ನಿಂಬೆಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ. ಎಂಥವರಿಗೂ ನಿಂಬೆ ಹಣ್ಣು ಗೊತ್ತರುವಂತದ್ದೇ. ಅಡುಗೆಗೆ, ಆರೋಗ್ಯಕ್ಕೆ, ದೇವರ ಪೂಜೆಗೂ ನಿಂಬೆಯನ್ನು ಬಳಸೋದುಂಟು. ಸಾಮಾನ್ಯವಾಗಿ ನಿಂಬೆ ರುಚಿಗೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯಕ್ಕೂ ಮುಖ್ಯ. ಹಾಗಾದ್ರೆ ಚಿಕ್ಕ ನಿಂಬೆಯ ಅಘಾಧ ಪ್ರಮಾಣದ ಉಪಯೋಗ ಏನು ಅನ್ನೋದನ್ನು ನೀವೇ ನೋಡಿ.
ನಿಂಬೆ ಅನ್ನೋದು ಚಿಕ್ಕ ಹಣ್ಣಾದರೂ ಅದರ ಕೆಲಸ ಅಘಾದವಾದದ್ದು. ಪ್ರತಿನಿತ್ಯ ಬಳಸುವ ಮುಖ್ಯ ವಸ್ತುಗಳಲ್ಲಿ ನಿಂಬೆ ಕೂಡ ಮುಖ್ಯವಾದದ್ದು, ಹಲ್ಲಿನ ನೋವಿಗೆ ನಿಂಬೆ ಹಣ್ಣು ರಾಮಬಾಣ. ನೋವಿರುವ ಹಲ್ಲಿನ ಮೇಲೆ ಒಂದು ಹನಿ ನಿಂಬೆಯ ರಸ ಹಾಕಿದರೆ ಸಾಕು. ನೋವು ಕಡಿಮೆಯಾಗುತ್ತದೆ. ಇನ್ನು ವಸಡುಗಳಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಗಮ್ ಮೇಲೆ ನಿಂಬೆ ರಸ ಹಾಕಿ ಉಜ್ಜಿದರೆ ರಕ್ತಸ್ರಾವ ಕಡಿಮೆಯಾಗುತ್ತದೆ.
ಇನ್ನು ಈ ನಿಂಬೆ ಕೂದಲಿಗೂ ಕೂಡ ಉಪಯುಕ್ತವಾಗಿದೆ. ಹೊಟ್ಟು ಹೆಚ್ಚಾದಲ್ಲಿ ಕೊಬ್ಬರಿ ಎಣ್ಣೆ ಜೊತೆ ನಿಂಬೆ ರಸ ಬೆರೆಸಿ ಉಪಯೋಗಿಸುವುದರಿಂದ ಹೊಟ್ಟು ಕಡಿಮೆ ಮಾಡಬಹುದು. ಇನ್ನು ತೆಂಗಿನ ನೀರಿನ ಜೊತೆ ನಿಂಬೆ ರಸ ಬೆರೆಸಿ ಕೂದಲಿಗೆ ಹಚ್ವುವುದರಿಂದ ದಪ್ಪ ಹಾಗೂ ಸದೃಡ ಕೂದಲು ಬೆಳೆಯಬಹುದು
ನಿಂಬೆ ರಸ ವಾಕರಿಕೆ, ತಲೆಸುತ್ತುವಿಕೆ, ಸುಸ್ತು ಕಡಿಮೆ ಮಾಡುತ್ತದೆ. ಅಷ್ಟೆ ಅಲ್ಲ ಒತ್ತಡ ಖಿನ್ನತೆಗಳಿಗೂ ನಿಂಬೆ ರಾಮಬಾಣ. ನಿಬೆ ಅಸ್ತಮಾಗೂ ಒಳ್ಳೆಯ ಔಷಧಿಯೇ ಸರಿ. ಇನ್ನು ಮೊಣಕೈ ಗಳಲ್ಲಿ ಕಪ್ಪಾಗಿದ್ದರೆ ನಿಂಬೆ ಹಣ್ಣನ್ನು ಉಜ್ಜುವುದರಿಂದ ಕಡಿಮೆ ಮಾಡಬಹುದು. ತ್ವಚೆಗೂ ನಿಂಬೆ ಅತ್ಯುತ್ತಮ ಔಷಧವಾಗಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.