ದಿನಕ್ಕೆ ಕೇವಲ ಒಂದೆರಡು ಖರ್ಜೂರಗಳನ್ನು ತಿನ್ನುವುದರಿಂದ ಆಗುವ 20 ಉಪಯೋಗಗಳು

ಆರೋಗ್ಯ

ಖರ್ಜೂರದ ವಿಷಯದಲ್ಲಿ ಒಂದು ಗಾದೆ ನೆನೆಪಾಗುತ್ತದೆ ಅದೇನೆಂದರೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ನೋಡಲು ಬಹಳ ಚಿಕ್ಕದಾದ ಹಣ್ಣು. ಆದರೆ ಇದರ ಉಪಯೋಗ ಮಾತ್ರ ಮಹತ್ತರವಾದದ್ದು. ನೈಸರ್ಗಿಕವಾಗಿಯೇ ಅತ್ಯಂತ ಸಿಹಿ ಅಂಶದಿಂದ ಕೂಡಿರುವ ಈ ಹಣ್ಣು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಬಿಡದೇ ಕಾಡುವ ಕೆಲವು ಕಾಯಿಲೆಗಳಿಗೆ ಒಂದು ಉತ್ತಮ ಮನೆಮದ್ದಾಗಿ ಖರ್ಜೂರ.

ಖರ್ಜೂರವನ್ನು ನಿಮ್ಮ ದೈನಂದಿನ ಆಹಾರಕ್ರಮದ ಜೊತೆ ಜೊತೆಗೆ ದಿನಕ್ಕೆ ಕೇವಲ ಒಂದೆರಡು ಖರ್ಜೂರಗಳನ್ನು ತಿನ್ನುವುದನ್ನು ಅಳವಡಿಸಿಕೊಂಡರೆ ಏನೆಲ್ಲ ಲಾಭಗಳಿವೆ ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ ನೋಡಿ. ಮಲಬದ್ಧತೆ, ಕರುಳಿನ ಅಸ್ವಸ್ಥತೆ, ಹೃದಯದ ತೊಂದರೆ, ಅತಿಸಾರ, ಕಿಬ್ಬೊಟ್ಟೆಯ ಕ್ಯಾನ್ಸರ್, ಲೈಂಗಿಕ ಸಮಸ್ಯೆಗಳು ದೂರವಾಗುತ್ತದೆ.

ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ ರಕ್ತಹೀನತೆಯಿಂದ ಬಳಲುತ್ತಿದ್ದವರು ಪ್ರತಿದಿನ ಖರ್ಜೂರವನ್ನು ತಿಂದರೆ ಸಮಸ್ಯೆ ಗುಣಮುಖವಾಗುತ್ತದೆ. ಪ್ರತಿ 100 ಗ್ರಾಂ ಖರ್ಜೂರದಲ್ಲಿ 0.90 ಗ್ರಾಂ ಕಬ್ಬಿಣಾಂಶ ಇದೆ. ಕೆಂಪು ರಕ್ತದ ಪ್ರಮಾಣವನ್ನು ಹೆಚ್ಚಿಸಿ ರಕ್ತಹೀನತೆಯ ಸೋಂಕನ್ನು ನಿವಾರಿಸುತ್ತದೆ. ಕಣ್ಣಿನ ಆರೋಗ್ಯಕ್ಕೆ ಉತ್ತಮ ಈ ಹಣ್ಣು ಕಣ್ಣಿನ ಆರೋಗ್ಯ ಹೆಚ್ಚಿಸುವ ವಿಟಮಿನ್ ಝೀಕ್ಸಾಥಿನ್ ಮತ್ತು ಲುಟೆಯಿನ್‍ಗಳನ್ನು ಒಳಗೊಂಡಿದೆ. ಈ ಎರಡು ವಿಟಮಿನ್‍ಗಳು ಕಣ್ಣಿನ ಮಕ್ಯುಲರ್ ಮತ್ತು ರೆಟಿನಲ್‍ನ ಆರೋಗ್ಯವನ್ನು ಕಾಪಾಡುತ್ತವೆ.

ಅತಿಸಾರದ ನಿಯಂತ್ರಣ ಕ್ಯಾಲ್ಸಿಯಂ ಭರಿತ ಖರ್ಜೂರ ಅತಿಸಾರವನ್ನು ನಿಲ್ಲಿಸಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿದಿನ 3 ಖರ್ಜೂರವನ್ನು ನಿಯಮಿತವಾಗಿ ಸೇವಿಸಿದರೆ ಕರುಳಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಪ್ರತಿದಿನ ಮಲಗುವ ಮುನ್ನ ಮೂರು ಖರ್ಜೂರವನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಯಿಡಿ. ಬೆಳಗಾಗುವವರೆಗೆ ಅದು ತನ್ನ ರಸವನ್ನು ವಿರೇಚಕವಾಗಿ ಬಿಡುಗಡೆ ಮಾಡಿರುತ್ತದೆ. ಈ ನೀರಿನ ಮಿಶ್ರಣವನ್ನು ಕುಡಿದರೆ ಕರುಳಿನನ ಕಾರ್ಯನಿರ್ವಹಣೆಯು ಸರಾಗವಾಗುತ್ತದೆ. ಜೊತೆಗೆ ಮಲಬದ್ಧತೆಯು ಕಡಿಮೆಯಾಗುತ್ತದೆ.

ಹೆರಿಗೆಗೆ ಒಂದು ತಿಂಗಳು ಮುಂಚಿತವಾಗಿ ಪ್ರತಿದಿನ ಖರ್ಜೂರವನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಹೆರಿಗೆಯ ನೋವು ಸರಾಗವಾಗುತ್ತದೆ. ಜೊತೆಗೆ ರಕ್ತಸ್ರಾವದ ತೀವ್ರತೆಯು ಕಡಿಮೆಯಾಗುತ್ತದೆ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದಿಸುತ್ತದೆ.

ತೂಕದಲ್ಲಿ ಸಮತೋಲನ ಖರ್ಜೂರದಲ್ಲಿ ಆರೋಗ್ಯಕರ ಪೋಷಕಾಂಶಗಳು ತುಂಬಿರುತ್ತವೆ. ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಸಮತೋಲನದಲ್ಲಿರುತ್ತದೆ. ಜೊತೆಗೆ ಕರುಳಿನ ಕೆಲಸವನ್ನು ನಿಯಂತ್ರಿಸುತ್ತದೆ.

ಹೃದಯದ ಸಮಸ್ಯೆ ಹೊಂದಿರುವವರಿಗೆ ಪ್ರತಿ ದಿನ ಕರ್ಜೂರ ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಅಲ್ಲದೆ ಪ್ರತಿದಿನ ಖರ್ಜೂರವನ್ನು ನೀರಿನಲ್ಲಿ ನೆನೆಹಾಕಿ, ಬೆಳಗ್ಗೆ ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೃದಯಾಘಾತವನ್ನು ತಡೆಗಟ್ಟಬಹುದು.

ಮೆದುಳಿಗೆ ಒಳ್ಳೆಯದು ಖರ್ಜೂರದಲ್ಲಿ ರಂಜಕವು ಸಮೃದ್ಧವಾಗಿರುವುದರಿಂದ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ 3 ಖರ್ಜೂರ ಸೇವಿಸುವುದರಿಂದ ಮೆದುಳಿಗೆ ಅಗತ್ಯವಿರುವ ಪೌಷ್ಟಿಕಾಂಶವನ್ನು ಇದು ಒದಗಿಸುತ್ತದೆ. ಈ ಹಣ್ಣು ಫ್ರಕ್ಟೋಸ್, ಸುಕ್ರೋಸ್ ಮತ್ತು ಗ್ಲುಕೋಸ್ ನಂತಹ ನೈಸರ್ಗಿಕ ಸಕ್ಕರೆ ಅಂಶದಿಂದ ಭರಿತವಾಗಿದೆ. ಹಾಲಿನೊಂದಿಗೆ ಇದರ ತಿರುಳನ್ನು ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ದೊರೆಯುತ್ತದೆ.

ಕೂದಲ ಆರೋಗ್ಯಕ್ಕೆ ಪ್ರತಿದಿನ ಸುಮಾರು ಎರಡರಿಂದ ಮೂರು ಖರ್ಜೂರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೂದಲ ಬುಡಗಳು ದೃಢಗೊಳ್ಳುವ ಮೂಲಕ ಕೂದಲು ಉದುರುವ ಸಂಖ್ಯೆ ಕಡಿಮೆಯಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *