ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು ಕ್ಷಣ ಮಾರ್ಗದಲ್ಲಿ ವಾಸಿ

ಆರೋಗ್ಯ

ಗ್ಯಾಸ್ಟ್ರಿಕ್ ನಮಗೆಲ್ಲರಿಗೂ ಆಗಾಗ ಎದುರಾಗುತ್ತಲೇ ಇರುತ್ತದೆ. ಇದೇನೋ ಭಾರೀ ಎನ್ನುವಂತಹ ತೊಂದರೆ ಅಲ್ಲದಿದ್ದರೂ ನಾಲ್ಕು ಜನರ ನಡುವೆ ಇದ್ದಾಗ ಈ ತೊಂದರೆಯಿಂದ ಮುಜುಗರ ಅನುಭವಿಸಬೇಕಾಗಿ ಬರಬಹುದು. ಈ ತೊಂದರೆಯನ್ನು ನಿವಾರಿಸಲು ಸಾಮಾನ್ಯವಾದ ಐದು ಮನೆಮದ್ದುಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

ಯಾವ ಆಹಾರದಿಂದ ಯಾರಿಗೆ ಗ್ಯಾಸ್ಟ್ರಿಕ್ ಎದುರಾಗಬಹುದು ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಸಾಮಾನ್ಯವಾಗಿ ಆಲೂಗಡ್ಡೆ ಬದನೆಕಾಯಿ, ಕಡ್ಲೆಕಾಳು ಅಥವಾ ಕಾಬೂಲ್ ಕಡ್ಲೆ, ಮೊದಲಾದವು ಹೆಚ್ಚಿನವರಿಗೆ ಗ್ಯಾಸ್ಟ್ರಿಕ್ ಉಂಟು ಮಾಡುತ್ತವೆ. ಇದು ಎದುರಾದಾಗ ದೈಹಿಕ ತೊಂದರೆಗಳಿಗಿಂತಲೂ ನಾಲ್ಕು ಜನರ ಮಧ್ಯೆ ಎದುರಿಸಬೇಕಾದ ಮುಜುಗರವೇ ಅತಿ ಹೆಚ್ಚಿನ ತೊಂದರೆಯಾಗಿ ಕಾಡುತ್ತದೆ. ಗ್ಯಾಸ್ಟ್ರಿಕ್ ಅಥವಾ ವಾಯುಪ್ರಕೋಪ ಎದುರಾದಾಗ ಬಲವಂತವಾಗಿ ಒತ್ತಿ ಹಿಡಿದರೆ ಇದರಿಂದಲೂ ಬೇರೆ ಬಗೆಯ ತೊಂದರೆಗಳು ಎದುರಾಗಬಹುದು. ಹೊಟ್ಟೆಯ ಸೆಡೆತ, ಹೊಟ್ಟೆಯುಬ್ಬರಿಕೆ, ತಲೆ ಸುತ್ತುವಿಕೆ ಮತ್ತು ಎದೆಯುರಿ ಮೊದಲಾದವು ಎದುರಾಗುತ್ತವೆ. ಈ ತೊಂದರೆಗೆ ವೈದ್ಯಕೀಯ ಭಾಷೆಯಲ್ಲಿ flatulence ಎಂದು ಕರೆಯಲಾಗುತ್ತದೆ. ಗ್ಯಾಸ್ಟ್ರಿಕ್, ಹೆಸರೇ ಸೂಚಿಸುವಂತೆ ಜೀರ್ಣಾಂಗಗಳಲ್ಲಿ ವಾಯು ಉತ್ಪತ್ತಿಯಾಗಿ ಹೊರಬರಲು ನೀಡುವ ಒತ್ತಡವಾಗಿದೆ. ಜೀರ್ಣಂಗಗಳಲ್ಲಿ ವಾಯು ತುಂಬಿಕೊಳ್ಳಲು ಎರಡು ಬಗೆಯ ಕಾರಣಗಳಿವೆ.

​ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣಗಳು: ಮೊದಲನೆಯದ್ದು ಊಟದ ಸಮಯದಲ್ಲಿ ಪ್ರತಿ ತುತ್ತನ್ನೂ ನುಂಗುವಾಗ ಇದರೊಂದಿಗೆ ಕೊಂಚ ಪ್ರಮಾಣದಲ್ಲಿ ಹೊಟ್ಟೆ ಸೇರುವ ವಾತಾವರಣದ ಗಾಳಿ. ಎರಡನೆಯದು ಅಹಾರ ಜೀರ್ಣಗೊಳ್ಳುವಾಗ ಉತ್ಪತ್ತಿಯಾಗುವ ಅನಿಲಗಳು. ಈ ತೊಂದರೆ ಹೇಗೆ ಎದುರಾಗುತ್ತದೆ ಎಂಬುದನ್ನು ಮೊದಲಾಗಿ ಅರಿತುಕೊಂಡರೆ ಈ ಸ್ಥಿತಿಗೆ ಎದುರಾಗುವುದರಿಂದ ತಡೆಯಲು ಹಾಗೂ ಪರಿಹಾರ ಪಡೆದುಕೊಳ್ಳುವುದನ್ನು ಸುಲಭವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ನುಂಗುವಾಗ ಸಂಗ್ರಹವಾಗುವ ವಾಯುವಿನಲ್ಲಿ ಪ್ರಮುಖವಾಗಿ ಆಮ್ಲಜನಕ ಮತ್ತು ನೈಟ್ರೋಜೆನ್ ಇರುತ್ತವೆ. ಜೀರ್ಣಕ್ರಿಯೆಯ ಸಮಯದಲ್ಲಿ ಉತ್ಪತ್ತಿಯಾಗುವ ಅನಿಲಗಳಲ್ಲಿ ಪ್ರಮುಖವಾಗಿ ಹೈಡ್ರೋಜೆನ್, ಮೀಥೇನ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಹಾಗೂ ಗಂಧಕ ಇರುತ್ತವೆ. ಅಲ್ಪ ಪ್ರಮಾಣದಲ್ಲಿ ಇತರ ಅನಿಲಗಳೂ ಇರಬಹುದು. ಗಂಧಕ ಎಷ್ಟು ಹೆಚ್ಚು ಇರುತ್ತದೆಯೋ ಅಷ್ಟೂ ವಾಯು ವಾಸನೆಭರಿತವಾಗಿರುತ್ತದೆ.

ಹೊಟ್ಟೆ ಉಬ್ಬರ ಸಮಸ್ಯೆಗೆ ಕ್ಷಣಾರ್ಧದಲ್ಲಿ ಪರಿಹಾರ ನೀಡುವ ಮನೆಮದ್ದುಗಳು ​ಈ ಸಮಸ್ಯೆಗೆ ವೈದ್ಯರ ಅವಶ್ಯಕತೆ ಇಲ್ಲ, ಮೀಥೇನ್ ಹೊಟ್ಟೆ ಉರಿಗೆ ಕಾರಣವಾಗುತ್ತದೆ. ಈ ಅನಿಲಗಳು ನೀವು ಯಾವ ಆಹಾರ ಸೇವಿಸಿದ್ದಿರಿ ಎಂಬ ಅಂಶವನ್ನು ಆಧರಿಸಿರುತ್ತವೆ. ಗಂಧಕ ಅಂಶ ಹೆಚ್ಚಿರುವ ಅಹಾರಗಳು (ಉದಾಹರಣೆಗೆ ಹಲಸಿನ ಬೀಜ) ಹೆಚ್ಚಿದ್ದಷ್ಟೂ ಪ್ರಕೋಪ ಹೆಚ್ಚೇ ಇರುತ್ತದೆ. ಬೀನ್ಸ್ ಕಾಳುಗಳು, ಕೋಸು, ಬಿಳಿ ಕಡ್ಲೆಕಾಳು ಅಥವಾ ಕಾಬೂಲ್ ಕಡ್ಲೆ, ಬೇಳೆಗಳು, ಸಕ್ಕರೆ ಭರಿತ ಹಣ್ಣುಗಳು ಮತ್ತು ಈ ಹಣ್ಣುಗಳ ರಸ ಎಲ್ಲವೂ ಜೀರ್ಣಕ್ರಿಯೆಯಲ್ಲಿ ಅಲ್ಪ ಮಟ್ಟಿನ ಅನಿಲಗಳನ್ನು ಉತ್ಪತ್ತಿ ಮಾಡುತ್ತವೆ. ಈ ಅನಿಲಗಳು ಸಾಮಾನ್ಯವಾಗಿ ದೊಡ್ಡ ಕರುಳಿನಲ್ಲಿ ಸಂಗ್ರಹಗೊಳ್ಳುತ್ತವೆ. ದೊಡ್ಡ ಕರುಳಿನಲ್ಲಿ ಹೆಚ್ಚಿನ ಪ್ರಮಾಣದ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳಿವೆ. ಇವು ಜೀರ್ಣಕ್ರಿಯೆಗೆ ಅಗತ್ಯವಾಗಿವೆ. ಅನಿಲದ ಪ್ರಮಾಣ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಸಂಗ್ರಹವಾಗುವವರೆಗೂ ಇದು ತೊಂದರೆ ಎಂದು ಅನ್ನಿಸುವುದಿಲ್ಲ. ಆದರೆ ಯಾವಾಗ ಇದು ಅತಿಯಾಗಿ ಸಂಗ್ರಹಗೊಂಡು ಬಿಡುಗಡೆಗೆ ಪ್ರಚೋದನೆ ನೀಡುತ್ತದೆಯೋ ಆಗ ಮುಜುಗರ ಎದುರಾಗುತ್ತದೆ. ಈ ತೊಂದರೆ ಎದುರಾದರೆ ಈಗ ವೈದ್ಯರ ಬಳಿ ಓಡಬೇಕಾಗಿಲ್ಲ. ಬದಲಿಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲಸು ಸುಲಭ ಸಾಮಾಗ್ರಿಗಳೇ ಇದಕ್ಕೆ ಸಾಕಾಗುತ್ತವೆ. ಇಂದಿನ ಲೇಖನದಲ್ಲಿ ಇಂತಹ ಶಕ್ತಿ ಇರುವ ಐದು ಪ್ರಮುಖ ಸಾಮಾಗ್ರಿಗಳನ್ನು ವಿವರಿಸಲಾಗಿದೆ, ಬನ್ನಿ, ನೋಡೋಣ

​ಓಮದ ಕಾಳುಗಳು: ಓಮ ನೋಡಲಿಕ್ಕೆ ಜೀರಿಗೆಯನ್ನು ಎರಡೂ ತುದಿಗಳಿಂದ ಒತ್ತಿ ಚಿಕ್ಕದಾಗಿಸಿರುವಂತೆ ಕಾಣುತ್ತದೆ. ಇದರಲ್ಲಿ ಥೈಮಾಲ್ ಎಂಬ ಪೋಷಕಾಂಶವಿದ್ದು ಜೀರ್ಣಾಂಗಗಳಲ್ಲಿ ಉತ್ಪತ್ತಿಯಾಗಿದ್ದ ವಾಯುಗಳನ್ನು ಕರಗಿಸಿಕೊಳ್ಳುವಂತೆ ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ. ಒಂದು ಲೋಟ ನೀರಿನಲ್ಲಿ ಅರ್ಧ ಚಿಕ್ಕ ಚಮಚ ಓಮದ ಕಾಳುಗಳನ್ನು ಹಾಕಿ ಕುದಿಸಿ ಈ ನೀರನ್ನು ತಣಿಸಿ ಕುಡಿದರೆ ಈ ತೊಂದರೆಯನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಬಹುದು ಎಂದು ಅವರು ತಿಳಿಸುತ್ತಾರೆ. ಉತ್ತಮ ಪರಿಹಾರಕ್ಕಾಗಿ ದಿನಕ್ಕೊಂದು ಲೋಟ ಈ ನೀರು ಕುಡಿದರೆ ಸಾಕು.

​ಜೀರಿಗೆ ಕುದಿಸಿದ ನೀರು: ವಾಯುಪ್ರಕೋಪಕ್ಕೆ ಜೀರಿಗೆ ಕುದಿಸಿದ ನೀರಿನ ಸೇವನೆ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ. ಜೀರಿಗೆಯಲ್ಲಿರುವ ಅವಶ್ಯಕ ತೈಲಗಳು ಲಾಲಾರಸವನ್ನು ಹೆಚ್ಚು ಹೆಚ್ಚಾಗಿ ಸ್ರವಿಸುವಂತೆ ಪ್ರಚೋದಿಸುತ್ತವೆ ಹಾಗೂ ಇದು ಆಹಾರವನ್ನು ಇನ್ನಷ್ಟು ಸುಲಭವಾಗಿ ಜೀರ್ಣಗೊಳಿಸಲು ನೆರವಾಗುತ್ತದೆ ಮತ್ತು ಅತಿಯಾಗಿ ಅನಿಲಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ ಎಂದು ಡಾ. ಸೂದ್ ತಿಳಿಸುತ್ತಾರೆ. ಇದಕ್ಕಾಗಿ ಒಂದು ದೊಡ್ಡ ಚಮಚದಷ್ಟು ಜೀರಿಗೆಯನ್ನು ಎರಡು ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಸುಮಾರು ಹತ್ತರಿಂದ ಹದಿನೈದು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿದ ಬಳಿಕ ಉರಿ ಆರಿಸಿ ತಣಿಯಲು ಬಿಡಬೇಕು. ಬಳಿಕ ಈ ನೀರನ್ನು ಸೋಸಿ ಉಗುರುಚೆಚ್ಚನಿದ್ದಂತೆ ಊಟವಾದ ಕೊಂಚ ಹೊತ್ತಿನ ಬಳಿಕ ಸೇವಿಸಬೇಕು.

ಇಂಗು: ಒಂದು ವೇಳೆ ವಾಯುಪ್ರಕೋಪ ಎದುರಾಗಿ ಹೊಟ್ಟೆಯುಬ್ಬರಿಕೆ ಕಾಣಿಸಿಕೊಂಡರೆ ತಕ್ಷಣವೇ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ (ಉಗುರು ಬೆಚ್ಚಗಾಗಿಸಲು ಸಾಧ್ಯವಿಲ್ಲದಿದ್ದರೆ ತಣ್ಣೀರೂ ಸರಿ) ಅರ್ಧ ಚಿಕ್ಕ ಚಮಚ ಇಂಗು ಹಾಕಿ ಕುಡಿದು ಬಿಡಬೇಕು. ಇಂಗಿನಲ್ಲಿ ಬ್ಯಾಕ್ಟೀರಿಯಾಗಳು ಅಹಾರವನ್ನು ಅತಿಯಾಗಿ ಜೀರ್ಣಿಸಿಕೊಂಡು ಉತ್ಪತ್ತಿ ಮಾಡಿದ ಅನಿಲಗಳನ್ನು ಇಲ್ಲವಾಗಿಸುವ ಗುಣವಿದೆ. ಆಯುರ್ವೇದದ ಪ್ರಕಾರ, ಇದು ದೇಹದಲ್ಲಿ ವಾತ ದೋಷವನ್ನು ಸರಿಪಡಿಸಲು ನೆರವಾಗುತ್ತದೆ. “ವಾತ ದೋಷಕ್ಕೆ ದೊಡ್ಡ ಕರುಳು ಪ್ರಮುಖ ಕಾರಣವಾಗಿದೆ. ಇದು ವಾಯುವಿನಿಂದ ಬರುವ ದೋಶವಾಗಿದೆ. ಕರುಳಿನಲ್ಲಿ ವಾತ ಹೆಚ್ಚಾಗುತ್ತಿದ್ದಂತೆಯೇ ವಾಯುವೂ ಹೆಚ್ಚುತ್ತದೆ”

​ಹಸಿ ಶುಂಠಿ: ಇನ್ನೊಂದು ಅತ್ಯುತ್ತಮ ಆಯುರ್ವೇದೀಯ ಪರಿಹಾರ ಎಂದರೆ ಒಂದು ಚಿಕ್ಕ ಚಮಚದಷ್ಟು ತಾಜಾ ಹಸಿಶುಂಠಿಯ ರಸವನ್ನು ಒಂದು ಚಿಕ್ಕ ಚಮಚ ಲಿಂಬೆರಸದೊಂದಿಗೆ ಊಟದ ಬಳಿಕ ಸೇವಿಸುವುದಾಗಿದೆ ಎಂದು ಡಾ. ವಸಂತ ಲಾಡ್ ತಿಳಿಸುತ್ತಾರೆ. ಹಸಿಶುಂಠಿಯಿಂದ ತಯಾರಿಸಿದ ಟೀ ಸಹಾ ಅನಿಲ ಬಿಡುಗಡೆಗೆ ಇನ್ನೊಂದು ಉತ್ತಮ ಪರಿಹಾರವಾಗಿದೆ. ಹಸಿಶುಂಠಿ ಹಲವು ತೊಂದರೆಗಳಿಗೆ ನೈಸರ್ಗಿಕ ಶಮನಕಾರಕವಾಗಿದ್ದು ಇದರಲ್ಲಿ ವಾಯುಪ್ರಕೋಪಕ್ಕೂ ಸೂಕ್ತ ಶಮನಕಾರಿ ಗುಣಗಳಿವೆ.

​ಲಿಂಬೆ ರಸ ಮತ್ತು ಅಡುಗೆ ಸೋಡಾ: ಆಯುರ್ವೇದ ತಜ್ಞ ಡಾ. ವಸಂತ ಲಾಡ್ ರವರ ಪ್ರಕಾರ ಇನ್ನೊಂದು ಸರಳ ಮತ್ತು ಪ್ರಭಾವಶಾಲಿ ವಿಧಾನವೆಂದರೆ ಒಂದು ಚಿಕ್ಕ ಚಮಚ ಲಿಂಬೆರಸದಲ್ಲಿ ಅರ್ಧ ಚಿಕ್ಕ ಚಮಚ ಅಡುಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಕದಡಿ ಊಟದ ಬಳಿಕ ಕುಡಿಯುವುದು. ಈ ವಿಧಾನದಿಂದ ಜೀರ್ಣಾಂಗಗಳಲ್ಲಿ ಕಾರ್ಬನ್ ಡೈ ಆಕ್ಸೈಡ್ ಉತ್ಪತ್ತಿಯಾಗುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ವಾಯುಪ್ರಕೋಪ ಪ್ರತಿಯೊಬ್ಬರಿಗೂ ಎದುರಾಗುವ ಸಾಮಾನ್ಯ ತೊಂದರೆ ಆಗಿದೆ. ಆದರೆ ಇದು ಸತತವಾಗಿ ಬಾಧೆ ನೀಡಿದರೆ ಇದು ಬೇರಾವುದೋ ಗಂಭೀರ ಸಮಸ್ಯೆಯ ಪರಿಣಾಮವಿರಬಹುದು ಉದಹಾರಣೆಗೆ ಲ್ಯಾಕ್ಟೋಸ್ ಅಸಹಿಷ್ಣುತೆ (lactose intolerance),ರಸದೂತಗಳ ಅಸಮತೋಲನ ಅಥವಾ ಬೇರಾವುದೋ ಜೀರ್ಣಾಂಗ ಸಮಸ್ಯೆ ಇರಬಹುದು. ಈ ತೊಂದರೆ ಎದುರಾದಾಗ ತಕ್ಷಣದ ಪರಿಹಾರಕ್ಕೆ ಸುಲಭ ಮನೆಮದ್ದುಗಳು ಸಾಕಾಗುತ್ತವಾದರೂ ಈ ತೊಂದರೆ ಕಡಿಮೆಯಾಗದೇ ಮುಂದುವರೆಯುತ್ತಿದ್ದರೆ ಮಾತ್ರ ವೈದ್ಯರಲ್ಲಿ ಸಲಹೆ ಪಡೆಯುವುದು ಅಗತ್ಯವಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *