ಮೂಳೆಗಳಿಗೆ ಹೆಚ್ಚು ಶಕ್ತಿ ನೀಡುವುದರ ಜೊತೆ ಜಾಂಡಿಸ್ ಮಲಬದ್ಧತೆ ಮುಂತಾದ ರೋಗಗಳಿಗೆ ರಾಮಬಾಣ ಪಾರಿಜಾತ ಗಿಡ

ಆರೋಗ್ಯ

ಹಲವು ರೋಗಗಳಿಗೆ ಹಲವು ಮನೆಮದ್ದುಗಳಿವೆ ಅದೇ ರೀತಿಯಲ್ಲಿ ಮನೆ ಮುಂದಿರುವಂತ ಪಾರಿಜಾತ ಹೂವು ಕೂಡ ಹಲವು ಸಮಸ್ಯೆಗಳ ನಿವಾರಕ. ಇದನ್ನು ಆಯುರ್ವೇದಿಕ್ ಔಷಧಿಗಳಲ್ಲಿ ಬಳಸಲಾಗುತ್ತದೆ, ಈ ಹೂವು ದೇವಲೋಕದ ಹೋವು ಎಂಬುದಾಗಿ ಕರೆಸಿಕೊಳ್ಳುತ್ತದೆ.

ಅಷ್ಟಕ್ಕೂ ಈ ಹೂವು ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬಲ್ಲದು ಅನ್ನೋದನ್ನ ಒಮ್ಮೆ ತಿಳಿಯಿರಿ. ಇದರ ವಿಶೇಷತೆ ಸಂಜೆ ಹೊತ್ತಿಗೆ ಅರಳಿ ಮುಂಜಾನೆ ನೆಲ ಪೂರ್ತಿ ಹರಡುವ ಕೇಸರಿ ಮತ್ತು ಬಿಳಿ ಬಣ್ಣದ ಹೂವಾಗಿರುತ್ತದೆ.

ಜಾಂಡಿಸ್ ಇರುವವರು ಪ್ರತಿದಿನ ಈ ಎಲೆ ರಸ ಕುಡಿದರೆ ಉತ್ತಮ. ಬೇರೆ ಬೇರೆ ಔಷಧಿಗಳನ್ನು ಸೇವಿಸುವ ಬದಲು ಇದನ್ನು ಮಾಡಿ ಕುಡಿಯಬಹುದು. ಅಷ್ಟೇ ಅಲ್ಲದೆ ಮಲಬದ್ಧತೆ ಆಹಾರದ ಜೀವನಕ್ರಮದಲ್ಲಿ ಏರುಪೇರಾದಾಗ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ ಪಾರಿಜಾತ ಎಲೆ ರಸವನ್ನು ಔಷಧಿಯಾಗಿ ಉಪಯೋಗಿಸಿ.

ಜೀರ್ಣ ಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಪಾರಿಜಾತದ ಬೀಜದ ಪುಡಿಯನ್ನೂ ನೀರಿನೊಂದಿಗೆ ಬೆರೆಸಿ ಸೇವಿಸಿ. ಸಮಸ್ಯೆಯಿಂದ ಮುಕ್ತರಾಗಿ.ಪಾರಿಜಾತದ ಎಲೆಗಳನ್ನು ಪೇಸ್ಟ್ ಮಾಡಿಕೊಳ್ಳಬೇಕು, ಅದನ್ನು ಒಂದು ಗ್ಲಾಸ್ ನೀರಿಗೆ ಹಾಕಿ, ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು. ಆ ಕಷಾಯ ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಖಾಲಿ ಹೊಟ್ಟೆಗೆ ಸೇವಿಸಬೇಕು. ಇದರಿಂದ ವಯಸ್ಸಾಗುತ್ತಿದ್ದಂತೆ ಕಾಣಿಸುವ ಎಲ್ಲಾ ಗಂಟು ನೋವೂ ದೂರವಾಗುತ್ತವೆ.

ಪಾರಿಜಾತ ಎಲೆ ಕಷಾಯ ಮೂಳೆ ಸವೆದು ಹೋಗಿರುವ ಕಾರ್ಟಿಲೆಜ್ ಎಂಬ ಅಂಶವನ್ನು ಮತ್ತೆ ಉತ್ಪಾದಿಸುತ್ತದೆ. ಅಷ್ಟೇ ಅಲ್ಲದೆ ಮಳೆಗಾಲದಲ್ಲಿ ಡೆಂಗ್ಯೂ ಜ್ವರ ಸಾಮಾನ್ಯ. ಇದೊಂದು ಮಹಾಮಾರಿಯೂ ಹೌದು. ಪಾರಿಜಾತ ಎಲೆಗಳ ಕಷಾಯ ಡೆಂಗ್ಯೋ ಜ್ವರಕ್ಕೂ ಉತ್ತಮ ಔಷಧಿ ಪಾರಿಜಾತ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *