ದಿನನಿತ್ಯ ಅಡುಗೆಗೆ ಬಳಸುವ ಸಾಸುವೆ ನಮಗೆ ಗೊತ್ತಿಲ್ಲದೇ ಎಷ್ಟೋ ರೋಗಗಳಿಗೆ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಾಸುವೆಯು ಪ್ರತಿಯೊಬ್ಬರ ಮನೆಯಲ್ಲೂ ಸಹ ಅಡುಗೆ, ತಿಂಡಿ, ಒಗ್ಗರಣೆಗೆ ಬಳಸುತ್ತಾರೆ. ಸಾಸುವೆಯು ಪಾರ್ಶ್ವವಾಯು ಹಾಗೂ ಕುಷ್ಠ ರೋಗಕ್ಕೆ ದಿವ್ಯಔಷಧವಾಗಿ ಕೆಲಸ ನಿರ್ವಹಿಸುತ್ತದೆ.
ಸಾಸುವೆಯ ಮಿತವಾದ ಸೇವನೆಯಿಂದ ಹೊಟ್ಟೆಯಲ್ಲಿನ ಜಂತುಹುಳ ವಿಷರೋಗಗಳು ಇದರಿಂದ ಪರಿಹಾರವಾಗುತ್ತದೆ. ವಾಂತಿಯಾಗುವಂತೆ ಮಾಡುವ ಗುಣ ಇದಕ್ಕಿದೆ. ಆದುದರಿಂದ ಸಾಸುವೆಯನ್ನು ಯಾವಾಗಲೂ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಮದ್ಯ ಸೇವನೆಯನ್ನು ಹೆಚ್ಚು ಮಾಡಿದವರಿಗೆ ಹಾಗೂ ನಿದ್ರೆ ಮಾತ್ರೆ ತೆಗೆದುಕೊಂಡವರಿಗೆ ಎರಡು ಚಮಚ ಸಾಸುವೆ ಪುಡಿಯನ್ನು ಕಲಸಿ ಕುಡಿಸಿದರೆ ವಾಂತಿಯಾಗಿ ಮಾಮೂಲಿ ಸ್ಥಿತಿಗೆ ಬರುತ್ತಾರೆ.
ಪಾರ್ಶ್ವವಾಯುವಿಗೆ: ಸಾಸುವೆ ಪುಡಿ ಮಾಡಿ ನೀರಿನಲ್ಲಿ ಬೆರೆಸಿ ರೋಗಪೀಡಿತರಿಗೆ ಅಂಗಾಲಿಗೆ ಹಚ್ಚಿದರೆ ರಕ್ತ ಪ್ರಸರಣವು ಚೆನ್ನಾಗಿ ಜೋಮು ಕಡಿಮೆಯಾಗುತ್ತದೆ. ಮುಖ ಸೊಟ್ಟಗಾದವರಿಗೆ ಸಾಸುವೆ ಎಣ್ಣೆ ಹಚ್ಚಿ ಮರ್ದನ ಮಾಡಿದರೆ ಗುಣ ಕಾಣುತ್ತದೆ. ಸಾಸುವೆಯನ್ನುಬ ಕುಟ್ಟಿ ಪುಡಿ ಮಾಡಿ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ದಿನನಿತ್ಯ ನೀಡಿದರೆ ಉಪಶಮನ ಕಂಡುಬರುತ್ತದೆ.
ಕುಷ್ಠ ರೋಗಕ್ಕೆ: ಸಾಸಿವೆಯನ್ನು ನುಣ್ಣಗೆ ಅರೆದು ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಿದರೆ ಕುಷ್ಠರೋಗ,ಕಜ್ಜಿ, ಹುಳಕಡ್ಡಿ, ಬೆವರುಸಾಲೆ ಮೊದಲಾದ ಚರ್ಮರೋಗಗಳು ಗುಣವಾಗುತ್ತವೆ.ಕಜ್ಜಿ ಹಾಗೂ ಚರ್ಮ ರೋಗಗಳು ತಗ್ಗಲು ಸಾಸಿವೆ ಎಣ್ಣೆಯನ್ನು ಹಚ್ಚುತ್ತಾರೆ.
ಬಿಳಿಯ ಸಾಸಿವೆಯು ಸೌಂದರ್ಯ ಸಾಧನೆಗಳಲ್ಲೇ ಮುಖ್ಯವಾದ ಪದಾರ್ಥವಾಗಿದೆ. ತೆಂಗಿನ ಎಣ್ಣೆಯಲ್ಲಾಗಲಿ ಎಳ್ಳೆಣ್ಣೆಯಲ್ಲಾಗಲಿ ಬಿಳಿಯ ಸಾಸಿವೆಯನ್ನು ಚೆನ್ನಾಗಿ ಹುರಿದು ಆಹಾ ಎಣ್ಣೆಯನ್ನು ಸೋಸಿ ಶೀಶೆಯಲ್ಲಿ ತುಂಬಿಡಿ. ದಿನವೂ ಈ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡರೆ ಮೊಡವೆಯು ಕಡಿಮೆಯಾಗಿ ಮುಖ ಕಾಂತಿಯುತವಾಗಿರುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.