ಇಸಬು, ಹುಳುಕಡ್ಡಿ ಇತ್ಯಾದಿ ಚರ್ಮ ವ್ಯಾಧಿಗಳಿಂದ ಬಳಲುವವರಿಗೆ ಉತ್ತಮ ಮನೆಮದ್ದು ಈ ಪೈನಾಪಲ್ ಹಣ್ಣು

ಆರೋಗ್ಯ

ಹುಳಿಮಿಶ್ರಿತ ಸಿಹಿ ರುಚಿಯನ್ನು ಹೊಂದಿರುವ ಅನಾನಸ್ ಬಹಳ ಸುವಾಸನಾಭರಿತವಾದ ಹಣ್ಣಾಗಿದ್ದು ಎಲ್ಲರಿಗೂ ಪ್ರಿಯವಾಗುವಂಥಹದ್ದು. 1594ರಲ್ಲಿ ಪೋರ್ಚುಗಲ್‍ನಿಂದ ಭಾರತಕ್ಕೆ ಈ ಹಣ್ಣಿನ ಪರಿಚಯವಾಯಿತು. ಬ್ರೆಜಿಲ್ ಇದರ ತವರೂರು. ಅಲ್ಲಿ ಇದನ್ನು `ನಾನಾ’ ಎಂದು ಕರೆಯುತ್ತಿದ್ದರು. ಪೋರ್ಚುಗೀಸರು ಇದಕ್ಕೆ ಅನಾನಸ್ ಎಂದು ನಾಮಕರಣ ಮಾಡಿದರು. ಬ್ರೂಮಿಲಿಯೇಸಿ ಕುಟುಂಬಕ್ಕೆ ಸೇರಿರುವ ಇದರ ವೈಜ್ಞಾನಿಕ ಹೆಸರು “ಅನಾನಸ್ ಕಮೊಸಸ್” ಎಂದು ಆಂಗ್ಲಭಾಷೆಯಲ್ಲಿ `ಪೈನ್ ಆಪಲ್’ ಎಂದು ಕರೆಯಲ್ಪಡುವ ಇದನ್ನು ಕನ್ನಡದಲ್ಲಿ ಪರಂಗಿಹಣ್ಣು, ಮುಳ್ಳು ಹಲಸು ಎಂಬುದಾಗಿಯೂ ಕರೆಯುತ್ತಾರೆ.

ಅನಾನಸ್‍ನಿಂದ ತಯಾರಿಸಲ್ಪಡುವ ಜ್ಯೂಸ್, ಮೆಣಸ್ಕಾಯಿ, ಖೀರು, ಜಾಮ್ ಮುಂತಾದುವುಗಳು ಕೆಲವು ಜನಪ್ರಿಯ ಖಾದ್ಯಗಳು, ಇಷ್ಟೇ ಅಲ್ಲದೆ ಅನಾನಸ್‍ನಲ್ಲಿ ಅಪಾರ ಔಷಧೀಯ ಗುಣಗಳಿವೆ. ಕಬ್ಬಿಣ, ಕ್ಯಾಲ್ಸಿಯಂ, ಕೆರೋಟಿನ್, ಸಸಾರಜನಕ, ಶರ್ಕರಪಿಷ್ಟ, ರಂಜಕ ಹಾಗೂ ಸಿ ಮತ್ತು ಬಿ ಅನ್ನಾಂಗಗಳು ಇದರಲ್ಲಿ ಹೇರಳವಾಗಿವೆ. ಅನಾನಸ್ ಸೇವನೆಯು ರಕ್ತಹೀನತೆಯನ್ನು ನಿವಾರಿಸುವುದಲ್ಲದೆ ವಸಡಿನಲ್ಲಾಗುವ ರಕ್ತಸ್ರಾವವನ್ನು ತಡೆಗಟ್ಟುವುದು.

ಉರಿಮೂತ್ರ ಕಾಯಿಲೆಯ ನಿವಾರಣೆಗೂ ಅನಾನಸ್ ಸೇವನೆ ಉತ್ತಮ. ಶ್ವಾಸಕೋಶದ ಸಮಸ್ಯೆಯುಳ್ಳವರಿಗೆ ಮತ್ತು ಗಂಟಲು ನೋವಿನ ಸಮಸ್ಯೆಗೆ ಅನಾನಸ್ ಸೇವನೆಯಿಂದ ಉತ್ತಮ ಪರಿಹಾರ ಪಡೆಯಬಹುದು ಎಂಬುದು ವೈದ್ಯರ ಅಭಿಮತ. ಅಜೀರ್ಣ ಸಮಸ್ಯೆ ಹಾಗೂ ಹೃದ್ರೋಗವುಳ್ಳವರಿಗೆ ಅನಾನಸ್ ಸೇವನೆಯು ಉಪಯುಕ್ತ. ಋತುಚಕ್ರದ ಸಮಸ್ಯೆಯುಳ್ಳ ಮಹಿಳೆಯರಿಗೂ ಇದರ ಸೇವನೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಅನಾನಸ್ ಜ್ಯೂಸ್ ಒಂದು ಅತ್ಯುತ್ತಮ ದಾಹ ನಿವಾರಕ ಪೇಯವಾಗಿದೆ. ಇದು ಜೀರ್ಣ ಶಕ್ತಿಯನ್ನು ವೃದ್ಧಿಸುವುದಲ್ಲದೆ ಹೊಟ್ಟೆಯುರಿಯನ್ನು ತಗ್ಗಿಸಲು ನೆರವಾಗುವುದು. ಧೂಮಪಾನದಿಂದುಂಟಾಗುವ ದುಷ್ಪರಿಣಾಮಗಳನ್ನು ನೀಗಿಸಲೂ ಇದರ ಸೇವನೆಯು ಸಹಕಾರಿ.

ಅನಾನಸ್ ಹೋಳುಗಳನ್ನು ಜೇನುತುಪ್ಪದಲ್ಲಿ ನೆನೆಸಿ ಸೇವಿಸಿದರೆ ಕಾಮಾಲೆಯು ದೂರವಾಗುವುದು. ಹಣ್ಣಿನಲ್ಲಿರುವ “ಪ್ರೋಟಿಯೋಲಿಟೆಕ್ ಎಂಜೈಮ್’ ಎಂಬ ಅಂಶವು ಜೀರ್ಣಶಕ್ತಿಯನ್ನು ವೃದ್ಧಿಸಲು ನೆರವಾಗುವುದು. ಸೈನಸೈಟಿಸ್ ಸಮಸ್ಯೆಯುಳ್ಳವರಿಗೆ ಅನಾನಸ್ ಅತ್ಯುಪಯುಕ್ತ ಔಷಧ.

ರಕ್ತದ ಹೆಪ್ಪುಗಟುವಿಕೆಯನ್ನು ತಡೆಯುವುದರಲ್ಲಿ ಅನಾನಸ್ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅನಾನಸ್‍ನಲ್ಲಿ ಮ್ಯಾಂಗನೀಸ್ ಹೇರಳವಾಗಿರುವುದರಿಂದ ಇದು ಮೂಳೆಗಳನ್ನು ಬಲಗೊಳಿಸುವುದಲ್ಲದೆ ವೃದ್ಧಾಪ್ಯದಲ್ಲಿ ತಲೆದೋರುವ ಆಥ್ರೈಟಿಸ್ ನೋವಿನಿಂದ ಪಾರಾಗಲೂ ನೆರವಾಗುವುದು.

ಇಸಬು, ಹುಳುಕಡ್ಡಿ ಇತ್ಯಾದಿ ಚರ್ಮ ವ್ಯಾಧಿಗಳಿಂದ ಬಳುವವರು ಹಣ್ಣಿನ ರಸವನ್ನು ಆ ಜಾಗಕ್ಕೆ ತಿಕ್ಕಿ ಉಜ್ಜುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಮಕ್ಕಳಾದಿಯಾಗಿ ಮಕ್ಕಳಾದಿಯಾಗಿ ವೃದ್ಧರತನಕ ಎಲ್ಲರಿಗೂ ಆರೋಗ್ಯವೃದ್ಧಿಗೆ ನೆರವಾಗುವಂತಹ ಒಂದು ಶ್ರೇಷ್ಠ ಹಣ್ಣು ಅನಾನಸ್. ಇದನ್ನು ತೋಟದ ಬದಿಯಲ್ಲಿ ನಾಟಿ ಮಾಡಿದರೂ ಸಾಕು ಗಿಡ ಬೆಳೆಸಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *