ಗಂಡಸರು ಮತ್ತು ಮಹಿಳೆಯರು ಎನ್ನದೆ ಎಲ್ಲರೂ ಸಾಮಾನ್ಯವಾಗಿ ಬೆನ್ನು ನೋವಿನಿಂದ ನರಳುತ್ತಿರುತ್ತಾರೆ. ಆರೋಗ್ಯಕರವಲ್ಲದ ಜೀವನ ಶೈಲಿ, ತುಂಬಾ ಹೊತ್ತು ಕಂಪ್ಯೂಟರ್ ನಲ್ಲಿ ಕೆಲಸ ಮಾಡುವುದು, ವ್ಯಾಯಾಮ ಮಾಡದಿರುವುದು, ಮಾನಸಿಕ ಒತ್ತಡ ಈ ಎಲ್ಲಾ ಕಾರಣಗಳಿದ ಬೆನ್ನು ನೋವು ಅಧಿಕವಾಗುತ್ತದೆ. ಈ ಸಾಮಾನ್ಯವಾದ ಸಮಸ್ಯೆಯನ್ನು ನಿಯಂತ್ರಿಸಬಹುದು. ಆದರೆ ಅದಕ್ಕಾಗಿ ನೀವು ದಿನ ನಿತ್ಯ ಕೆಲವೊಂದು ಅಂಶಗಳನ್ನು ತಪ್ಪದೆ ಮಾಡಬೇಕಾಗುತ್ತದೆ.
ಬೆನ್ನು ನೋವನ್ನು ನಿಯಂತ್ರಿಸಲು, ನೀವು ಅತಿಯಾದ ಭಾರವನ್ನು ಎತ್ತಬಾರದು. ಇದು ಈ ಸಮಸ್ಯೆಯ ಮೊದಲ ಪರಿಹಾರ, ಇದನ್ನು ತಪ್ಪದೆ ಪಾಲಿಸಬೇಕು ಅದರಂತೆ ಸಿ-ಸೆಕ್ಷನ್ ಶಸ್ತ್ರ ಚಿಕಿತ್ಸೆಗೆ ಒಳಗಾದ ಹೆಂಗಸರು ಭಾರೀ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇವರಿಗೆ ಬೆನ್ನು ನೋವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಪ್ಪಾದ ಭಂಗಿಯಲ್ಲಿ ಕೂರುವುದರಿಂದ ಸಹ ಬೆನ್ನು ನೋವು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನೀವು ಕೆಲಸ ಮಾಡುವಾಗ ಸರಿಯಾದ ಭಂಗಿಯಲ್ಲಿ ತಪ್ಪದೆ ಕೂರಲು ಪ್ರಯತ್ನಿಸಿ. ಮಧ್ಯ ವಯಸ್ಸು ದಾಟಿದ ಮಹಿಳೆಯರಿಗೆ ಬೆನ್ನು ನೋವು ಹೆಚ್ಚಾಗಿ ಕಂಡು ಬರುತ್ತದೆ. ಈ ರೀತಿ ಬೆನ್ನು ನೋವು ಬರದಂತೆ ತಡೆಯಲು ಈ ಕೆಳಗಿನ ಸಲಹೆ ಪಾಲಿಸ ಬಹುದು.
ಕ್ಯಾಲ್ಸಿಯಂ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಹೆರಿಗೆಯಾದಾಗ ಅಧಿಕ ಕ್ಯಾಲ್ಸಿಯಂ ಇರುವ ಆಹಾರಗಳನ್ನು ಸೇವಿಸಬೇಕು. ತುಂಬಾ ಹೊತ್ತು ಕೂತು ಕೆಲಸ ಮಾಡುವಾಗ ಕೂರುವ ಭಂಗಿ ಸರಿಯಾಗಿದ್ದರೆ (ಬೆನ್ನಿಗೆ ಸಪೋರ್ಟ್ ಕೊಟ್ಟು ಕೂರಿ) ಬೆನ್ನುನೋವು ಬರುವುದಿಲ್ಲ. ದೇಹದ ತೂಕ ಮಿತಿಮೀರಿ ಹೆಚ್ಚಾಗಲು ಬಿಡಬಾರದು. 1/2 ಗಂಟೆ ನಡೆಯುವ ವ್ಯಾಯಾಮ ಒಳ್ಳೆಯದು. ಡ್ರೈವಿಂಗ್ ಮಾಡುವಾಗ ಸೀಟ್ ನಲ್ಲಿ ಕೂರುವಾಗ ಬೆನ್ನಿಗೆ ಸರಿಯಾದ ಸಪೋರ್ಟ್ ಇಟ್ಟುಕೊಳ್ಳುವುದು ಒಳ್ಳೆಯದು.
ನಿಮ್ಮ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‍ಗಳು ನಿಮ್ಮ ಕಣ್ಣಿನ ದೃಷ್ಟಿಗೆ ನೇರವಾಗಿ ಇರುವಂತೆ ನೋಡಿಕೊಳ್ಳಿ.
ಬನ್ನಿ ನಿಮ್ಮ ಬೆನ್ನು ನೋವು ನಿವಾರಿಸಲು ನಿಮಗೆ ಅಗತ್ಯವಾದ ಕೆಲವು ಮಾಹಿತಿಗಳನ್ನು ನಾವು ತಂದಿದ್ದೇವೆ. ಅವುಗಳ ಕುರಿತು ಒಂದು ನೋಟ ಹರಿಸಿ ಬರೋಣ. ನಿಮ್ಮ ಹಾಸಿಗೆ: ನಿಮಗೆ ಬೆನ್ನು ನೋವು ಇದ್ದಲ್ಲಿ ಮೊದಲು ನಿಮ್ಮ ಹಾಸಿಗೆಯನ್ನು ಪರೀಕ್ಷಿಸಿ. ಮೃದುವಾದ ಹಾಸಿಗೆಯು ನಿಮಗೆ ಸುಖಕರವಾಗಿರುತ್ತದೆ ಮತ್ತು ಗಟ್ಟಿಯಾದ ಹಾಸಿಗೆಯು ನಿಮಗೆ ಬೆನ್ನು ನೋವನ್ನು ತರುತ್ತದೆ.
ನಿಮ್ಮ ಭಂಗಿ: ಮನೆಯಲ್ಲಾಗಲಿ, ಕಚೇರಿಯಲ್ಲಾಗಲಿ ಸರಿಯಾದ ಭಂಗಿಯಲ್ಲಿ ಕೂರಲು ಪ್ರಯತ್ನಿಸಿ. ಇದರಿಂದ ಬೆನ್ನು ನೋವನ್ನು ನಿಯಂತ್ರಿಸಿಕೊಳ್ಳಬಹುದು.
ಸ್ನಾಯುಗಳ ಸಮಸ್ಯೆ: ಒಂದೇ ಭಂಗಿಯಲ್ಲಿ ಸುಮಾರು ಹೊತ್ತು ನಿಲ್ಲಲು ಹೋಗಬೇಡಿ. ಇದರಿಂದ ನಿಮ್ಮ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ಒತ್ತಡವು ಬೆನ್ನು ನೋವಿಗೆ ಕಾರಣವಾಗಿ ಪರಿವರ್ತನೆಯಾಗುತ್ತದೆ.
ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು: ಇದು ಹೆಂಗಸರಿಗೆ ಒಪ್ಪುವ ಸಲಹೆ- ಸಾಮಾನ್ಯವಾಗಿ ಹೆಂಗಸರು ಕೆಲಸದ ಸ್ಥಳದಲ್ಲಿ ಬಹಳ ಹೊತ್ತು ಕುಳಿತುಕೊಳ್ಳುವಾಗ ಒಂದೇ ಕಾಲನ್ನು ಕಾಲ ಮೇಲೆ ಹಾಕಿಕೊಂಡು ಕೂರಬೇಡಿ. ಕಾಲುಗಳನ್ನು ಬದಲಾಯಿಸುವ ಮೂಲಕ ನಿಮ್ಮ ಬೆನ್ನು ನೋವಿನ ಪ್ರಮಾಣವನ್ನು ಅಥವಾ ಬೆನ್ನು ನೋವು ಬರುವ ಸಾಧ್ಯತೆಯನ್ನು ನಿಯಂತ್ರಿಸಿಕೊಳ್ಳಬಹುದು.
ವ್ಯಾಲೆಟ್ ಸಮಸ್ಯೆ: ನಿಮಗೆ ಗೊತ್ತೇ? ಡೆಸ್ಕ್‌ಟಾಪ್ ಮುಂದೆ ಕೆಲಸ ಮಾಡುವಾಗ ಹಿಂದಿನ ಪಾಕೆಟ್‌ನಲ್ಲಿ ವ್ಯಾಲೆಟ್ ಇರಿಸಿಕೊಳ್ಳುವುದರಿಂದ ಬೆನ್ನು ನೋವು ಬರುತ್ತದೆ. ಇದನ್ನು ನಿಯಂತ್ರಿಸುವುದರಿಂದ ಬೆನ್ನು ನೋವು ಬರದಂತೆ ತಡೆಯಬಹುದು.
ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ: ಬೆನ್ನು ನೋವು ನಿವಾರಣೆಗೆ ಅಧಿಕ ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ. ವೈದ್ಯರ ಸಲಹೆ ಮೇರೆಗೆ ಕ್ಯಾಲ್ಸಿಯಂ ಇರುವ ಮಾತ್ರೆಗಳನ್ನು ಸೇವಿಸಬಹುದು. ಅಲ್ಲದೆ ಪ್ರತಿನಿತ್ಯ 1-2 ಲೋಟ ಹಾಲು ಕುಡಿಯಬೇಕು. ವಿಟಮಿನ್ ಡಿ ಅಧಿಕ ಸೇವಿಸಿ. ಅಣಬೆ, ಕಾಡ್ ಲಿವರ್, ಮೊಟ್ಟೆ, ಸೊಪ್ಪು ಮತ್ತು ಮೀನಿನಲ್ಲಿ ವಿಟಮಿನ್ ಡಿ ಹೆಚ್ಚಾಗಿ ಸೇವಿಸಬೇಕು.
ಮ್ಯೂಸಿಕ್ ಥೆರಪಿ: ಒಳ್ಳೆಯ ಸಂಗಿತವನ್ನು ಕೇಳುತ್ತಿದ್ದರೆ ಒತ್ತಡ ಕಡಿಮೆಯಾಗುತ್ತದೆ. ಒತ್ತಡ ಕಡಿಮೆಯಾದರೆ ಬೆನ್ನು ನೋವು ಕೂಡ ಕಡಿಮೆಯಾಗುವುದು. ಸಂಗೀತವನ್ನು ಕೇಳುವುದರಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಹೆಚ್ಚಿನ ಕಾಯಿಲೆಗಳು ಒತ್ತಡದಿಂದ ಬರುತ್ತದೆ. ಸಂಗೀತವು ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುವುದು.
ಪ್ರಾಣಾಯಾಮ: ಪ್ರಾಣಾಯಾಮ ಮಾಡುವುದರಿಂದ ಕೂಡ ಬೆನ್ನುನೋವಿಗೆ ಪರಿಹಾರವನ್ನು ಕಂಡು ಹಿಡಿಯಬಹುದು. ಪ್ರಾಣಾಯಾಮವನ್ನು ಮನೆಯಲ್ಲಿಯೇ ಮಾಡಬಹುದಾಗಿದ್ದು ಕೇವಲ ಬೆನ್ನು ನೋವು ಮಾತ್ರ ಕಡಿಮೆ ಮಾಡುವುದಲ್ಲದೆ, ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ, ಇದನ್ನು ಮಾಡಿದ್ದೇ ಆದರೆ ಇನ್ನೂ ಹತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.