ಮಕ್ಕಳಲ್ಲಿ ಹಾಗು ದೊಡ್ಡವರ ಹೊಟ್ಟೆಯಲ್ಲಿ ಆಗುವ ಜಂತುಹುಳು ಹೋಗಲಾಡಿಸುವ ಸುಲಭ ಮನೆಮದ್ದು ಹೊಟ್ಟೆಯಲ್ಲಿರುವ ಜಂತುಳುಗಳು ನಿಮ್ಮ ಮಲದಿಂದ ಸುಲಭವಾಗಿ ಹೊರಬರಲು ಸೇಬನ್ನು ರಾತ್ರಿ ಮಲಗುವ ಮುನ್ನ ಹಲವು ದಿನಗಳು ತಿನ್ನಬೇಕು.
ಚಿಕ್ಕ ಮಕ್ಕಳ ಹೊಟ್ಟೆಯಲ್ಲಿ ಬೆಳೆಯುವ ಜಂತು ಹುಳುಗಳನ್ನೂ ಸಾಯಿಸಲು ಒಣಗಿದ ಮಾವಿನ ಬೀಜದ ಪುಡಿಯನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ತಿನ್ನಲು ಕೊಡಿ. ಪಪ್ಪಾಯ ಕಾಯಿಯ ರಸವನ್ನು ಜೇನುತುಪ್ಪದೊಂದಿಗೆ ಬಿಸಿನೀರಿನಲ್ಲಿ ಬೆರೆಸಿ ಕುಡಿಸುವುದರಿಂದ ಮಕ್ಕಳಿಗೆ ಹೊಟ್ಟೆಯಲ್ಲಿ ಜಂತು ಹುಳುಗಲಿದ್ದರೆ ಸತ್ತು ಮಲದ ಮೂಲಕ ಹೊರಬರುತ್ತವೆ.
ಪರಂಗಿ ಹಣ್ಣಿನ ಬೀಜಗಳನ್ನು ಜೇನುತುಪ್ಪದೊಂದಿಗೆ ತಿನ್ನಿಸುವುದರಿಂದ ಮಕ್ಕಳ ಹೊಟ್ಟೆಯಲ್ಲಿರುವ ಜಂತು ಹುಳುಗಳು ಮಲದ ಮೂಲಕ ಹೊರಬರುತ್ತವೆ. ಪರಂಗಿ ಹಣ್ಣನ್ನು ೩-೪ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಜಂತು ಹುಳುಗಳು ಸಾಯುತ್ತವೆ.
ಬೀವಿನ ಸೊಪ್ಪು, ಕೊತ್ತಂಬರಿ, ಶುಂಠಿ, ಮೆಣಸಿನ ಕಾಯಿ, ಉಪ್ಪು ಮತ್ತು ಹುಣಸೇ ಹಣ್ಣನ್ನು ಬೆರೆಸಿ, ಅರೆದು ವಾರಕ್ಕೊಮ್ಮೆ ಅದನ್ನು ಬಿಸಿ ಅನ್ನಕ್ಕೆ ಕಲೆಸಿ ತಿನ್ನುತ್ತಾ ಬಂದರೆ ಹೊಟ್ಟೆಯಲ್ಲಿರುವ ಜಂತು ಹುಳು ನಾಶವಾಗುತ್ತದೆ. ಜಂತು ಹುಳು ನಾಶವಾಗಲು ಕಲ್ಲಂಗಡಿ ಹಣ್ಣಿನ ಬೀಜದ ತಿರುಳನ್ನು ತಿಂದರೆ ಕೆಲವೇ ದಿನದಲ್ಲಿ ವಿಹೂಳು ನಾಶವಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.