ಹೌದು ಕೆಲವೊಂದು ಆಹಾರಗಳು ಕೆಲವೊಂದು ಕಾಯಿಲೆಗಳನ್ನು ಹೋಗಲಾಡಿಸುತ್ತವೆ. ಹಾಗೆಯೆ ನಿಮ್ಮ ಹಲವು ರೋಗಗಳಿಗೆ ಹಲವು ಮನೆಮದ್ದುಗಳು ನಿಮ ಮನೆಯಲ್ಲಿವೆ ಇರುತ್ತವೆ ಹಾಗೆ ನಿಮ್ಮ ಕಿಡ್ನಿಯಲ್ಲಿ ಹಾಗುವಂತಹ ಕಲ್ಲನ್ನು ಕರಗಿಸಲು ಈ ಬಾಳೆದಿಂಡಿನ ಪಲ್ಯ ನಿಮಗೆ ಸಹಕಾರ ಮಾಡುತ್ತದೆ.
ಇದಕ್ಕೆ ಬೇಕಾಗುವ ಸಾಮಗ್ರಿಗಳು: ಬಾಳೆದಿಂಡು,ಕಡಲೇಬೇಳೆ,ತುರಿದ ತೆಂಗಿನಕಾಯಿ,ಹಸಿಮೆಣಸಿನ ಕಾಯಿ,ಒಣಮೆಣಸಿನ ಕಾಯಿ,ಬೆಲ್ಲ ಸ್ವಲ್ಪ ಹುಣಸೆಹಣ್ಣಿನ ರಸ ಉಪ್ಪು ರುಚಿಗೆ ಒಗ್ಗರಣೆಗೆಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು
ಇನ್ನು ಈ ಪಲ್ಯವನ್ನು ಮಾಡುವ ವಿಧಾನ; ಮೊದಲಿಗೆ ಒಂದು ಕುಕ್ಕಾರ್ ಅಥವಾ ಒಂದು ಪಾತ್ರೆಯಲ್ಲಿ ಎಣ್ಣೆ ಮತ್ತು ಬಾಳೆದಿಂಡು ಹಾಗು ಒಣಮೆಣಸಿನಕಾಯಿ,ಕಡಲೆಬೇಳೆ ಹಾಕಿ ಬೇಯಿಸಿಕೊಳ್ಳಿ. ನಂತರ ಒಂದು ಮಿಕ್ಸಿಯಲ್ಲಿ ಸಾಸಿವೆ, ತೆಂಗಿನತುರಿ, ಹಸಿಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಿ.
ನಂತರ ಎಣ್ಣೆ, ಸಾಸಿವೆ, ಕರಿಬೇವು, ಅರಿಶಿನ ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಇದಕ್ಕೆ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಹಾಕಿ ಉಪ್ಪು ಸ್ವಲ್ಪ ಬೆಲ್ಲ ಹುಣಸೆಹಣ್ಣಿನ ರಸ ಹಾಕಿ. ಬಳಿಕ ರುಬ್ಬಿಟ್ಟುಕೊಂಡ ಮಸಾಲಾ ಹಾಕಿ ಹುರಿಯಬೇಕು, ಆಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಬಡಿಸಿ ಒಂದು ತಟ್ಟೆಯಲ್ಲಿ ಹಾಕಿಕೊಂಡು ಸೇವಿಸಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.