ಅಯ್ಯೋ ಎಷ್ಟೇ ಡಯಟ್ ಮಾಡಿದ್ರು, ಎಷ್ಟೇ ವರ್ಕೌಟ್ ಮಾಡಿದ್ರೂ ಸಣ್ಣ ಅಗ್ತಾ ಇಲ್ಲ ಯೋಚನೆ ಬಿಡಿ ಈ ವಿಧಾನ ಅನುಸರಿಸಿ ಸಾಕು

ಆರೋಗ್ಯ

ನೀವು ತಿನ್ನುವ ಆಹಾರವನ್ನು ಬದಲಿಸುವ ಮತ್ತು ದೈಹಿಕ ವ್ಯಾಯಾಮದ ಹೊರತಾಗಿಯೂ, ನೀವು ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗದೇಯಿರುವ ಅಸಂಖ್ಯಾತ ಕಾರಣಗಳಿವೆ. ಕೆಲವು ಅಂಶಗಳು ಎಷ್ಟು ಬೇಗ ನಿಮ್ಮ ತೂಕವನ್ನು ಹೆಚ್ಚಿಸುತ್ತದೆಯೋ ಅಷ್ಟೇ ನಿಧಾನವಾಗಿ ತೂಕವನ್ನು ಕಡಿಮೆ ಮಾಡುತ್ತವೆ.

ನಿದ್ರೆ ಸರಿಯಾಗಿ ಮಾಡದಿರುವುದು: ರಾತ್ರಿ ಬಹಳ ಹೊತ್ತು ಎಚ್ಚರವಾಗಿರುವುದು ಅಥವಾ ಬೆಳಿಗ್ಗೆ ಲೇಟ್ ಆಗಿ ಏಳುವುದರಿಂದ ತೂಕ ಜಾಸ್ತಿ ಯಾಗಬಹುದು. ರಾತ್ರಿ ಹೊತ್ತು ಎಚ್ಚರವಿರುವುದರಿಂದ ಸ್ನಾಕ್ಸ್ ಕಾಫ್ಫ್ ಟೀ ಗಳ ಜಾಸ್ತಿ ಸೇವನೆಯಿಂದ ಕ್ಯಾಲೊರಿ ಹೆಚ್ಚಾಗುತ್ತದೆ. ಹಾಗು ಬೆಳಿಗ್ಗೆ ಲೇಟ್ ಆಗಿ ಏಳುವುದರಿಂದ ಬೆಳಗಿನ ತಿಂಡಿಯನ್ನ ಅವೇಳೆಯಲ್ಲಿ ತಿನ್ನಬೇಕಾಗುತ್ತದೆ. ಇದರಿಂದ ನಮ್ಮ ಮೆಟಾಬಾಲಿಕ್ ರೇಟ್ ಕಡಿಮೆಯಾಗಿ ತೂಕ ಹೆಚ್ಚು ಮಾಡುತ್ತದೆ. ನಿದ್ರಾಹೀನತೆ ನಿಮ್ಮ ಚಟುವಟಿಕೆಗಳನ್ನು/ ದೈಹಿಕ ವ್ಯಾಯಾಮಗಳ ಮೇಲೆ ಆಸಕ್ತಿ ಕಡಿಮೆ ಮಾಡುವುದರಿಂದ ಕ್ಯಾಲೊರಿ ಬರ್ನಿಂಗ್ ಕ್ಷೀಣಿಸುತ್ತದೆ.

ರಾತ್ರಿಯ ಬೆಳಕು: ರಾತ್ರಿ ಮಲಗೋ ಮುಂಚೆ ಲ್ಯಾಪ್ ಟ್ಯಾಪ್ ಅಥವಾ ಮೊಬೈಲ್ ನೋಡ್ಕೊಂಡು ಮಲಗಿದ್ರೆ ಅದರಿಂದ ಬಾರೋ ನೀಲಿ ಕಿರಣಗಳು ನಮ್ಮ ನಿದ್ದೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತವೆ. ಇದು ಡೈರೆಕ್ಟ್ ಆಗಿ ನಿಮ್ಮ ತೂಕದ ಮೇಲೆ ಪ್ರಭಾವ ಬೀರದಿದ್ದರೂ ಇಂಡೈರೆಕ್ಟ್ ಆಗಿ ತೂಕ ಹೆಚ್ಚು ಮಾಡುತ್ತದೆ. ಹಾಸಿಗೆಗೆ ಹೋಗುವ ಆರ್ಧ ಗಂಟೆ ಮೊದಲು ಮೊಬೈಲ್ ಲ್ಯಾಪ್ ಟಪ್ ಗಳ ಬಳಕೆಯನ್ನು ಕಡಿಮೆ ಮಾಡಿದ್ದಲ್ಲಿ ಉತ್ತಮ ನಿದ್ರೆಯ ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಧೀರ್ಘ ಒತ್ತಡ: ಒತ್ತಡದಿಂದ ಹಾರ್ಮೋನ್ ಗಳ ಅವ್ಯವಸ್ಥೆ ಉಂಟಾಗುತ್ತದೆ. ಒತ್ತಡ ಉಂಟಾದಾಗ ಹಸಿವು ಹೆಚ್ಚಾಗುತ್ತದೆ ಹಾಗು ಹೆಚ್ಚು ಕ್ಯಾಲೊರಿ ಉಳ್ಳ ಪದಾರ್ಥಗಳನ್ನು ತಿನ್ನಬೇಕೆಂಬ ಬಯಕೆ ಹೆಚ್ಚಾಗುತ್ತದೆ. ಇದರಿಂದ ತೂಕವು ಏರುತ್ತದೆ. ಮನೆಯಲ್ಲಿ ಕಡಿಮೆ ಕ್ಯಾಲೊರಿ ಉಳ್ಳ ಆಹಾರ ಪದಾರ್ಥಗಳನ್ನು ಇರಿಸಿ. ಆಗ ಹಸಿವಾದಾಗಲೆಲ್ಲ ತಿಂದರೂ ತೂಕ ಅಷ್ಟಾಗಿ ಹೆಚ್ಚಾಗುವುದಿಲ್ಲ.

ಮಾತ್ರೆ/ ಔಷಧಗಳು: ಅನೇಕ ಔಷಧಗಳು ನಿಮ್ಮ ಮೆಟಾಬಾಲಿಸಮ್ ಅನ್ನು ಸ್ಥಗಿತಗೊಳಿಸಲು ಕಾರಣವಾಗಬಹುದು. ಕೆಲವು ಔಷಧಿಗಳು ನಿಮ್ಮ ಹಸಿವನ್ನು ಹೆಚ್ಚಿಸಬಹುದು. ಇದಕ್ಕಾಗಿಯೇ ನೀವು ತೆಗೆದು ಕೊಳ್ಳುವ ಔಷಧಿಗಳು ತೂಕವನ್ನು ಹೆಚ್ಚಿಸುತ್ತವೆಯಾ ಎಂಬುದರ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ನಕಾರಾತ್ಮಕ ಯೋಚನೆಗಳು: ನಮ್ಮ ಬಗ್ಗೆ ನಾವೇ ನೆಗೆಟಿವ್ ಆಗಿ ಯೋಚಿಸುವುದರಿಂದ ತೂಕ ಹೆಚ್ಚಾಗಬಹುದು. ವ್ಯಾಯಾಮ ಮತ್ತು ಡಯಟ್ ಮಾಡಲು ಉತ್ತಮ ಪ್ರೇರಣೆ ಬೇಕಾಗಬಹುದು. ಈ ಪ್ರೇರಣೆಯು ನಿಮಗೆ ನಿಮ್ಮಿಂದಲ್ಲದೆ ಬೇರೆ ಇನ್ನ್ಯಾರಿಂದಲೂ ಸಿಗಲಾರದು. ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಇರಲಿ, ಹಾಗು ಯಾವುದೇ ಆಲಸಿತನಕ್ಕೆ ಒಳಪಡದೆ ಉತ್ತಮ ಜೀವನ ಶೈಲಿ ಒಳಪಡಿಸಿಕೊಂಡಲ್ಲಿ ಬೊಜ್ಜುತನ ನಿಮ್ಮಿಂದ ದೂರವಾಗುವುದರಲ್ಲಿ ಸಂಶಯವೇ ಇಲ್ಲ.

ರಾಸಾಯನಿಕಗಳು ಮತ್ತು ಮಾಲಿನ್ಯ: ನಾವು ಪ್ರತಿಯೊಂದು ದಿನವೂ ಒಂದಲ್ಲ ಒಂದು ರೀತಿಯ ರಾಸಾಯನಿಕಗಳಿಂದ ಸುತ್ತುವರಿದಿದ್ದೇವೆ . ಇವುಗಳು ದೇಹದ ಮೆಟಬೋಲಿಸಂ ಗಳನ್ನೂ ಏರುಪೇರಾಗಿಸಿ ತೂಕವನ್ನು ಹೆಚ್ಚು ಮಾಡಲು ಪ್ರೇರೇಪಿಸಬಹುದು. ತಾಜಾ ಆಹಾರ ಸೇವನೆ, ಪ್ಲಾಸ್ಟಿಕ್ ರಹಿತ ಜೀವನ, ನೀರನ್ನು ಕಾರ್ಬನ್ ಫಿಲ್ಟರ್ಗಳೊಂದಿಗೆ ಫಿಲ್ಟರ್ ಮಾಡುವುದರಿಂದ ರಾಸಾಯನಿಕಗಳನ್ನು ತಡೆಗಟ್ಟಬಹುದು.

ವೈದ್ಯಕೀಯ ಸಮಸ್ಯೆಗಳು: ರೋಗದ ಒಂದು ಅಡ್ಡ ಪರಿಣಾಮವಾಗಿ ತೂಕ ಹೆಚ್ಚಾಗುವ ಹಲವಾರು ವೈದ್ಯಕೀಯ ಪರಿಸ್ಥಿತಿಗಳು ಇವೆ – ಉದಾಹರಣೆಗೆ, ಥೈರಾಯ್ಡ್ ಪರಿಸ್ಥಿತಿಗಳು, ಪೋಲಿಸಿಸ್ಟಿಕ್ ಓವರೀಸ್ ಇತರೆ ಆರೋಗ್ಯ ಸಮಸ್ಯೆಗಳು ನಿಮಗೆ ಯಾವುದೇ ಇತರ ಲಕ್ಷಣಗಳನ್ನು ತೋರಿಸದೆ ತೂಕವನ್ನುಂಟುಮಾಡುತ್ತವೆ. ನೀವು ತೂಕವನ್ನು ಪಡೆಯುತ್ತಿದ್ದರೆ ಮತ್ತು ನೀವು ಏನು ಮಾಡದೆ ಅದನ್ನು ಕಳೆದುಕೊಳ್ಳಲು ಸಾಧ್ಯವಾಗದಿದ್ದರೆ, ನಿಮ್ಮ ವೈದ್ಯರೊಂದಿಗೆ ಮಾತಾಡಿಕೊಳ್ಳಿ ಮತ್ತು ಆ ಸಮಸ್ಯೆಗಳನ್ನು ಹೋಗಲಾಡಿಸುವುದರ ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಖಿನ್ನತೆ: ಅತಿಯಾದ ಚಿಂತೆ ಖಿನ್ನತೆಗೆ ನಾಂದಿ ಹಾಡಬಹುದು. ಎಷ್ಟೋ ಜನರಿಗೆ ಅವರು ಖಿನ್ನತೆಯಿಂದ ನರಳುತ್ತಿದ್ದರೆ ಎಂಬುದೇ ತಿಳಿದಿರುವುದಿಲ್ಲ. ಖಿನ್ನತೆಯಿಂದ ನಿಷ್ಕ್ರಿಯತೆ ಮತ್ತು ಅತಿಯಾದ ತಿನ್ನುವಿಕೆ ಉಂಟಾಗಿ ತೂಕ ಹೆಚ್ಚಾಗುತ್ತದೆ. ನಿಮ್ಮ ಸಮಸ್ಯೆಗಳನ್ನು ಆಪ್ತರಲ್ಲಿ ಅಥವಾ ವೈದ್ಯರಲ್ಲಿ ಹಂಚಿಕೊಂಡಲ್ಲಿ ಖಿನ್ನತೆಯಿಂದ ಹೊರ ಬರಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *