ಆರೋಗ್ಯದ ಕಣಜ ಎಂದೇ ಕರೆಯುವ ಕಡಲೆ ಕಾಳು ತಿನ್ನುವುದರಿಂದ ಎಷ್ಟೆಲ್ಲ ಲಾಭವಿದೆ ಗೊತ್ತಾ

ಆರೋಗ್ಯ

ಕಡಲೆಕಾಳು ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರುವ ದಾನ್ಯವಾಗಿದೆ ಈ ಕಡಲೆಕಾಳು ಹಲವು ರೀತಿಯಲ್ಲಿ ಮನುಷ್ಯನ ದೇಹಕ್ಕೆ ಪ್ರಯೋಜನವಾಗಲಿದೆ. ಕಡಲೆಕಾಳು ಯಾವ ಯಾವ ರೀತಿ ಪ್ರಯೋಜನವಾಗಲಿದೆ ಅನ್ನೋದು ಇಲ್ಲಿದೆ ನೋಡಿ.

ಕಡೆಲೆ ಕಾಳಿನಲ್ಲಿರುವ ಪೋಷಕಾಂಶಗಳು: ಕಡಲೆ ಬಹಳ ಪುಷ್ಟಿಕರವಾದ ಆಹಾರ. ಇದರಲ್ಲಿ 20% ರಷ್ಟು ಸಾರಜನಕ ಮತ್ತು ಶೇ. 61ರಷ್ಟು ಶರ್ಕರ ಪಿಷ್ಟಾದಿಗಳಿವೆ. ಖನಿಜ ಪದಾರ್ಥಗಳಾದ ಕ್ಯಾಲ್ಸಿಯಂ (149 ಮಿಗ್ರಾಂ/100 ಗ್ರಾಂ) ಮತ್ತು ಕಬ್ಬಿಣ (7.2 ಮಿಗ್ರಾಂ/100 ಗ್ರಾಂ)ಗಳಲ್ಲದೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಎ ಕೂಡ ಇದೆ. ಈ ಕಾಳುಗಳಲ್ಲಿರುವ ಸಸಾರಜನಕದಲ್ಲಿ ಆವಶ್ಯಕವಾಗಿರುವ ಎಲ್ಲ ಅಮೈನೊ ಆಮ್ಲಗಳು ದೊರೆಯುತ್ತಿದ್ದರೂ ಟ್ರಿಪ್ಟೋಫೇನ್ ಮತ್ತು ಗಂಧಕಯುಕ್ತ ಅಮೈನೊ ಆಮ್ಲಗಳ ಪ್ರಮಾಣ ಮಾತ್ರ ಕಡಿಮೆಯಾಗಿದೆ.

ಉಪಯೋಗಗಳು: ಕಡಲೆಯ ಉಪಯೋಗ ಬಹಳ. ಗಿಡಗಳು ಇನ್ನೂ ಚಿಕ್ಕವಾಗಿರುವಾಗಲೇ ಅವುಗಳ ಚಿಗುರನ್ನು ಮುರಿದು ತೊಪ್ಪಲು ಪಲ್ಲೆಯಾಗಿ ಇಲ್ಲವೆ ಹಾಗೆಯೇ ಒಣಗಿಸಿ ಬಿಟ್ಟು ಕೆಲವು ದಿನಗಳ ಅನಂತರ ಉಪಯೋಗಿಸುತ್ತಾರೆ. ಕಾಳುಗಳು ಇನ್ನೂ ಪುರ್ತಿಯಾಗಿ ಬಲಿಯುವುದಕ್ಕೆ ಮೊದಲೇ ತಿಂದರೂ ರುಚಿಕರವಾಗಿರುವುದಲ್ಲದೇ ಪುಷ್ಟಿಕರವಾಗಿಯೂ ಇರುತ್ತವೆ.

ಒಣಗಿದ ಬೀಜಗಳನ್ನು ನೆನೆಹಾಕಿ ತಿನ್ನುವುದು ಆರೋಗ್ಯಕರ ಎಂದು ಎಲ್ಲರಿಗೂ ತಿಳಿದ ಮಾತು. ಹುರಿದು, ಹುರಿಗಾಳನ್ನಾಗಿ ತಿನ್ನುವುದಲ್ಲದೆ ಬೇಳೆಮಾಡಿ ಅಡಿಗೆ ಮಾಡುವುದೂ ಸಾಮಾನ್ಯವಾಗಿದೆ. ಕಡಲೆಯ ಹಿಟ್ಟಿನಿಂದ ಹಲವಾರು ಬಗೆಯ ಸಿಹಿ ಹಾಗೂ ಖಾರದ ತಿಂಡಿಗಳನ್ನು ತಯಾರಿಸುತ್ತಾರೆ. ಕೇವಲ ಮನುಷ್ಯರಿಗಷ್ಟೇ ಅಲ್ಲದೆ, ಕಡಲೆಯನ್ನು ಕುದುರೆ ಮೊದಲಾದ ಪ್ರಾಣಿಗಳಿಗೆ ತಿನ್ನಿಸಲೂ ಉಪಯೋಗಿಸುತ್ತಾರೆ. ಇದರ ಹೊಟ್ಟಂತೂ ದನಗಳಿಗೆ ಒಳ್ಳೆಯ ಮೇವು.

ಒಂದು ಚಮಚ ಸಕ್ಕರೆ ಜೊತೆ ಕಡಲೆ ಕಾಳು ಸೇವನೆ ಮಾಡುವುದರಿಂದ ಪುರುಷರಲ್ಲಿ ವೀರ್ಯ ಉತ್ಪತ್ತಿಯಲ್ಲಿ ವೃದ್ಧಿಯಾಗುತ್ತದೆ. ಪ್ರತಿದಿನ ನೆನಸಿದ ಕಡಲೆ ಸೇವನೆಯಿಂದ ಶಕ್ತಿ ಬರುತ್ತದೆ. ಹಾಗೆ ಸ್ನಾಯುಗಳು ಬಲಗೊಳ್ಳುತ್ತವೆ. ನಿತ್ರಾಣ ದೂರವಾಗಿ ದೇಹ ಅನೇಕ ರೋಗಗಳಿಂದ ಮುಕ್ತಿ ಪಡೆಯುತ್ತದೆ.

ಮಲಬದ್ಧತೆ ಸಮಸ್ಯೆ ಇರುವವರು ಕಡಲೆಯನ್ನು ಸೇವಿಸಬೇಕು. ಇದ್ರಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಬೆಲ್ಲದ ಜೊತೆ ಇದನ್ನು ಸೇವನೆ ಮಾಡಿದ್ರೆ ಮೂತ್ರದ ಸಮಸ್ಯೆ ಕಡಿಮೆಯಾಗುತ್ತದೆ. ಪದೇ ಪದೇ ಮೂತ್ರ ಮಾಡುವ ಹಾಗೂ ಮೂಲವ್ಯಾಧಿಯಂತಹ ಸಮಸ್ಯೆಯಿರುವುದಿಲ್ಲ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *