ಸೋರಿಯಾಸಿಸ್ ಒಂದು ಆಟೋ ಇಮ್ಮ್ಯೂನಿಟಿ ಇಂದ ಬರುವಂತಹ ಚರ್ಮ ಖಾಯಿಲೆಯಾಗಿದ್ದು ಬೆನ್ನು, ಮೊಣಕೈ, ಮೊಣಕಾಲು,ಕತ್ತು, ತಲೆಯ ಮೇಲೆ ಕೆಂಪು ತೇಪೆಗಳು ಉಂಟಾಗಿ ಅದರ ಮೇಲೆ ಬಿಳಿ ಪದರ ಏರ್ಪಟ್ಟು ಚರ್ಮ ಒರಟಾಗುತ್ತದೆ. ತುರಿಕೆ,ನವೆಗಳ ಕಾರಣದಿಂದ ತೇಪೆಗಳು ಅಧಿಕವಾಗಿ ರಕ್ತಸ್ರಾವ ಉಂಟಾಗಬಹುದು. ಕೆಲವೊಮ್ಮೆ ತೇಪೆಗಳು ೪ ಇಂಚಿನಷ್ಟು ದೊಡ್ಡದಾಗುತ್ತವೆ. ಇದರ ಜೊತೆಗೆ ಸಂಧಿವಾತಗಳು ಉಂಟಾದಲ್ಲಿ ಸೋರಿಯಾಟಿಕ್ ಆರ್ಥ್ರೈಟಿಸ್ ಎನ್ನುತ್ತೇವೆ.
ಈ ಖಾಯಿಲೆಯ ಮೂಲ ಕಾರಣ ತಿಳಿದಿಲ್ಲವಾದರೂ ಅನುವಂಶಿಕತೆ, ಒತ್ತಡ, ಸ್ತೂಲಕಾಯ, ಮಧುಮೇಹ, ನಿರಂತರ ವಾತಾವರಣ ಬದಲಾವಣೆ, ಇನ್ಫೆಕ್ಷನ್, HIV , ವಿಟಮಿನ್ ಡಿ ಕೊರತೆ, ಮಾತ್ರೆ/ಔಷಧಿಗಳ ಅಡ್ಡಪರಿಣಾಮಗಳಿಂದ ಇದರ ಸಂಭಾವ್ಯ ಹೆಚ್ಚು ಎಂಬುದು ಸಂಶೋಧನೆಗಳಿಂದ ತಿಳಿದುಪಟ್ಟಿದೆ.
ಈ ಖಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿದ್ರೆ ನಿಯಂತ್ರಿಸಬಹುದು: ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ. ಇದರಿಂದ ಚರ್ಮದಲ್ಲಿರುವ ಎಣ್ಣೆಯ ಅಂಶ ಕಡಿಮೆಯಾಗಿ ಒರಟುತನ, ಕೆರೆತ ಹೆಚ್ಚಾಗುತ್ತದೆ. ಆದ್ದರಿಂದ ಆದಷ್ಟು ಬೆಚ್ಚಗಿನ/ತಣ್ಣನೆಯ ನೀರನ್ನೇ ಬಳಸಿ. ಸ್ನಾನದ ನೀರಿಗೆ ೨ ಚಮಚ ಎಪ್ಸಮ್ ಸಾಲ್ಟ್ ಬೆರೆಸಿ ಸ್ನಾನ ಮಾಡಿದ್ದಲ್ಲಿ ಉರಿ, ನವೆ ಕಡಿಮೆಯಾಗುತ್ತದೆ. ಸ್ನಾನದ ನೀರಿಗೆ ಆಲಿವ್ ಆಯಿಲ್/ಓಟ್ಸ್ ಪುಡಿ ಬೆರೆಸಿ ಸ್ನಾನ ಮಾಡಿದ್ದಲ್ಲಿ ಚರ್ಮ ಮೃದುವಾಗುತ್ತದೆ.
ಸ್ನಾನ ಮಾಡಿದ ನಂತರ ತೇಪೆಗಳ ಜಾಗಕ್ಕೆ ಟಿ ಟ್ರೀ ಎಣ್ಣೆಯನ್ನು ಹಚ್ಚಿದ್ದಲ್ಲಿ ಉರಿ, ಕೆರೆತ ನಿಂತು ಚರ್ಮ ಮೃದುವಾಗುತ್ತದೆ. ಪೆಟ್ರೋಲಿಯಂ, ಕ್ಯಾಪ್ಸಸಿನ್, ಅಲೋವೆರಾ ಉಳ್ಳ ಕ್ರೀಮ್ ಗಳನ್ನೂ ಹಚ್ಚಿದ್ದಲ್ಲಿ ಪ್ಯಾಚ್ ಗಳು ಕಡಿಮೆಯಾಗುತ್ತವೆ. ಮಲಗುವ ಮುಂಚೆ ಬೆಣ್ಣೆಯನ್ನು ಅರಿಶಿನದಲ್ಲಿ ಬೆರೆಸಿ ತೇಪೆಗಳಿಗೆ ಹಚ್ಚಿ ಅದನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿ ರಾತ್ರಿಯೆಲ್ಲ ಹಾಗೆ ಬಿಡಿ. ಇದರಿಂದ ಅದರಲ್ಲಿರುವ ರಾಸಾಯಿನಕಗಳು ಚರ್ಮವನ್ನು ಪ್ರವೇಶಿಸಿ ಚರ್ಮವನ್ನು ಮೃದುಗೊಳಿಸಿ ಕಲೆಗಳನ್ನು ಕಡಿಮೆ ಮಾಡುತ್ತದೆ.
ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ರಾಸಾಯನಿಕವಿದ್ದು ಆಂಟಿ ಇಂಪ್ಲಾಮೇಟರಿ ಗುಣಗಳನ್ನು ಹೊಂದಿದೆ. ದಿನಕ್ಕೆ ೩ಗ್ರಾಮ್ನಷ್ಟು ಅರಿಶಿನವನ್ನು ಸೇವಿಸುತ್ತಾ ಬಂದಲ್ಲಿ ರೋಗವನ್ನು ತಡೆಗಟ್ಟಬಹುದು.
ಒಮೇಗಾ ೩ ಫ್ಯಾಟಿ ಆಸಿಡ್ ಗಳು ಜೀವಕೋಶಗಳ ಉರಿಯನ್ನು ಕಡಿಮೆ ಮಾಡಿ ರೋಗ ನಿರೋಧಕ ಶಕ್ತಿಯು ಅಧಿಕವಾಗದಂತೆ ತಡೆಗಟ್ಟುತ್ತದೆ. ಆದ್ದರಿಂದ ಒಮೇಗಾ ೩ ಉಳ್ಳ ಆಹಾರಗಳಾದ ಮೀನು, ಮೀನಿನ ಎಣ್ಣೆ, ಅಗಸೆ ಬೀಜ, ನಟ್ಸ್ ಗಳನ್ನು ಯಥೇಚ್ಛವಾಗಿ ಸೇವಿಸಿ. ಅಧಿಕ ಹಣ್ಣು ಮತ್ತು ಹಸಿತರಕಾರಿಗಳ ಸೇವನೆಯನ್ನು ಮಾಡಿ. ವಿಟಮಿನ್ ಸಿ ಯುಕ್ತ ಪದಾರ್ಥಗಳಿಂದ ದೂರವಿರಿ.
ದಿನವೂ ಕನಿಷ್ಠ ೧೦ ನಿಮಿಷ ಸೂರ್ಯನ ಬಿಸಿಲಿಗೆ ಮೈಯೊಡ್ಡಿ.ಅಲ್ಟ್ರ ವೊಯಿಲೆಟ್ ಕಿರಣಗಳು ದೇಹವನ್ನು ಪ್ರವೇಶಿಸಿ ವಿಟಮಿನ್ ಡಿ ಉತ್ಪಾದಿಸುವುದರಿಂದ ಸೋರಿಯಾಸಿಸ್ ತಡೆಗಟ್ಟಬಹುದು.
ದಿನವು ಕನಿಷ್ಠ ಒಂದು ಗಂಟೆ ಯೋಗ ಮತ್ತು ಪ್ರಾಣಾಯಾಮಗಳಿಗೆ ಮೀಸಲಿಡಿ. ಇದರಿಂದ ಒತ್ತಡ ಕಡಿಮೆಯಾಗುವುದಲ್ಲದೆ ಚರ್ಮಕ್ಕೆ ಅಧಿಕ ರಕ್ತಸಂಚಾರ ಉಂಟಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.