ಸಾಮಾನ್ಯವಾಗಿ ಈ ಗಿಡ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೂ ಪರಿಚಯವಿರುತ್ತದೆ, ಈ ಗಿಡವನ್ನು ನೆಲನೆಲ್ಲಿ ಗಿಡ ಎಂಬುದಾಗಿ ಕರೆಯಲಾಗುತ್ತದೆ. ಈ ಗಿಡವನ್ನು ಬಳಸಿ ಕಜ್ಜಿ, ತುರಿಕೆ ಚರ್ಮ ರೋಗಗಳನ್ನು ನಿವಾರಿಸಿಕೊಳ್ಳಬಹುದು.
ನೆಲನೆಲ್ಲಿ ಗಿಡದ ಎಲೆಗಳೊಂದಿಗೆ ಉಪ್ಪನ್ನು ಸೇರಿಸಿ, ಅರೆದು ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಿದರೆ ಕಜ್ಜಿ, ತುರಿಕೆಗಳಂಥ ಚರ್ಮ ರೋಗಗಳು ನಿವಾರಣೆಯಾಗುವುದು.
ಹೃದಯದ ಬಲಹೀನತೆಯನ್ನು ನಿವಾರಿಸಲು: ಹೃದಯದ ಬಲಹೀನತೆಯನ್ನು ನೀಗಿಸಲು ದಾಸವಾಳ ಹೂವುಗಳನ್ನು ಒಣಗಿಸಿ, ಪುಡಿ ಮಾಡಿ ಹಾಲಿನಲ್ಲಿ ಬೆರಸಿಕೊಂಡು ಬೆಳಗ್ಗೆ ಮತ್ತು ಸಂಜೆ ಕುಡಿಯುತ್ತ ಬರಬೇಕು. ಕೆಲವೇ ದಿನಗಳಲ್ಲಿ ಇದು ತನ್ನ ಪರಿಣಾಮವನ್ನು ತೋರಿಸುತ್ತದೆ.
ಮಲಬದ್ಧತೆ ಇರೋರಿಗೆ ಖರ್ಜುರ ಹೆಚ್ಚು ಸಹಕಾರಿ: ಕಾರ್ಜುರದ ಹಣ್ಣನ್ನು ರಾತ್ರಿ ಹಾಲಿನಲ್ಲಿ ನೆನಸಿತ್ತು ಬೆಳಗಿನ ಜಾವಾ ತೆಗೆದು ನೀರು ಹಿಂಡಿತಿಂದರೆ ಮಲ ವಿಸರ್ಜನೆ ಸರಾಗವಾಗಿ ನಡೆಯುತ್ತದೆ. ಮಲಬದ್ಧತೆ ಇರೋರಿಗೆ ಇದು ಉತ್ತಮ ಉಪಚಾರ.
ಕಫ ನಿವಾರಣೆ: ಮಳೆಗಾಲದಲ್ಲಿ ಎದೆಯಲ್ಲಿ ಥಂಡಿ ಉಂಟಾಗಿ ಉಸಿರಾಟವು ಶ್ರಮದಾಯಕವಾದರೆ, ಎರಡು ಲೋಟಗಳಷ್ಟು ಬಿಸಿನೀರನ್ನು ಕುಡಿದರೆ ಕಫ ಕರಗಿ ಉಸಿರಾಟ ಸುಲಭವಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.