ನಿಮ್ಮ ಕೂಸಿಗೆ ಎದೆಹಾಲು ಇಲ್ಲವೇ. ಗಾಬರಿಯಾಗಬೇಡಿ. ಆಡಿನ (ಮೇಕೆ) ಹಾಲು ಕುಡಿಸಿ. ಅದರಲ್ಲಿ ತಾಯಿಯ ಹಾಲಿನಲ್ಲಿರುವಷ್ಟೇ ಪೌಷ್ಟಿಕಾಂಶಗಳಿವೆ. ಅಷ್ಟೇ ಅಲ್ಲ, ಬೇಗ ಜೀರ್ಣವಾಗುತ್ತದೆ, ಎಂದು ಹಿರಿಯರು ಹೇಳುತ್ತಾರೆ.
ಇನ್ನೊಂದು ಖುಷಿಯ ವಿಚಾರ ಎಂದರೆ, ಇನ್ನು ಮುಂದೆ ಬೆಂಗಳೂರಿನಲ್ಲಿ ಮೇಕೆ ಹಾಲು ಸಿಗುತ್ತದೆ. ಶುಕ್ರವಾರ ನಗರದ ಲಾಲ್ ಬಾಗ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವ ಎ. ಮಂಜು ‘ಮೈ ಗೋಟ್’ ಹಾಲನ್ನು ಬಿಡುಗಡೆಗೊಳಿಸಿದರು. ಸೆಪ್ಟೆಂಬರ್ 1 ರಿಂದ ಆನ್ ಲೈನ್ ನಲ್ಲೂ ಮೇಕೆ ಹಾಲು ಸಿಗಲಿದೆ ಎಂದು ಹೇಳಲಾಗಿದೆ. 200 ಎಂಎಲ್ ಹಾಗೂ ಅರ್ಧ ಲೀಟರ್ ಬಾಟಲಿಗಳಲ್ಲಿ ಲಭ್ಯವಿರುವ ಮೇಕೆ ಹಾಲನ್ನು 3 ದಿನಗಳ ಕಾಲ ಫ್ರಿಜ್ ನಲ್ಲಿ ಇಡಬಹುದು. ರಾಜ್ಯದ ವಿಧವೆಯರಿಗೆ ಹಾಗೂ ನಿರಾಶ್ರಿತರಿಗಾಗಿ ಅಕ್ಟೋಬರ್ ನಿಂದ ‘ಮೇಕೆ ಭಾಗ್ಯ’ ಯೋಜನೆ ಜಾರಿಗೊಳಿಸಲಾಗುವುದು ಎಂದು ಕೂಡ ಅವರು ಹೇಳಿದರು.
ಮೈಸೂರಿನ ನಂಜನಗೂಡು ತಾಲೂಕಿನ ಯಡೇಹಳ್ಳಿಯ ಯಶೋದವನ ಸಂಸ್ಥೆ ಈ ಹಾಲನ್ನು ಮಾರುಕಟ್ಟೆಗೆ ತಂದಿದೆ. ಈ ಹಾಲು ಪ್ರತಿ ಲೀಟರ್ ಗೆ 250 ರೂ.ಗಳಾಗಿದೆ. ಡೆಂಘೆ ಜ್ವರಕ್ಕೆ ರಾಮಬಾಣವಾಗಿರುವ ಮೇಕೆ ಹಾಲು ದೆಹಲಿಯಲ್ಲಿ ಲೀಟರ್ ಗೆ 2 ರಿಂದ 3 ಸಾವಿರದವರೆಗೆ ಮಾರಾಟಗೊಂಡಿತ್ತು.
ಪ್ರತಿ ಲೀಟರ್ ಹಾಲಿಗೆ 250 ರೂ. ಮೈಸೂರಿನ ನಂಜನಗೂಡು ತಾಲೂಕಿನ ಯೆಡೆಹಳ್ಳಿಯಲ್ಲಿ ಸುಮಾರು 50 ಎಕರೆಯಲ್ಲಿ 1,500 ಮೇಕೆಗಳ ಮೇಕೆ ಫಾರ್ಮ್ ಯಶೋಧವನ ಸಂಸ್ಥೆ ಮೇಕೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಮೈ ಗೋಟ್ ಹೆಸರಿನ ಈ ಹಾಲು ಪ್ರತಿ ಲೀಟರ್‌ಗೆ ಬೆಂಗಳೂರಿನಲ್ಲಿ 250 ರೂ. ನಿಗದಿಪಡಿಸಲಾಗಿದೆ. ಕಾರಣ ಇದರಲ್ಲಿರುವ ರೋಗ ನಿರೋಧಕ ಶಕ್ತಿ ಹಾಗೂ ಸಂಸ್ಕರಣ, ಸಾಗಾಣೆ ವೆಚ್ಚ ಪ್ರತಿ ಲೀಟರ್ ಹಾಲಿಗೆ ಸಂಸ್ಥೆಗೆ 120 ರೂ. ಖರ್ಚಾಗುತ್ತಿದೆ. ಕಳೆದ 3 ತಿಂಗಳಿನಿಂದ ಮೇಕೆ ಹಾಲಿಗೆ ಹೆಚ್ಚಿನ ಮಾರುಕಟ್ಟೆ ಸಿಗಲೆಂದು ಬೆಂಗಳೂರಿನಲ್ಲಿ ಸಾವಿರ ಲೀಟರ್‌ಗೂ ಅಧಿಕ ಹಾಲು ಉಚಿತವಾಗಿ ಮಾರಾಟ ಮಾಡಲಾಗಿತ್ತು ಎಂದು ಸಂಸ್ಥೆಯ ಮುಖ್ಯಸ್ಥ ಶ್ರೀನಿವಾಸಾಚಾರ್ ತಿಳಿಸಿದರು.
ರಾಜ್ಯದ 34 ಕುರಿ ಮತ್ತು ಮೇಕೆ ಮಾರಾಟ ಮಳಿಗೆಗಳ ಮೂಲಕ ಮೇಕೆ ಮತ್ತು ಕುರಿ ಮಾಂಸ ಮಾರಾಟ ಮಾಡಿ ಮಾರಾಟಗಾರರಿಗೆ ಅನ್ಯಾಯವಾಗದಂತೆ ಪೂರ್ತಿ ಮೇಕೆ ಅಥವಾ ಕುರಿಯ ಭಾರಕ್ಕೆ ಹಣ ನೀಡುವ ಯೋಜನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಬಜೆಟ್‌ನಲ್ಲಿ ಘೋಷಿಸಿರುವಂತೆ ವಿಧವೆಯರು ಮತ್ತು ನಿರಾಶ್ರಿತ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ 10 ಸಾವಿರ ಘಟಕಗಳ ಮೇಕೆ ಅಥವಾ ಕುರಿಗಳನ್ನು ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ತಿಂಗಳಿನಿಂದ ಶೇ. 75ರ ಸಬ್ಸಿಡಿಯೊಂದಿಗೆ ನೀಡಲಾಗುವುದು ಎಂದರು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.