ಐರಾವತ ಯೋಜನೆಯಡಿ ಟ್ಯಾಕ್ಸಿ ಹಾಗೂ ಗೂಡ್ಸ್ ವಾಹನ ಸಬ್ಸಿಡಿಯಲ್ಲಿ ಖರೀದಿಸಲು ಅರ್ಜಿ ಪ್ರಾರಂಭ ಆಸಕ್ತರು ಅರ್ಜಿ ಸಲ್ಲಿಸಬಹುದು

ಉಪಯುಕ್ತ ಮಾಹಿತಿ

ಕರ್ನಾಟಕ ರಾಜ್ಯ ಸರ್ಕಾರ ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡನೇ ಸಾಲಿನ ವಿವಿಧ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.ಇದರಲ್ಲಿ ಐರಾವತ ಯೋಜನೆಯಡಿಯಲ್ಲಿ ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡನೇಸಾಲಿನಲ್ಲಿ ಅಂದರೆ ಈ ವರ್ಷ ನಿಮಗೆ ಟ್ಯಾಕ್ಸಿ ಅಥವಾ ಗೂಡ್ಸ್ ಗಳನ್ನು ಖರಿಧಿ ಮಾಡಲು ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹಾಗಾದರೆ ಐರಾವತ ಯೋಜನೆಯಡಿಯಲ್ಲಿ ನೀವು ಕಾರು ಟ್ಯಾಕ್ಸಿ ಗೂಡ್ಸ ಗಳಂತಹ ಗಾಡಿಗಳನ್ನು ಖರೀಧಿ ಮಾಡಲು ನಿಮಗೆ ಶೇಕಡಾ ಐವತ್ತರಷ್ಟು ಸಬ್ಸಿಡಿ ಸಹಾಯಧನ ಸಿಗುತ್ತದೆ ಹಾಗಾದರೆ ಇವತ್ತು ಯಾವ ಒಂದು ನಿಗಮದ ಅಡಿಯಲ್ಲಿ ಈ ಒಂದು ಯೋಜನೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಜೀ ಅನ್ನು ಸಲ್ಲಿಸಲು ಎಷ್ಟು ದಿನಗಳವರೆಗೆ ಸಮಯವಿದೆ ಈ ಎಲ್ಲ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.

ಐರಾವತ ಯೋಜನೆಯು ಯಾವ ಅಂಶಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯುವುದಾದರೆ ಸಾಮಾಜಿಕ ಉದ್ಯಮ ಯೋಜನೆಯಡಿಯಲ್ಲಿ ಉಬರ್ ಓಲಾ ಇತ್ಯಾದಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಪ್ರವಾಸಿ ಟ್ಯಾಕ್ಸಿ ಒದಗಿಸಲಾಗುವುದು. ಘಟಕ ವೆಚ್ಚ ಶೇಕಡಾ ಐವತ್ತು ಅಥವಾ ಗರಿಷ್ಠ ಐದುಲಕ್ಷಗಳ ಆರ್ಥಿಕ ನೆರವನ್ನು ನೀಡಲಾಗುವುದು ಅಂದರೆ ನಿಮಗೆ ಐವತ್ತು ಶೇಕಡಾ ಸಹಾಯಧನ ನೀಡಲಾಗುವುದು ಗರಿಷ್ಠ ಐದು ಲಕ್ಷದವರೆಗೆ ಸಬ್ಸಿಡಿ ಸಿಗುತ್ತದೆ. ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಸಿ ಪಡೆದವರು ಇದಕ್ಕೆ ಅರ್ಹರಿರುವುದಿಲ್ಲ.

ವಾಹನ ಚಾಲನೆಯಲ್ಲಿ ಹೆಚ್ಚಿನ ಅನುಭವ ಮತ್ತು ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಾನದ ಆಧಾರದ ಮೇಲೆ ಫಲಾನುಭವಿಗಳ ಆಯ್ಕೆ ಮಾಡಲಾಗುವುದು. ಮಹಿಳೆಯರಿಗೆ ಶೇಕಡಾ ಮುವತ್ತಮೂರರಷ್ಟು ಮೀಸಲಾತಿ ನೀಡಲಾಗುವುದು. ಆಯ್ಕೆ ಆದ ಫಲಾನುಭವಿಗಳಿಗೆ ಉಬರ್ ಅಥವಾ ಓಲಾ ಸಂಸ್ಥೆಗಳ ಮೂಲಕ ತರಬೇತಿ ನೀಡಿ ಅವರ ಯಶಸ್ವಿಗಾಗಿ ತರಬೇತಿ ಪೂರ್ಣಗೊಳಿಸಿದಾಗ ಆರ್ಥಿಕ ನೆರವು ನೀಡಲಾಗುವುದು ಆಯ್ಕೆ ಆದವರು ಕಡ್ಡಾಯವಾಗಿ ಒಂದು ವರ್ಷ ಉಬರ್ ಅಥವಾ ಓಲಾ ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸಿತಕ್ಕದ್ದು. ಫಲಾನುಭವಿಗಳು ಮೂರುವರ್ಷದ ಒಳಗೆ ಪರಭಾರ ಮಾಡತಕ್ಕದ್ದಲ್ಲ.

ಹಾಗಾದರೆ ಈ ಒಂದು ಯೋಜನೆಯನ್ನು ಯಾವ ಅಭಿವೃದ್ಧಿ ನಿಗಮದಿಂದ ಕರೆದಿದ್ದಾರೆ ಎಂಬುದನ್ನು ತಿಳಿಯುವುದಾದರೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡನೇ ಸಾಲಿನ ವಿವಿಧ ಯೋಜನೆಗಳಿಗೆ ಸಫಾಯಿ ಕರ್ಮಚಾರಿ ಅಥವಾ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ ಫಲಾಪೆಕ್ಷೀಗಳಿಂದ ಅರ್ಜಿ ಆಹ್ವಾನ ಎಂದು ಹೇಳಲಾಗಿದೆ. ಇದರಡಿಯಲ್ಲಿ ಬರುವ ಯೋಜನೆ ಯಾವುದು ಎಂಬುದನ್ನು ತಿಳಿದುಕೊಳ್ಳೋಣ.

ಮೊದಲನೆಯದು ಸ್ವಯಂ ಉದ್ಯೋಗ ಯೋಜನೆ ಇದರಡಿಯಲ್ಲಿ ನೇರ ಸಾಲ ಯೋಜನೆ. ಇದರಲ್ಲಿ ಬರುವ ಚಟುವಟಿಕೆಗಳು ಸಫಾಯಿ ಕರ್ಮಚಾರಿ ಅಥವಾ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ ಮತ್ತು ಅವರ ಅವಲಂಬಿತರಿಗೆ ನೇರ ಸಾಲವನ್ನು ಕಿರು ಆರ್ಥಿಕ ಚಟುವಟಿಕೆಗಳಾದ ತರಕಾರಿ ಹಣ್ಣು ಹಂಪಲು ಮೀನು ಮಾಂಸ ಮಾರಾಟ ಕುರಿ ಹಂದಿ ಮೊಲ ಸಾಕಾಣಿಕೆ ತಳ್ಳುವ ಗಾಡಿಗಳ ಘಟಕಗಳನ್ನು ಸ್ಥಾಪಿಸಲು ದುಡಿಮೆ ಬಂಡವಾಳ ಸೇರಿದಂತೆ ಮುಂತಾದ ಚಟುವಟಿಕೆಗಳಿಗೆ ಘಟಕ ವೆಚ್ಚ ಐವತ್ತುಸಾವಿರ ರೂಪಾಯಿ. ಇದರಲ್ಲಿ ಶೇಕಡಾ ಐವತ್ತರಷ್ಟು ಸಹಾಯಧನ ಮತ್ತು ಶೇಕಡಾ ಐವತ್ತರಷ್ಟು ಸಾಲ ನಿಡಲಾಗುವುದು.

ನಂತರ ಉದ್ಯಮಶೀಲತಾ ಯೋಜನೆ. ಇದರಡಿಯಲ್ಲಿ ಸಫಾಯಿ ಕರ್ಮಚಾರಿ ಅಥವಾ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ ಮತ್ತು ಅವರ ಅವಲಂಬಿತರಿಗೆ ವಿವಿಧ ಸ್ವಯಂ ಉದ್ಯೋಗ ಘಟಕಗಳ ಉದ್ದೇಶಕ್ಕೆ ಹಾಗೂ ಐ ಎಸ್ ಬಿ ಘಟಕಗಳ ಉದ್ದೇಶಕ್ಕೆ ಘಟಕ ವೆಚ್ಚದ ಶೇಕಡಾ ಐವತ್ತರಷ್ಟು ಅಥವಾ ಗರಿಷ್ಠ ಒಂದು ಲಕ್ಷದವರೆಗೆ ಸಹಾಯಧನ ಹಾಗೂ ಒಂದು ಲಕ್ಷ ನಿಗಮದಿಂದ ಸಾಲ ನೀಡಲಾಗುವುದು.

ಎರಡನೇ ಯೋಜನೆ ಪ್ರವಾಸಿ ಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನಗಳ ಖರೀಧಿ ಯೋಜನೆ. ಈ ಯೋಜನೆಯಡಿಯಲ್ಲಿ ಸಫಾಯಿ ಕರ್ಮಚಾರಿ ಅಥವಾ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ ಮತ್ತು ಅವರ ಅವಲಂಬಿತರಿಗೆ ಪ್ರವಾಸಿ ಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನ ಒದಗಿಸಲಾಗುವುದು ಹಾಗೂ ಇದಕ್ಕೆ ಶೇಕಡಾ ಐವತ್ತರಿಂದ ಶೇಕಡಾ ಅರವತ್ತರಷ್ಟು ಅಥವಾ ಗರಿಷ್ಠ ಐದುಲಕ್ಷದವರೆಗೆ ಸಹಾಯಧನ ನೀಡಲಾಗುವುದು ವಾಹನದ ಬಾಕಿ ಮೊತ್ತವನ್ನು ಬ್ಯಾಂಕ ಅಥವಾ ಇತರೆ ಹಣಕಾಸು ಸಂಸ್ಥೆಗಳಿಂದ ಭರಿಸುವುದು.

ಮೂರನೆಯದು ಮೈಕ್ರೋ ಕ್ರೆಡಿಟ್ ಅಥವಾ ಪ್ರೇರಣಾ ಯೋಜನೆ. ಇದರಲ್ಲಿ ಸಫಾಯಿ ಕರ್ಮಚಾರಿ ಅಥವಾ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ ಮತ್ತು ಅವರ ಅವಲಂಬಿತರಿಗೆ ಮಹಿಳಾ ಸ್ವ ಸಹಾಯ ಸಂಘಗಳ ಆರ್ಥಿಕ ಚಟುವಟಿಕೆಗಳಿಗಾಗಿ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಇದರಲ್ಲಿ ಕನಿಷ್ಠ ಹತ್ತು ಸದಸ್ಯರು ಇರಬೇಕು ಸ್ವ ಸಹಾಯ ಗುಂಪುಗಳ ಪ್ರತಿ ಸದಸ್ಯರಿಗೆ ಇಪ್ಪತ್ತೈದು ಸಾವಿರದಂತೆ ಎರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳನ್ನು ಒಂದು ಗುಂಪಿಗೆ ನೀಡಲಾಗುತ್ತದೆ

ಇದರಲ್ಲಿ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಸಹಾಯದನವಾಗಿರುತ್ತದೆ ಮತ್ತು ಕೇವಲ ಒಂದು ಲಕ್ಷ ರೂಪಾಯಿ ಬೀಜ ಧನವಾಗಿರುತ್ತದೆ. ಪ್ರತಿ ಮಹಿಳೆ ಹತ್ತು ಸಾವಿರ ರೂಪಾಯಿಗಳನ್ನು ಮಾತ್ರ ಮರುಪಾವತಿ ಮಾಡಬೇಕು ಇನ್ನುಳಿದ ಹದಿನೈದು ಸಾವಿರ ರೂಪಾಯಿ ಸಹಾಯಧನವಾಗಿರುತ್ತದೆ

ನಾಲ್ಕನೇಯದು ಭೂ ಒಡೆತನ ಯೋಜನೆ. ಇದರಲ್ಲಿ ಸಫಾಯಿ ಕರ್ಮಚಾರಿ ಅಥವಾ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ ಮತ್ತು ಅವರ ಅವಲಂಬಿತ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ತಮ್ಮ ವಾಸಸ್ಥಳದಿಂದ ಹತ್ತು ಕಿ.ಮಿ ವ್ಯಾಪ್ತಿ ಒಳಗೆ ಕೃಷಿ ಯೋಗ್ಯವಾದ ಎರಡು ಎಕರೆ ಖುಷ್ಕಿ ಜಮೀನು ಅಥವಾ ಒಂದು ಎಕರೆ ತರಿ ಜಮೀನು ಖರಿಧಿಸಲು ಸಹಾಯಧನವನ್ನು ಮತ್ತು ಸಾಲವನ್ನು ನೀಡಲಾಗುವುದು ಘಟಕ ವೆಚ್ಚ ಹದಿನೈದು ಲಕ್ಷ ದಿಂದ ಇಪ್ಪತ್ತು ಲಕ್ಷ ರೂಪಾಯಿಗಳವರೆಗೆ ಇರುತ್ತದೆ ಇದರಲ್ಲಿ ಶೇಕಡಾ ಐವತ್ತರಷ್ಟು ಸಹಾಯಧನ ನೀಡಲಾಗುವುದು.

ಇದಕ್ಕೆ ಅರ್ಜಿ ಸಲ್ಲಿಸಲು ಐದು ಆಗಸ್ಟ್ ಎರಡು ಸಾವಿರದ ಇಪ್ಪತ್ತೊಂದ ರಿಂದ ಇಪ್ಪತ್ತು ಸೆಪ್ಟೆಂಬರ್ ಎರಡು ಸಾವಿರದ ಇಪ್ಪತ್ತೊಂದರವರೆಗೆ ಆನ್ಲೈನ್ ನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವೆಬ್ ಸೈಟ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಈ ರೀತಿಯಾಗಿ ಉತ್ತಮವಾದ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವು ಅರ್ಜಿಯನ್ನು ಸಲ್ಲಿಸಿ ಇದರ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಿ ನಿಮ್ಮ ಪರಿಚಿತರಿಗು ಈ ಯೋಜನೆಯ ಬಗ್ಗೆ ಮಾಹಿತಿ ನೀಡಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *