ಎದೆಯಲ್ಲಿ ಕಟ್ಟಿರುವ ಕಫ, ಕೆಮ್ಮು ಗಂಟಲು ಕಿರಿಕಿರಿ ತಕ್ಷಣ ಮಾಯಾ

ಆರೋಗ್ಯ

ಒಣ ಕೆಮ್ಮು, ಕಫ ಇದು ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಿ ಇದನ್ನು ನಿವಾರಣೆ ಮಾಡಬಹುದಾಗಿದೆ. ಶುಂಠಿ, ಜೇನುತುಪ್ಪ, ಅರಿಶಿಣ ಆಯುರ್ವೇದ ಔಷಧಿಗುಣಗಳನ್ನು ಹೊಂದಿದೆ.ಕೆಮ್ಮು ದೀರ್ಘಕಾಲದವರೆಗೆ ಉಳಿದುಕೊಂಡು ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತದೆ. ಶೀತ, ಕೆಮ್ಮು ಮತ್ತು ಕಫದ ಸಮಸ್ಯೆಗಳಿಗೆ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಹಾಗೂ ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.ಶುಂಠಿ ರಸ ಜೊತೆಯಲ್ಲಿ 1 ಟೇಬಲ್ ಸ್ಪೂನ್ ಜೇನುತುಪ್ಪ ಬೆರೆಸಿ ದಿನಕ್ಕೆ ಒಂದು ಬಾರಿಯಂತೆ ಸೇವಿಸುವುದರಿಂದ ಗಂಟಲಲ್ಲಿ ಕಫ ಕಟ್ಟುವ ಸಮಸ್ಯೆ ನಿವಾರಣೆಯಾಗುತ್ತದೆ.

ಉಪ್ಪು, ಶುಂಠಿ, ಲವಂಗವನ್ನು ಸೇರಿಸಿ ಅಗಿಯುವುದರಿಂದ ಕಫ ಮತ್ತು ಗಂಟಲ ಕೆರೆತದಿಂದ ದೂರ ಇರಬಹುದಾಗಿದೆ. ಏಲಕ್ಕಿ, ಶುಂಠಿ ಪುಡಿಯನ್ನು ಒಟ್ಟಿಗೆ ಸೇರೆಸಿ ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಒಣ ಕೆಮ್ಮು ನಿವಾರಣೆಯಾಗುತ್ತದೆ.ಬಿಸಿ ಹಾಲಿಗೆ ಅರಿಶಿಣ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೆ ಕಫ ಮತ್ತು ನೆಗಡಿ ಹತ್ತಿರವೂ ಸುಳಿವುದಿಲ್ಲ.ಬಿಸಿ ನೀರಿನ ಆವಿಯನ್ನು ತಲೆಮೇಲೆ ಬಟ್ಟೆ ಮುಚ್ಚುಕೊಂಡು ಬಿಸಿ ಬಿಸಿಯಾದ ಆವಿಯನ್ನು ತೆಗೆದುಕೊಳ್ಳಬೇಕು. ಆಗ ಕಫ ಕರಗಿ ನಿರಾಗುತ್ತದೆ. ಸರಾಗವಾಗಿ ಉಸಿರಾಡಬಹುದಾಗಿದೆ.

ಎರಡು ಲೋಟ ನೀರಿಗೆ ಒಂದು ಚಮಚ ಧನಿಯಾ ಪುಡಿ, ಒಂದು ಚಮಚ ಮೆಣಸಿನ ಪುಡಿ, ಸ್ವಲ್ಪ ಶುಂಠಿ ಜಜ್ಜಿ ಹಾಕಬೇಕು ಹಾಗೂ ಸ್ವಲ್ಪ ಜೀರಿಗೆ ಚಿಟಿಕೆ ಅರಿಶಿನ ಮತ್ತು ಎರಡು ವಿಳ್ಯೆದೆಲೆಯನ್ನು ಸಣ್ಣದಾಗಿ ಮಾಡಿ ಆ ನೀರಿಗೆ ಸೇರಿಸಿ ಒಂದು ಲೋಟ ನೀರಾಗುವಷ್ಟು ಚೆನ್ನಾಗಿ ಕುದಿಸಿ ಅದನ್ನು ಸೋಸಿ ದಿನಕ್ಕೆ ಎರಡು ಬಾರಿ ಕುಡಿದರೆ ಕಫ, ಕೆಮ್ಮು, ನೆಗಡಿ ಹಾಗೂ ಗಂಟಲು ನೋವು ಹತ್ತಿರ ಸಹ ಸುಳಿಯುವುದಿಲ್ಲ.

ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.ಜೇನು ಮತ್ತು ನಿಂಬೆರಸದೊಂದಿಗೆ ದಾಲ್ಚಿನಿಯನ್ನು ಸೇರಿಸಿ ಸೇವಿಸಿದರೂ ನೆಗಡಿ ಮತ್ತು ಕಫದ ಸಮಸ್ಯೆ ದೂರವಾಗುತ್ತದೆ.1 ಚಮಚ ಜೇನುತುಪ್ಪಕ್ಕೆ ಅದರ ಕಾಲು ಭಾಗ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಸೇವಿಸಿದರೆ ಕಫದ ಸಮಸ್ಯೆಗೆ ಪರಿಹಾರ ಕಾಣಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *