ಎಂತಹ ಕೆಮ್ಮು ಹಾಗು ಹಾಗು ಹುಳಕಡ್ಡಿ ಇದ್ರೂ ಹೋಗಲಾಡಿಸುತ್ತೆ ಈ ಆಡುಮುಟ್ಟದ ಸೊಪ್ಪು

ಆರೋಗ್ಯ

ಹೌದು ನಿಮ್ಮ ಹತ್ತಿರದಲ್ಲೇ ಸಿಗುವಂತಹ ಈ ಗಿಡದಲ್ಲಿ ಹಲವು ರೋಗಗಳನ್ನು ಹೋಗಲಾಡಿಸುವಂತಹ ಗುಣವನ್ನು ಹೊಂದಿದೆ ಹಾಗಿದ್ರೆ ಬನ್ನಿ ಈ ಗಿಡದಿಂದ ಯಾವ ಯಾವ ಖಾಯಿಲೆಗಳನ್ನು ಹೊಗ್ಲಾಡಿಸಬಹುದು ಅನ್ನೋದು ಇಲ್ಲಿದೆ ನೋಡಿ.

ದಮ್ಮು ನಿವಾರಣೆಗೆ: ಬೆಳ್ಳುಳ್ಳಿ, ಹಿಪ್ಪಲಿ, ಮೆಣಸು, ಕಟುಕರೋಹಿಣಿ ಮತ್ತು ಆಡುಸೋಗೆ ಎಲೆಗಳನ್ನು ಸಮತೂಕದಷ್ಪು ಬಿಸಿನೀರಿನಲ್ಲಿ ಅರೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಶೋಧಿಸಿ ದಿನಕ್ಕೆ ಎರಡು ಬಾರಿ ಉಪಯೋಗಿಸುವುದು ಅಥವಾ ಆಡುಸೋಗೆ ಎಲೆಯ ಒಣಗಿದ ಚೂರ್ಣದ ಗೊಗೆಯನ್ನು ಬೀಡಿ ರೂಪದಲ್ಲಿ ಸೇದುದ್ದರಿಂದ ದಮ್ಮು ವ್ಯಾಧಿ ಉಪಶಮನವಾಗುತ್ತದೆ.

ಕೆಮ್ಮು ನಿವಾರಣೆಗೆ: ಸುಮಾರು 5ಗ್ರಾಂ ಆಡುಸೋಗೆ, 5ಗ್ರಾಂ ಹಸಿರು ಅಮೃತಬಳ್ಳಿಯ ಕಷಾಯ ಮಾಡಿ ಆರಿಸಿ ಶೋಧಿಸಿಟ್ಟುಕೊಳ್ಳುವುದು. ಇದನ್ನು ದಿವಸಕ್ಕೆರಡು ಬಾರಿ 10 ಗ್ರಾಂ ನಷ್ಟು ಶುದ್ಧ ಜೇನಿನಲ್ಲಿ ಕುಡಿಸುವುದು. ಇದು ಒಂದು ಉಪಯುಕ್ತವಾದ ವನೌಷಧಿ. ಮಕ್ಕಳಿಗಾದರೆ ಆಡುಸೋಗೆ ಎಲೆಗಳ 5ಗ್ರಾಂ ರಸವನ್ನು ಸ್ವಲ್ಪ ಜೇನಿನಲ್ಲಿ ಸೇರಿಸಿ, ಸ್ವಲ್ಪ ಬಿಸಿಮಾಡಿ ದಿವಸಕ್ಕೆ 4 ರಿಂದ 5 ಬಾರಿ ಕುಡಿಸುವುದು.

ಅಸ್ತಮ, ಗೂರಲು ನಿವಾರಣೆಗೆ: ಜ್ಯೇಷ್ಠಮಧು 10ಗ್ರಾಂ, ಹಿಪ್ಪಲಿ 20ಗ್ರಾಂ ಹಾಗೂ 5 ಗ್ರಾಂ ಆಡುಸೋಗೆ ಎಲೆಗಳನ್ನು ಚೆನ್ನಾಗಿ ಅರೆದು ಅಷ್ಟಾಂಶ ಕಷಾಯವನ್ನು ಮಾಡಿ ದಿವಸಕ್ಕೆ ಮೂರು ಬಾರಿ ಸ್ವಲ್ಪ ಜೇನು ಸೇರಿಸಿ ಕುಡಿಯುವುದು. ಅಥವಾ ಆಡುಸೋಗೆ ಎಲೆಯ ರಸ ಮತ್ತು ಸಮಭಾಗ ಸಕ್ಕರೆ ಸೇರಿಸಿ ರಸಾಯನ ಮಾಡಿ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ರಾತ್ರಿ ನೆಕ್ಕಿಸುವುದು. ಅಥವಾ 10-12 ಆಡುಸೋಗೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ಮಾಡಿ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಸುವುದು.

ಮೂತ್ರಾಶಯದ ಭಾದೆ, ನೋವು ನಿವಾರಣೆಗೆ: 20ಗ್ರಾಂ ಆಡುಸೋಗ ಎಲೆಗಲ ರಸಕ್ಕೆ 20ಗ್ರಾಂ ಜೇನು ತುಪ್ಪವನ್ನು ಸೇರಿಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದು ಹಾಗೂ ಬೇವಿನ ಎಲೆ ಮತ್ತು ಆಡುಸೋಗೆ ಎಲೆಗಳನ್ನು ಜಜ್ಜಿ ಸ್ವಲ್ಪ ಬಿಸಿ ಮಾಡಿ ಕಿಬ್ಬೊಟ್ಟೆಗೆ ಕಟ್ಟುವುದು ಅಥಾವ ಬಟ್ಟೆಯಲ್ಲಿ ಕಟ್ಟಿ ಶಾಖ ಕೊಡುವುದು ಇದರಿಂದ ಮೂತ್ರಾಶಯದ ನೋವು ನಿಲ್ಲುವುದು.

ಹುಳುಕಡ್ಡಿ, ತುರಿ, ನವೆ ನಿವಾರಣೆಗೆ: ಆಡುಸೋಗೆಯ ಚಿಗುರೆಲೆಗಳ ಜೊತೆಗೆ ಸ್ಪಲ್ಪ ಅರಿಷಿಣ ಸೇರಿಸಿ ಗೋಮೂತ್ರದಲ್ಲಿ ನುಣ್ಣಗೆ ಅರೆದು ಲೇಪಿಸುವುದು. ಎಣ್ಣೆ ಪದಾರ್ಥಗಳನ್ನು ವರ್ಜಿಸುವುದು. ಸೋಪನ್ನು ಬಳಸದೆ ಶೀಗೆಕಾಯಿ ಹಚ್ಚಿ ಸ್ನಾನ ಮಾಡುವುದು.

ಕಫದ ಕೆಮ್ಮು, ಜ್ವರ, ಉಬ್ಬಸ ನಿವಾರಣೆಗೆ: ಅಮೃತಬಳ್ಳಿ ಗುಳ್ಳದ ಬೇರು ಮತ್ತು ಆಡುಸೋಗೆ ಬೇರು ಇವುಗಳ 30 ಗ್ರಾಂ ಗಳಷ್ಟು ಕಷಾಯವನ್ನು ಮಾಡುವುದು, ಕಷಾಯವನ್ನು ಎರಡು ಭಾಗ ಮಾಡಿ, ಬೆಳಿಗ್ಗೆ ಸಾಯಂಕಾಲ ಕುಡಿಸುವುದು. ಈ ಮೂಲಿಕೆಗೆ ಶ್ವಾಸಕೋಶಗಳ ಬಾಧೆ ನೀಗಿ ಕೆಮ್ಮು, ದಮ್ಮು, ಉಬ್ಬಸ, ಗೂರಲು ವಾಸಿ ಮಾಡುವ ಮಹಾ ಗುಣವಿದೆ. ಶ್ವಾಶಕೋಶ ಶ್ವಾಸನಾಳದಲ್ಲಿರುವ ಕಫವನ್ನು ಕರಗಿಸಿ ಹೊರ ಹಾಕಿ ರಕ್ತ ಸುದ್ಧ ಮಾಡಿ ಜ್ವರವನ್ನು ತಗ್ಗಿಸಿ ರಕ್ತ ಉಗುಳುವ ವ್ಯಾಧಿಯನ್ನು ವಾಸಿ ಮಾಡುವ ಅಪೂರ್ವ ಶಕ್ತಿ ಇದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *