ಎದೆ ಉರಿ, ಗ್ಯಾಸ್ಟ್ರಿಕ್ ಸಮಸ್ಯೆಯೇ ಚಿಂತೆ ಬಿಡಿ ಅದಕ್ಕೆ ಇದೆ ಸಿಂಪಲ್ ಮನೆಮದ್ದು

ಆರೋಗ್ಯ

ಗ್ಯಾಸ್ಟ್ರಿಕ್ ಮತ್ತು ಎದೆ ಉರಿ ಅನ್ನೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವಂತ ಮತ್ತು ದಿನ ನಿತ್ಯ ಕಾಡುವ ಸಮಸ್ಯೆಯಾಗಿದೆ. ಆದರೆ ಈ ಸಮಸ್ಯೆಗೆ ಪದೇ ಪದೇ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಅದಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಹಾಗಾದರೆ ಈ ಸಮಸ್ಯೆ ಬರದಂತೆ ಏನು ಮಾಡಬೇಕು,ಏನು ಮಾಡಬಾರದು: ಅತಿಯಾಗಿ ಟೀ, ಕಾಫಿ, ಮಾರುಕಟ್ಟೆಯಲ್ಲಿ ಸಿಗುವ ತಂಪುಪಾನೀಯಗಳನ್ನು ಸೇವಿಸಬೇಡಿ ಕಾರಣ ಹೆಚ್ಚು ಸೇವನೆ ಮಾಡುವುದರಿಂದ ಈ ಸಮಸ್ಯೆಗಳು ಎದುರಾಗುತ್ತವೆ. ಮಧ್ಯಪಾನ ಮತ್ತು ಧೂಮಪಾನಗಳೆರಡೂ ಎದೆಯುರಿ ಸಮಸ್ಯೆಯನ್ನು ಹೆಚ್ಚಿಸುತ್ತವೆ ಮತ್ತು ಅತಿಯಾದ ಕೊಬ್ಬಿನಂಶವಿರುವ ಪದಾರ್ಥಗಳನ್ನು ಸೇವಿಸಬೇಡಿ.

ಅತಿಯಾದ ಉಪ್ಪಿನಂಶವಿರುವ ಪದಾರ್ಥಗಳ ಸೇವನೆ ಒಳ್ಳೆಯದಲ್ಲ.ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಆಹಾರ, ಹುರಿದ ಪದಾರ್ಥಗಳ ಸೇವನೆ ಮಾಡಬೇಡಿ. ಈ ರೀತಿಯಾದ ಸಮಸ್ಯೆಗಳು ಬಾರದಂತೆ ಇರಲು ನಿಗದಿತ ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಸೇವನೆ ಮಾಡಿ. ಪ್ರತಿದಿನ 8-10 ಗಂಟೆ ನಿದ್ರೆ ಮಾಡಿ. ಪ್ರತಿದಿನ 3-4 ಲೀಟರ್‌ ನೀರು ಕುಡಿಯಿರಿ.

ಅಷ್ಟೇ ಅಲ್ಲದೆ ನಾವು ತಿನ್ನುವ ಆಹಾರದಲ್ಲಿ ಹಣ್ಣು, ತರಕಾರಿ ಮತ್ತಿತರ ನಾರಿನಂಶವಿರುವ ಪದಾರ್ಥಗಳನ್ನು ಸೇವಿಸುವುದರ ಜೊತೆಗೆ ಧಾನ್ಯಗಳು ಹಾಗೂ ಬೇಳೆಕಾಳುಗಳ ಸೇವನೆಗೆ ಹೆಚ್ಚು ಮಹತ್ವ ಕೊಡುವುದರ ಮೂಲಕ ಇಂತಹ ಸಮಸ್ಯೆಗಳಿಗೆ ಹೇಳಿ ಗುಡ್ ಬಾಯ್.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *