ಅಲೋವೆರಾ ಗಿಡವನ್ನು ಮನೆಯ ಬಾಗಿಲಿಗೆ ಕಟ್ಟುವುದರಿಂದ ಏನ್ ಪ್ರಯೋಜನವಿದೆ ಗೊತ್ತೇ

ಜ್ಯೋತಿಷ್ಯ ಧಾರ್ಮಿಕ

ಅಲೋವೆರಾ ಗಿಡವನ್ನು ಮನೆಯ ಬಾಗಿಲಿಗೆ ಕಟ್ಟುವುದರಿಂದ ಏನ್ ಪ್ರಯೋಜನವಿದೆ ಗೊತ್ತೇ ಮನೆಯಲ್ಲಿ ಆಲೋವೆರಾ ಗಿಡವನ್ನು ಕಟ್ಟಬೇಕು ಇದರಿಂದ ಮನೆಗೆ ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ. ಏಕೆ ಆಲೋವೆರಾ ಗಿಡವನ್ನು ಮನೆಯ ಒಳಗೆ ಕಟ್ಟಬೇಕು, ಹೇಗೆ ಕಟ್ಟಬೇಕು, ಯಾವ ದಿನ ಕಟ್ಟಬೇಕು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮನೆಯ ಒಳಗೆ ಆಲೋವೆರಾ ಗಿಡವನ್ನು ಕಟ್ಟುವುದು ಒಳ್ಳೆಯದು ಎಂಬ ನಂಬಿಕೆ ಇದೆ. ಅಮಾವಾಸ್ಯೆಯ ದಿನ ಆಲೋವೆರಾ ಗಿಡವನ್ನು ಕಟ್ಟುವುದು ಒಳ್ಳೆಯದು, ಶುಕ್ರವಾರ ಕಟ್ಟಿದರೂ ಒಳ್ಳೆಯದು. ಯಾವುದೇ ಕೆಟ್ಟ ದೃಷ್ಟಿ ಮನೆಯ ಮೇಲೆ ಬೀಳಬಾರದು, ದುಷ್ಟ ಶಕ್ತಿ ಮನೆಯ ಒಳಗೆ ಪ್ರವೇಶ ಮಾಡಬಾರದು ಎಂದು ಅಲೋವೆರಾ ಗಿಡವನ್ನು ಮನೆಯ ಒಳಗೆ ಕಟ್ಟುತ್ತಾರೆ. ಆಲೋವೆರಾ ಗಿಡವನ್ನು ಮನೆಯ ಒಳಗೆ ಕಟ್ಟಲು ಬೇರು ಸಮೇತ ಇರುವ ಆಲೋವೆರಾ ಗಿಡವನ್ನು ತೆಗೆದುಕೊಳ್ಳಬೇಕು. ಬಹಳ ಚಿಕ್ಕ ಗಿಡವನ್ನು ತೆಗೆದುಕೊಂಡರೆ ಬೇಗನೆ ಒಣಗಿಹೋಗುತ್ತದೆ. ಅರ್ಧ ಒಣಗಿದ ಎಲೆಗಳಿರುವ ಆಲೋವೆರಾ ಗಿಡವನ್ನು ತೆಗೆದುಕೊಳ್ಳಬಾರದು ಏಕೆಂದರೆ ಎಲೆ ಭಾರವಾಗುತ್ತದೆ ಇದರಿಂದ ಗಿಡ ಮುರಿದು ಬೀಳುವ ಸಂಭವ ಇರುತ್ತದೆ ಮತ್ತು ಒಣಗಿದ ಎಲೆ ಇರುವ ಗಿಡವನ್ನು ಇಡುವುದು ಮನೆಗೆ ಒಳ್ಳೆಯದಲ್ಲ.

ನಂತರ ಗಿಡವನ್ನು ಒಂದು ಬಟ್ಟೆಯಿಂದ ಅಥವಾ ನೀರಿನಿಂದ ತೊಳೆಯಬೇಕು. ಅದಕ್ಕೆ ಗಂಧ, ಅರಿಶಿಣ, ಕುಂಕುಮದ ಅಲಂಕಾರ ಮಾಡಬೇಕು. ಗಿಡದ ಬುಡದ ಮೇಲೆ ಅರಿಶಿಣ, ಕುಂಕುಮ, ಗಂಧ ಹಚ್ಚಬೇಕು. ಹೂವು ಹಾಕಿ ಊದಿನ ಕಡ್ಡಿಯಿಂದ ಪೂಜೆ ಮಾಡಬೇಕು. ಗಿಡವನ್ನು ಕಟ್ಟಲು ಟ್ವೈನ್ ದಾರ ಅಥವಾ ಯಾವುದೇ ದಾರವನ್ನು ತೆಗೆದುಕೊಳ್ಳಬಹುದು. ಗಿಡದ ಬುಡಕ್ಕೆ ದಾರದಿಂದ ಕಟ್ಟಬೇಕು ನಂತರ ಅದನ್ನು ಮನೆಯ ಒಳಗೆ ಎಲ್ಲಾದರೂ ಬುಡ ಮೇಲ್ಮುಖವಾಗಿ ಎಲೆಗಳು ಕೆಳಮುಖವಾಗಿ ಇರುವಂತೆ ಕಟ್ಟಬೇಕು.

ಆಲೋವೆರಾ ಗಿಡವು ಆರೋಗ್ಯ ದೃಷ್ಟಿಯಿಂದ, ಆಧ್ಯಾತ್ಮಿಕ ದೃಷ್ಟಿಯಿಂದ ಬಹಳ ಉಪಯುಕ್ತವಾಗಿದೆ. ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡ ಇದ್ದಂತೆ ಆಲೋವೆರಾ ಗಿಡ ಇರುವುದು ಒಳ್ಳೆಯದು. ಕಟ್ಟಿದ ಆಲೋವೆರಾ ಗಿಡ ಬೇಗ ಕೊಳೆತು ಹೋದರೆ ಮನೆಗೆ ದೃಷ್ಟಿ ಆಗಿದೆ ಅಥವಾ ಕೆಟ್ಟ ಶಕ್ತಿ ಮನೆ ಒಳಗೆ ಪ್ರವೇಶ ಮಾಡಿದೆ ಎಂದರ್ಥ ಆದ್ದರಿಂದ ಬೇಗನೆ ಅದನ್ನು ಚೇಂಜ್ ಮಾಡಬೇಕು. ಗಿಡ ಕೊಳೆಯದೆ ಹಸಿರಾಗಿ ಬೆಳೆದರೆ ಮನೆಯಲ್ಲಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಒಮ್ಮೆ ಕಟ್ಟಿದ ಗಿಡ ಒಣಗಿದರೆ, ಕೊಳೆತು ಹೋದರೆ ಮತ್ತೊಂದು ಗಿಡವನ್ನು ಕಟ್ಟಬಹುದು. ಆಲೋವೆರಾ ಗಿಡವನ್ನು ಮನೆಯಲ್ಲಿ ಕಟ್ಟಿದರೆ ಮನೆಯಲ್ಲಿ ಐಶ್ವರ್ಯ, ಆರೋಗ್ಯ, ಸಂಪತ್ತು ವೃದ್ಧಿಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ನೀವು ಕೂಡ ನಿಮ್ಮ ಮನೆಯಲ್ಲಿ ಆಲೋವೆರಾ ಗಿಡವನ್ನು ಕಟ್ಟಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *