ಎಂತಹ ಕುಡುಕನಿದ್ದರು ಈ ದೇವರಿಗೆ ಬಂದು ದೀಕ್ಷೆ ಪಡೆದುಕೊಂಡರೆ ಜೀವನದಲ್ಲಿ ಎಣ್ಣೆ ಮುಟ್ಟುವುದಿಲ್ಲವಂತೆ ವಿಶೇಷ ದೇವಾಲಯ

ಜ್ಯೋತಿಷ್ಯ ಧಾರ್ಮಿಕ

ಕುಡಿತ ಎನ್ನುವುದು ಸಮಾಜಕ್ಕೆ ಅಂಟಿರುವ ಶಾಪ ಎಂದೇ ಹೇಳಬಹುದು. ಆದರೂ ಇದನ್ನು ನಿಯಂತ್ರಿಸದ ಸರ್ಕಾರ ಮತ್ತಷ್ಟು ಕುಡುಕರನ್ನು ಹೊರತರಲು ಸಲೀಸಾಗಿ ಎಣ್ಣೆ ಕೈಗೆ ಸಿಗುವಂತ ಯೋಜನೆಯನ್ನು ತರುತ್ತಿದೆ. ಆದರೆ ಕುಡಿತದ ಚಟಕ್ಕೆ ಬಿದ್ದ ವ್ಯಕ್ತಿಯ ಸಂಸಾರ ಬೀದಿಗೆ ಬಂದಿವೆ. ಅಷ್ಟೇ ಅಲ್ಲದೆ ಅದೆಷ್ಟೋ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಅಲ್ಲದೆ ಹಲವರು ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಇದೆಲ್ಲ ತಿಳಿದ ಕೆಲವರು ಕುಡಿತ ಕೈ ಬಿಡಲು ನಿರ್ಧರಿಸಿದರು ಸಾಧ್ಯವಾಗದೆ ಮತ್ತೆ ಕುಡಿಯುತ್ತಿದ್ದಾರೆ. ಕುಡಿತ ಬಿಡಲು ದೇವರುಗಳಿಗೆ ಹರಕೆ ಕಟ್ಟಿಕೊಂಡು ಮತ್ತೆ ಎಣ್ಣೆ ಹೊಡೆಯುತ್ತಿದ್ದಾರೆ. ಆದರೆ ಇಲ್ಲೊಂದು ದೇವರಿಗೆ ಹೋಗಿ ದೀಕ್ಷೆ ಪಡೆದುಕೊಂಡವರು ಜೀವನದಲ್ಲಿ ಎಣ್ಣೆ ಸಹವಾಸಕ್ಕೆ ಹೊಗೊದಿಲ್ಲವಂತೆ.

ಕುಡುಕರನ್ನು ಚಟದಿಂದ ಮುಕ್ತಿ ಪಡಿಸಲು ಮನೆಯವರು ಆಸ್ಪತ್ರೆ, ಪ್ರಕೃತಿ ಚಿಕಿತ್ಸೆ, ಹರಕೆ ಎಂದು ಸಾವಿರಾರು ದುಡ್ಡು ಕರ್ಚು ಮಾಡುತ್ತಾರೆ ಆದರೆ ಇದ್ಯಾವುದು ಕೆಲಸಕ್ಕೆ ಬರೋದಿಲ್ಲ. ಆದರೆ ದಾವಣಗೆರೆ ತಾಲೂಕು ಕೈದಾಳೆ ಒಂದು ದೇವರಿದೆ ಈ ಗ್ರಾಮದಲ್ಲಿ ಕುಡುಕರಿಗೆ ಧೀಕ್ಷೆ ನೀಡಲಾಗುತ್ತದೆ. ರಾಜ್ಯದ ನಾನಾ ಭಾಗಗಳ ಕುಡುಕರು ಇಲ್ಲಿ ಬಂದು ಮಾಲೆ ಧರಿಸಿ ಧೀಕ್ಷೆ ಪಡೆಯುತ್ತಾರೆ. ಇಲ್ಲಿ ಒಮ್ಮೆ ಧೀಕ್ಷೆ ಪಡೆದವರು ಮತ್ತೆ ಯಾವತ್ತು ಕುಡಿತದ ಚಟಕ್ಕೆ ಒಳಗಾಗುವುದಿಲ್ಲ. ಅದಕ್ಕಾಗಿ ಕೈದಾಳೆ ಮಲ್ಲಿಕಾರ್ಜುನ ಸ್ವಾಮೀಜಿ ಸನ್ನಿಧಿಗೆ ಕುಡಿದು ಜೀವನ ಹಾಳು ಮಾಡಿಕೊಂಡ ಜನರು ಇಲ್ಲಿ ಬಂದು ಧೀಕ್ಷೆ ಪಡೆದುಕೊಂಡು ಮಲ್ಲಿಕಾರ್ಜುನ ‌ಸ್ವಾಮಿ ಮೇಲೆ‌ ಆಣೆ ಮಾಡಿ ರುದ್ರಾಕ್ಷಿ ಮಾಲೆಯನ್ನು ಹಾಕಿದರೆ ಸಾಕು ಸಾಯುವವರೆಗೂ ಕುಡಿತದ ಚಟಕ್ಕೆ ಒಳಗಾಗುವುದಿಲ್ಲ.

ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆಯಾಗಿ ಐದು ದಿನಗಳ ನಂತರ ಇಲ್ಲಿ ರಥೋತ್ಸವ ನಡೆಯಲಿದೆ. ರಥೋತ್ಸವದ ದಿನ ನಾನಾ ರಾಜ್ಯಗಳಿಂದ ಜನ ಬಂದು ಮಾಲೆ ಧರಿಸುತ್ತಾರೆ. ಕುಡುಕ ಗಂಡಂದಿರಿಂದ ಬೇಸತ್ತ ಅದೆಷ್ಟೋ ಹೆಣ್ಣು ಮಕ್ಕಳು ತಮ್ಮ ಗಂಡಂದಿರಿಗೆ ಗೊತ್ತಾಗಾದ ಹಾಗೇ ಇಲ್ಲಿಗೆ ಕರೆದುಕೊಂಡು ಬಂದು ಮಾಲೆ ಹಾಕಿಸುತ್ತಾರೆ. ಮಾಲೆ ಧರಿಸಿದ ನಂತರ ಕುಡಿದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂಬುದು ಇಲ್ಲಿನ ನಂಬಿಕೆ. ಆ ಭಯಕ್ಕೆ ಯಾರು ಮತ್ತೆ ಕುಡಿತದ ಚಟಕ್ಕೆ ದಾಸರಾಗುವುದಿಲ್ಲ. ಹೀಗಾಗಿ ಪ್ರತಿ ವರ್ಷ ಕುಡಿತ ಬಿಡಲು ಇಲ್ಲಿ ಮಾಲೆ ಧರಿಸುತ್ತಾರೆ. ಮಾಲೆ ಧರಿಸಿದ ಮೇಲೆ ಕೊನೆವರೆಗೂ ಕುಡಿತವನ್ನ ಮುಟ್ಟುವುದಿಲ್ಲ.

ರಥೋತ್ಸವದ ದಿನ ಇಲ್ಲಿ ನೂರಾರು ಜನ ಕುಡುಕರು ಬಂದಿರುತ್ತಾರೆ. ತಮ್ಮ ಕುಟುಂಬದ ಸದಸ್ಯರ ಒತ್ತಾಯಕ್ಕಾಗಿಯೇ ಕೆಲವರು ಬಂದಿರುತ್ತಾರೆ. ಹೀಗೆ ಬಂದವರು ಧೀಕ್ಷೆ ಕೊಡುವಾಗ ಓಡಿ ಹೋದ ಘಟನೆಗಳು ಅನೇಕ ಇವೆ. ಆದರೆ ಇಲ್ಲಿ ಧೀಕ್ಷೆ ಪಡೆದರು ಮರಳಿ ಕುಡಿತಕ್ಕೆ ಶರಣಾದವರು ಕಡಿಮೆ. ಹೀಗೆ ಮತ್ತೆ ಕುಡಿದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂಬುದು ಇಲ್ಲಿನ ನಂಬಿಕೆ. ಈ ಹಿನ್ನೆಲೆಯಲ್ಲಿ ಎಷ್ಟೋ ಮಹಿಳೆಯರು ತಮ್ಮ ಗಂಡಂದಿರಿಗೆ ಗೊತ್ತಾಗದಂತೆ ಇಲ್ಲಿಗೆ ಕರೆದುಕೊಂಡು ಬಂದು ಧೀಕ್ಷೆ ಕೊಡಿಸುತ್ತಾರೆ. ಅದರಿಂದ ಎಷ್ಟೋ ಕುಟುಂಬಗಳು ಉಳಿದುಕೊಂಡಿವೆ, ಇದರಿಂದ ಮುಂದಿನ ದಿನಗಳಲ್ಲೂ ಈ ದೇವರಿಗೆ ನಡೆದುಕೊಳ್ಳುವುದಾಗಿ ಮಹಿಳೆಯರು ಹರಕೆ ಹೊತ್ತಿರುತ್ತಾರೆ. ಅಲ್ಲದೇ ಯಾವುದೇ ಹರಕೆ‌ ಮಾಡಿಕೊಂಡರು ಇಷ್ಟಾರ್ಥಗಳು ಈಡೇರುತ್ತವೆ ಹಾಗೂ‌ ಕುಟುಂಬ ಮನಃಶಾಂತಿಯಿಂದ ಇರುತ್ತದೆ ಎನ್ನುವುದು ಭಕ್ತರ ನಂಬಿಕೆ. ಅದಕ್ಕಾಗಿ ನೀವು ಈ ದೇವಸ್ಥಾನಕ್ಕೆ ಹೋಗಿ ದೀಕ್ಷೆ ಪಡೆದುಕೊಳ್ಳಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *