌ಪೇಸ್ಟ್‌ನ ಬಿಳಿಭಾಗದಲ್ಲಿ ಬೇಕಿಂಗ್ ಸೋಡಾ ಹಾಗೂ ಹೈಡ್ರೋಜನ್ ಪೆರಾಕ್ಸೆ„ಡ್‌ಗಳು ಇರುವುದರಿಂದ ಮೊಡವೆ ಇರುವ ಭಾಗಕ್ಕೆ ಟೂತ್‌ಪೇಸ್ಟ್ ಲೇಪಿಸಿ 10 ನಿಮಿಷಗಳ ಬಳಿಕ ತೊಳೆದರೆ ಮೊಡವೆ ಶಮನವಾಗುತ್ತದೆ.
ಶುದ್ಧ ಕುಂಕುಮವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಮೊಡವೆ, ಮೊಡವೆ ಕಲೆ ಇರುವ ಭಾಗಕ್ಕೆ ಲೇಪಿಸಿದರೆ ಮೊಡವೆ ಮಾಯುತ್ತದೆ. ಕಲೆ ನಿವಾರಣೆಯಾಗುತ್ತದೆ. ಹಾಲು ಅರಸಿನ ಹುಡಿ ಮತ್ತು ಶ್ರೀಗಂಧ ಹುಡಿ ಬೆರೆಸಿ ಮೊಡವೆ ಹಾಗೂ ಕಲೆ ಇರುವ ಕಡೆಗೆ ಲೇಪಿಸಿದರೆ ಮೊಡವೆ ಕಲೆ ನಿವಾರಣೆಯಾಗಿ ಮುಖ ಕಾಂತಿಯುತವಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.