ಮನುಷ್ಯನ ಆರೋಗ್ಯವನ್ನು ಮೂತ್ರದ ಬಣ್ಣದ ಆಧಾರದ ಮೇಲೆಯೂ ಹೇಳಬಹುದು ಯಾವ ಯಾವ ಬಣ್ಣದಿಂದ ಏನಾಗಿದೆ ಮತ್ತು ಇದರ ಮುನ್ಸೂಚನೆ ಏನು ಮತ್ತು ನಿಮ್ಮ ಮೂತ್ರ ಹೋಗುವ ಯಾಕೆ ನೊರೆ ನೊರೆ ಬರುತ್ತೆ ಅನ್ನೋದು ಇಲ್ಲಿದೆ ನೋಡಿ.
ಯಾವ ಯಾವ ಬಣ್ಣ ಏನು ಅರ್ಥ ಕೊಡುತ್ತೆ ನೋಡಿ. ಮೂತ್ರ ಸ್ಪಷ್ಟವಾಗಿದ್ದರೆ, ದೇಹದಲ್ಲಿ ನೀರಿನಂಶ ಹೆಚ್ಚಿದ್ದು, ಲವಣಾಂಶ ಕಡಿಮೆ ಇದೆ ಎಂದರ್ಥ.
ಕಂದು ಬಣ್ಣ: ಯಕೃತ್ತಿನಲ್ಲಿರುವ ಉಪ್ಪು, ಶುದ್ಧವಾಗಿ ರಕ್ತದ ಮೂಲಕ ಹೊರ ಹೋಗುತ್ತಿದೆ ಎಂದರ್ಥ. ಅಂದರೆ ಯಕೃತ್ ಸಮಸ್ಯೆಯಲ್ಲಿದೆ. ಹಳದಿ: ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ ಎಂದಾದಲ್ಲಿ ಮೂತ್ರದ ಬಣ್ಣ ಹಳದಿಯಾಗುತ್ತದೆ.
ಕೆಂಪು: ಬೀಟ್ ರೂಟ್ ಮತ್ತು ನೇರಲೆ ಹಣ್ಣು ತಿನ್ನುವುದರಿಂದ ಮೂತ್ರದ ಬಣ್ಣ ಬದಲಾಗೋ ಸಾಧ್ಯತೆ ಇರುತ್ತದೆ. ಅಕಸ್ಮಾತ್ ಏನನ್ನೂ ತಿನ್ನದೆಯೂ ಈ ಬಣ್ಣ ಬಂದರೆ, ಏನೋ ಬದಲಾವಣೆ ಆಗಿದೆ ಎಂದು ಅರ್ಥ ನೀವು ಕೂಡಲೇ ವೈದ್ಯರ ಬಳಿ ಹೋಗುವುದು ಒಳಿತು.
ನೊರೆ ಬರಲೇನು ಕಾರಣವೇನು: ಆತಂಕ ಹೆಚ್ಚಾದಾಗ ಮೂತ್ರದಲ್ಲಿ ಪ್ರೋಟಿನ್ ಆಂಶ ಹೆಚ್ಚಾಗಿ, ಮೂತ್ರದಲ್ಲಿ ನೊರೆ ಹಾಗೂ ವಾಸನೆ ಉಂಟಾಗುತ್ತದೆ. ದೇಹ ನಿರ್ಜಲೀಕರಣವಾದಾಗಲೂ ಹೀಗಾಗಬಹುದು. ಮೂತ್ರ ಲೂಪ್ಸ್ ಎಂದರೆ ಮೂತ್ರದಲ್ಲಿ ನೊರೆ ಉಂಟಾದಾಗ ನಮ್ಮ ದೇಹದ ಭಾಗವಾದ ಚರ್ಮ, ಸ್ತನ, ಮೂತ್ರಪಿಂಡ ಮತ್ತು ಹೃದಯದಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ತಾಯಿ ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ನ ಬದಲಾವಣೆಯಾದಾಗಲೂ ಮೂತ್ರ ನೊರೆಯಾಗುತ್ತದೆ. ಮೂತ್ರನಾಳದ ಸೋಂಕಿದ್ದಾಗಲೂ ಇದು ಕಾಣಿಸಿಕೊಳ್ಳಬಹುದು.
ಸಕ್ಕರೆ ಕಾಯಿಲೆ ಮೂತ್ರಕೋಶಗಳ ಮೇಲೆ ಪ್ರಭಾವ ತೋರಿ ಮೂತ್ರ ನೊರೆಯಿಂದ ಕೂಡಿರಲು ಕಾರಣವಾಗುತ್ತದೆ. ಹೆಚ್ಚಿನ ಬ್ಲಡ್ ಶುಗರ್ ಪ್ರಮಾಣ ಮೂತ್ರಕೋಶಗಳ ಕಾರ್ಯವೈಖರಿಗೆ ಧಕ್ಕೆ ತರುತ್ತದೆ. ಮೂತ್ರದಲ್ಲಿ ಪ್ರೋಟೀನ್ ಪ್ರಮಾಣ ಅಧಿಕವಾಗಿ ಇದ್ದರೆ, ಆ ಸ್ಥಿತಿಯನ್ನು ಪ್ರೋಟಿನ್ಯೂರಿಯಾ ಎನ್ನುತ್ತಾರೆ. ಮೂತ್ರಕೋಶಗಳು ಪ್ರೋಟೀನನ್ನು ಸರಿಯಾಗಿ ಫಿಲ್ಟರ್ ಮಾಡದಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಮೂತ್ರನಾಳಗಳು ಬ್ಯಾಕ್ಟೀರಿಯಾ ಪೀಡಿತವಾಗಿದ್ದರೆ, ನೊರೆಯಿಂದ ಕೂಡಿದ ಮೂತ್ರ ಬರುವ ಅವಕಾಶ ಇದೆ. ಮೂತ್ರದಲ್ಲಿನ ನೊರೆಗೆ ಹೃದಯ ಸಮಸ್ಯೆಗಳ ಲಕ್ಷಣಗಳೂ ಆಗಿರಬಹುದು. ಮೂತ್ರದಲ್ಲಿ ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿ ಇದ್ದಾಗ ಹೃದಯಾಘಾತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮೂತ್ರದಲ್ಲಿ ನೊರೆ ನಿರಂತರ ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಅಷ್ಟಕ್ಕೂ ಮೂತ್ರದ ಬಣ್ಣ ಬದಲಾಗುವುದೇಕೆ ಕಾರಣ ಏನು ಗೊತ್ತಾ. ಸೇವಿಸುವ ಆಹಾರದಿಂದ,ವಿಪರೀತ ಮಾತ್ರೆಗಳನ್ನು ಸೇವಿಸಿದರೆ, ಮೂತ್ರ ಪಿಂಡದಲ್ಲಿ ಸೋಂಕಾದರೆ, ಯೋನಿ ಸೋಂಕಾದರೆ ಬಣ್ಣ ಬದಲಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.