ಹಲವು ಕಷ್ಟಗಳ ನಿವಾರಣೆಗೆ ಈ ಇಡುಗುಂಜಿ ಗಣಪತಿಗೆ ಈ ರೀತಿಯಾದ ಒಂದು ಸಣ್ಣ ಹರಕೆ ಹೇಳಿ ನಿಮ್ಮ ಎಲ್ಲ ಕಷ್ಟಗಳು ದೂರವಾಗುತ್ತವಂತೆ

ಜ್ಯೋತಿಷ್ಯ ಧಾರ್ಮಿಕ

ಹೊನ್ನಾವರದಿಂದ ಕೇವಲ 15 ಕಿಲೋ ಮೀಟರ್ ಹಾಗೂ ಮುರ್ಡೇಶ್ವರದಿಂದ 23 ಕಿಲೋ ಮೀಟರ್ ದೂರದಲ್ಲಿರುವ ಈ ಪವಿತ್ರ ಪುಣ್ಯಧಾಮಕ್ಕೆ ಇಡಗುಂಜಿ ಎಂದು ಹೆಸರು ಹೇಗೆ ಬಂತು ಗೊತ್ತೆ. ಇಡಾ ಎಂದರೆ ಎಡ, ಕುಂಜು ಎಂದರೆ ಗಿಡಗಂಟೆಗಳಿಂದ ತುಂಬಿರುವ ಅರಣ್ಯಪ್ರದೇಶ. ಶರಾವತಿಯ ಎಡ ಭಾಗದಲ್ಲಿರುವ ಅರಣ್ಯದ ರಮಣೀಯತೆಗೆ ಮನಸೋತು ನಾರದ ಮರ್ಷಿಗಳು ಈ ಹೆಸರು ಇಟ್ಟರೆಂದು ಸ್ಥಳ ಪುರಾಣ ಹೇಳುತ್ತದೆ.

ಇತಿಹ್ಯ: ಪ್ರಾಚೀನ ಕಾಲದಲ್ಲಿ ಇಲ್ಲಿ ವಾಲಖಿಲ್ಯಾದಿ ಋಷಿಗಳೂ ಕುಟಜಾದ್ರಿಯಲ್ಲಿ ತಪಸ್ಸನ್ನಾಚರಿಸುತ್ತಿರಂತೆ. ಅವರಿಗೆ ಹಲವು ಬಗೆಯ ವಿಘ್ನಗಳು ಎದುರಾದವು. ಆ ಸಂದರ್ಭದಲ್ಲಿ ಅಲ್ಲಿ ಪ್ರತ್ಯಕ್ಷರಾದ ತ್ರಿಲೋಕ ಸಂಚಾರಿ ನಾರದ ಮರ್ಷಿಗಳು ವಿಘ್ನ ನಿವಾರಕನಾದ ಗಣಪತಿಯ ಪೂಜೆ ಮಾಡುವಂತೆ ತಿಳಿಸಿದರು. ತಾವೇ ಗಣಪನನ್ನು ಕರೆತರುವುದಾಗಿಯೂ ಒಪ್ಪಿಕೊಂಡರು.

ನಂತರ ಗೇರುಸೊಪ್ಪೆ ಪ್ರದೇಶದಲ್ಲಿ ನಿಂತು ಸುತ್ತಲ ಪ್ರದೇಶವನ್ನು ನೋಡಿದ ನಾರದರು, ಶರಾವತಿಯ ಮುಖಜಪ್ರದೇಶ ಕಂಡು ಮನಸೋತರು. ಶರಾವತಿ ನದಿಯ ಎಡ ಭಾಗದಲ್ಲಿರುವ ಗಿಡಗಂಟಿಗಳ ಅರಣ್ಯ ಪ್ರದೇಶದ ರಮಣೀಯತೆಗೆ ಮನಸೋತು ಇಡಾಕುಂಜ ಎಂದು ಕರೆದರಂತೆ. ಮುಂದೆ ಅದುವೇ ಇಡಗುಂಜಿ ಆಯಿತೆನ್ನುತ್ತಾರೆ ಸ್ಥಳೀಯರು.

ಗಣಪನ ಪೂಜೆಗೆ ಸಾಕ್ಷಾತ್ ಗಣೇಶನನ್ನೇ ಕರೆತರುವುದಾಗಿ ವಾಲಖಿಲ್ಯಾದಿ ಮುನಿಗಳಿಗೆ ಮಾತುಕೊಟ್ಟಿದ್ದ ನಾರದರು, ನಿತ್ಯ ಪಂಚಕಜ್ಜಾಯ ಕೊಡುವುದಾಗಿ ತಿಳಿಸಿ, ಗಣಪತಿಯನ್ನು ಕರೆತಂದರಂತೆ. ವಾಲಖಿಲ್ಯಾದಿ ಋಷಿಗಳು ಗಣಪತಿಯನ್ನು ಪೂಜಿಸಿದರು. ಅಲ್ಲಿಯೇ ನೆಲೆಸುವಂತೆ ಕೋರಿದರು.

ಆಗ ದೇವಶಿಲ್ಪಿ ವಿಶ್ವಕರ್ಮನೇ ಎರಡು ಕೈಗಳ ಸುಂದರ ಗಣಪನನ್ನು ನಿರ್ಮಿಸಿದ ಎಂದು ಹೇಳಲಾಗುತ್ತದೆ. ಈ ಸುಂದರ ಮೂರ್ತಿಯನ್ನು ನಾರದರೇ ಮಾಘಮಾಸದ ಶುಕ್ಲಪಕ್ಷದ ಬಿದಿಗೆಯಂದು ಪ್ರತಿಷ್ಠಾಪಿಸಿದರಂತೆ. ಇಲ್ಲಿ ಪ್ರತಿವರ್ಷ ಮಾಘಮಾಸದಲ್ಲಿ ವಾರ್ಷಿಕೋತ್ಸವದಂದು ವಿಶೇಷ ಪೂಜೆ ನಡೆಯುತ್ತದೆ. ಭಾದ್ರಪದ ಶುಕ್ಲ ಚೌತಿಯ ವರಸಿದ್ಧಿ ವಿನಾಯಕನ ವ್ರತದ ದಿನ ಇಲ್ಲಿ ಜನಜಾತ್ರೆಯೇ ಸೇರುತ್ತದೆ.

ಇಡಗುಂಜಿಯ ದ್ವಿಭುಜ ಗಣೇಶನಿಗೆ ಅಡಕೆ ಬೆಳೆಗಾರರ ದೊಡ್ಡ ಭಕ್ತವೃಂದವೇ ಇದೆ. ಅಡಕೆ ತೋಟಗಳಿಗೆ ಕೊಳೆರೋಗ ಬಂದರೆ, ಇವರು ಇಡಗುಂಜಿ ಗಣಪನಿಗೆ ಹರಕೆ ಹೊರುತ್ತಾರೆ ಹೀಗಾಗಿ ಈ ಗಣಪನಿಗೆ ಕೊಳಯಡಿಕೆ ಗಣಪ ಎಂಬ ಹೆಸರು ಬಂದಿದೆ. ವಿಶಾಲ ಪ್ರದೇಶದಲ್ಲಿ 800 ವರ್ಷಗಳಷ್ಟು ಪುರಾತನವಾದ ವಿನೂತನ ಮಾದರಿಯ ದೇವಸ್ಥಾನ ಶಿಖರ ಗೋಪರದಲ್ಲಿ 22 ತೊಲ ಚಿನ್ನದ ಲೇಪವುಳ್ಳ 78 ಕಿ.ಗ್ರಾಂ. ತೂಕದ ಪಂಚಲೋಹದ ಕಳಶ ಸ್ಥಾಪಿಸಲಾಗಿದೆ. ಪ್ರತಿವರ್ಷವೂ ರಥಸಪ್ತಮಿಯ ದಿನ ಇಲ್ಲಿ ವೈಭವದ ರಥೋತ್ಸವ ಜರುಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *