ಕುಂಬಳಕಾಯಿ ಬೀಜದ ಅರೋಗ್ಯ ಗುಣಗಳ ಬಗ್ಗೆ ತಿಳಿದುಕೊಂಡ ಮೇಲೆ, ನೀವು ಎಂದಿಗೂ ಕುಂಬಳಕಾಯಿ ಬೀಜಗಳನ್ನು ಬಿಸಾಡೋದೇ ಇಲ್ಲ

ಆರೋಗ್ಯ

ಉಪ್ಪು-ಖಾರ ಹಾಕಿ ಹುರಿದ ಕುಂಬಳಕಾಯಿ ಬೀಜಗಳನ್ನು ಎಂದಾದರೂ ತಿಂದಿದೀರಾ ಈಗಿನ ಮಕ್ಕಳಿಗೆಇದನ್ನು ಸವಿದ ಅನುಭವವೇ ಇರುವುದಿಲ್ಲ. ಅದರಲ್ಲೂ ಮಳೆ-ಚಳಿಗಾಲದಲ್ಲಿ ಹುರಿದಕುಂಬಳಕಾಯಿಯ ಬೀಜಗಳನ್ನು ಬಿಸಿಬಿಸಿಯಾಗಿ ತಿನ್ನುವುದು ಬಿಸಿ ಬೋಂಡ, ಬಜ್ಜಿ ತಿಂದ ಹಾಗೆ ಬಾಯಿಗೆ ಹಿತಕರ. ಅಷ್ಟೇ ಅಲ್ಲ ದೇಹಕ್ಕೂ ಕೂಡ ಇದು ಒಳ್ಳೆಯದು.

ಇದನ್ನು ಪೆಪಿಟಾಸ್ ಎಂದೂ ಕರೆಯುತ್ತಾರೆ. ಈಗಿನ ದಿನಗಳಲ್ಲಿ ಈ ಬೀಜಗಳನ್ನು ಯಾರೂ ಈಗಿನ ದಿನಗಳಲ್ಲಿ ಈ ಬೀಜಗಳನ್ನು ಯಾರೂನ್ನಲು ಇಚ್ಛಿಸುವುದಿಲ್ಲ. ಕುಂಬಳಕಾಯಿಬಳಸಿ, ಬೀಜವನ್ನು ಅನುಪಯುಕ್ತವೆಂದುನಿರ್ದಾಕ್ಷಿಣ್ಯವಾಗಿ ಎಸೆಯುತ್ತಾರೆ. ಆದರೆ ಬೀಜ ಕೂಡ ಪೌಷ್ಟಿಕಾಂಶಭರಿತವಾಗಿದ್ದು ಹಲವಾರು ಆರೋಗ್ಯಕರ ಅಂಶಗಳಿಂದ ಕೂಡಿದೆ.

ನಿಯಮಿತವಾಗಿ ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್, ರಕ್ತದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಉದ್ವೇಗ ಹಾಗೂ ಖಿನ್ನತೆಯನ್ನು ನಿಯಂತ್ರಣದಲ್ಲಿಡುತ್ತದೆ. ಸಂಧಿವಾತ ನೋವನ್ನು ಕಡಿಮೆ ಮಾಡುವುದಲ್ಲದೆ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಇದೆಲ್ಲದರಜೊತೆಗೆ ಹಲವು ಬಗೆಯ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ.

ಕೆಲವರು ಈ ಬೀಜವನ್ನು ರುಚಿಗಾಗಿ ತಿನ್ನುತ್ತಾರೆಯೇ ವಿನಃ ಅದರ ಪ್ರಯೋಜನಕಾರಿ ಅಂಶಗಳನ್ನು ತಿಳಿದಿರುವುದಿಲ್ಲ. ಕುಂಬಳಕಾಯಿ ಬೀಜದಲ್ಲಿರುವ ಸತುವಿನ ಅಂಶ ಸಂಧಿವಾತದ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಇದರಲ್ಲಿರುವ ಪೈಥೋಸ್ಟೆರಾಲ್ ಅಂಶವು ಅಧಿಕ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಸಾಮಾನ್ಯವಾಗಿ ಮಧುಮೇಹಿಗಳನ್ನು ಕಾಡುವ ವಶಕ್ತವಾಗಿದೆ. ಹಾಗಾಗಿ ಸಿಹಿಕುಂಬಳಕಾಯಿ ತಿನ್ನದಿದ್ದರೂ ಬೀಜವನ್ನು ಧಾರಾಳವಾಗಿ ಸೇವಿಸಬಹುದು.

ಆರೋಗ್ಯಕರ ಆಹಾರ ಸೇವನೆಯೇ ಇಂದಿನ ಮಕ್ಕಳ ಪ್ರಮುಖ ಸಮಸ್ಯೆ. ಕುಂಬಳಬೀಜ ರುಚಿಕರವಾಗಿರುವುದರಿಂದ ಮಕ್ಕಳಿಗೂ ಇಷ್ಟವಾಗುತ್ತದೆ. ಜೊತೆಗೆ ಪೋಷಕಾಂಶದ ಕೊರತೆ ಉಂಟಾಗುವುದನ್ನು ತಡೆಗಟ್ಟಬಹುದು. ಶಕ್ತಿವರ್ಧಕವೆನಿಸಿರುವ ಕುಂಬಳಬೀಜ ವ್ಯಾಯಾಮಕ್ಕೆ ಮುನ್ನ ಸೇವಿಸುವ ಸೂಪರ್‌ಫುಡ್‌ಗಳಲ್ಲಿ ಒಂದು. ಹೃದಯದ ಆರೋಗ್ಯವನ್ನು ಕಾಪಾಡುವಷ್ಟು ಸಾಮರ್ಥ್ಯ ಕುಂಬಳಬೀಜಕ್ಕಿದ್ದು ಹೃದಯ ಬಡಿತವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *