ಹೊಸ್ತಿಲಪೂಜೆಯನ್ನು ಕೇವಲ ಹಬ್ಬ ಹರಿದಿನಗಳಲ್ಲಿ ಮಾಡದೇ ದಿನನಿತ್ಯ ಮಾಡಬೇಕು ಮುತ್ತೈದೆಯರು ಬೆಳಗ್ಗಿನ ಜಾವಾ ಎದ್ದು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ ದೇವರಿಗೆ ದೀಪ ವಿಟ್ಟು ದೇವರಕೋಣೆಯ ಹೊಸ್ತಿಲು ಮತ್ತು ಮುಖ್ಯ ದ್ವಾರದ ಹೊಸ್ತಿಲನ್ನು ಚೆನ್ನಾಗಿ ತೊಳೆಯಬೇಕು ಹೊಸ್ತಿಲ ಪೂಜೆಯು ಅತ್ಯಂತ ಪ್ರಮುಖವಾದದ್ದು ಪ್ರತಿನಿತ್ಯ ಸಂಜೆ ತಾಯಿ ಪಾರ್ವತಿಯು ಮನೆಗೆ ಬರುವಳೆಂಬ ನಂಬಿಕೆಯಿಂದ ಬಾಗಿಲ ಹೊಸ್ತಿಲನ್ನು ಪೂಜಿಸುವ ಪದ್ದತಿ ಇದೆ
ಸಂಜೆ ಗೋಧುಳಿ ಸಮಯಕ್ಕೂ ಮುನ್ನ ಹೊಸಿಲನ್ನು ಶುದ್ಧವಾದ ನೀರಿನಿಂದ ತೊಳೆದು ಅರಿಶಿನದಿಂದ ಸಂಪೂರ್ಣವಾಗಿ ಅಲಂಕರಿಸಿ ಕುಂಕುಮ ಚಂದ್ರಹಚ್ಚಿb ವಿವಿಧ ಹೂಗಳಿಂದ ಶೃಂಗರಿಸಿ ತಳಿರು ತೋರಣ ಹೂಮಾಲೆಗಳಿಂದ ಸುಂದರಗೊಳಿಸಬೇಕು ನಂತರ ಗೋಧುಳಿ ಸಮಯದಲ್ಲಿ ಹಣ್ಣು ಕಾಯಿಗಳೊಂದಿಗೆ ಹೊಸಿಲ ಪೂಜೆಯನ್ನು ಕೈಗೊಳ್ಳುವುದು ಸಂಪ್ರದಾಯ. ಬಾಗಿಲ ಬಳಿ ಮಣ್ಣಿನ ಹಣತೆ ಹಚ್ಚಿ, ದೂಪದೀಪಗಳಿಂದ ಪೂಜಿಸುವುದು ವಾಡಿಕೆ ನಾವು ಈ ಲೇಖನದ ಮೂಲಕ ಹೊಸ್ತಿಲ ಪೂಜೆ ಬಗ್ಗೆ ತಿಳಿದುಕೊಳ್ಳೋಣ.
ರಂಗೋಲಿಯ ಮಹತ್ವ ಅಗಾಧವಾಗಿದೆ ರಂಗೋಲಿಗೆ ದುಷ್ಟ ಶಕ್ತಿಗಳನ್ನು ತಡೆಯುವ ಶಕ್ತಿಯಿದೆ ಹಾಗೂ ಪ್ರತಿಯೊಬ್ಬರು ಹೊಸ್ತಿಲ ಪೂಜೆಯನ್ನು ಮಾಡಬೇಕು ಹೋಸ್ತಿಲ ಪೂಜೆಗೆ ಬೇಕಾಗುವ ಸಾಮಗ್ರಿಗಳೆಂದರೆ ಹೂವು ಮತ್ತು ತಾಮ್ರದ ತಂಬಿಗೆಯಲ್ಲಿ ನೀರು ಕಡಲೆಬೇಳೆ ಅರಿಶಿನ ಕುಂಕುಮ ಮತ್ತು ಅಕ್ಷತೆ ಮತ್ತು ಸಕ್ಕರೆ ಮತ್ತು ಚಂದನ ಹಾಗೂ ಪೂಜೆ ಮಾಡಲು ಕರ್ಪೂರ ಮತ್ತು ಊದುಬತ್ತಿ ಬೇಕಾಗುತ್ತದೆ ಹಾಗೂ ಒಂದು ಬೌಲ್ ಗೆ ಹೊಸ್ತಿಲಿಗೆ ಬೇಕಾಗುವ ಚಂದನ ಅರಿಶಿನ ನೀರು ಹಾಕಿ ಇಡಬೇಕು ಮೊದಲು ಹೊಸ್ತಿಲನ್ನು ನೀರು ಹಾಕು ತೊಳೆಯಬೇಕು
ಹೊಸ್ತಿಲ ಪೂಜೆಯನ್ನು ವಾರಕ್ಕೆ ಎರಡು ಬಾರಿ ಮಾಡಬೇಕು ಹಾಗೂ ಹೊಸ್ತಿಲನ್ನು ನೀರಿನಿಂದ ತೊಳೆದ ನಂತರ ಮಡಿ ಬಟ್ಟೆಯಿಂದ ಒರೆಸಬೇಕು ಹಾಗೂ ಹೊಸ್ತಿಲಿಗೆ ರಂಗೋಲಿ ಹಾಕಬೇಕು ಐದು ಗೆರೆಯ ಹಾಗೆ ರಂಗೋಲಿ ಹಾಕಬೇಕು ಲಕ್ಷ್ಮಿ ದೇವಿ ಒಳಗೆ ಬರಲು ನಾವು ಅವಳಿಗೆ ಒಳಗೆ ಬರುವಂತ ರಂಗೋಲಿಯ ಮೂಲಕ ಬರಮಾಡಿಕೊಳ್ಳಬಹುದು ಹಾಗೆ ಅರಿಶಿನ ಮತ್ತು ಚಂದನದ ಮಿಶ್ರಣವನ್ನು ಹೊಸ್ತಿಲಿಗೆ ಹಚ್ಚಬೇಕು ಹೀಗೆ ಹಚ್ಚುದರಿಂದ ಯಾವುದೇ ದುಷ್ಟ ಶಕ್ತಿಗಳು ದೂರವಾಗುತ್ತದೆ.
ಹೊಸ್ತಿಲ ಪೂಜೆ ಎನ್ನುವುದು ಮನೆಗೆ ರಕ್ಷಾ ಕವಚವಿದ್ದಂತೆ ಹೀಗೆ ಹೊಸ್ತಿಲ ಪೂಜೆಯನ್ನು ಮಾಡಿರುದರಿಂದ ವರಮಹಾಲಕ್ಷ್ಮಿ ಒಲಿಯುತ್ತಾಳೆ ಹಾಗೂ ಹೊಸ್ತಿಲಿಗೆ ಅರಿಶಿನ ಕುಂಕುಮ ವನ್ನು ಹಚ್ಚಬೇಕು ಹೊಸ್ತಿಲ ಬಲಗಡೆ ಹಾಗೂ ಎಡಗಡೆ ಮತ್ತು ಮಧ್ಯದಲ್ಲಿ ಹಚ್ಚಬೇಕು ಮತ್ತು ಹೂವನ್ನು ಹಾಕಬೇಕು ಹಾಗೂ ಹೊಸ್ತಿಲ ಮಧ್ಯದಲ್ಲಿ ತಾಮ್ರದ ತಂಬಿಗೆಯಲ್ಲಿ ನೀರನ್ನು ಇಡಬೇಕು ತಾಯಿ ಗಂಗಮ್ಮನ ಪ್ರಾರ್ಥನೆ ಮಾಡಬೇಕು
ಮೊದಲು ಊದುಬತ್ತಿ ಹಚ್ಚಿ ಪೂಜೆ ಮಾಡಬೇಕು ಮೊದಲು ಕುಲದೇವರನ್ನ ನೆನೆಸಿಕೊಳ್ಳಬೇಕು ಹಾಗೂ ಕರ್ಪೂರ ಹಚ್ಚಿ ಆರತಿ ಬೆಳಗಬೇಕು ಹಾಗೂ ಕಡಲೆ ಮತ್ತು ಸಕ್ಕರೆಯನ್ನ ಹೊಸ್ತಿಲ ಮೂರು ಭಾಗಕ್ಕೆ ಹಾಕಿ ನೈವೇದ್ಯ ಮಾಡಬೇಕು ಹೋಸಿಲ ಪೂಜೆ ಮಾಡುವಾಗ ಮನೆ ಮುಂದೆ ಚಪ್ಪಲಿ ಮತ್ತು ಪೊರಕೆ ಇರಬಾರದು ಮನೆಯ ಬಾಗಿಲಿಗೆ ಭತ್ತದ ತೊರಣವನ್ನು ಹಾಕುವುದು ಉತ್ತಮ ಈ ತೋರಣ ಒಂದು ವರ್ಷದ ಅವಧಿಗೆ ಬರುತ್ತದೆ ಹಾಗೂ ಸಮೃದ್ಧಿಯ ಸಂಕೇತವಾಗಿದೆ.
ಶ್ರದ್ಧೆಯಿಂದ ಮಾಡುವ ಪೂಜೆಗೆ ದೇವರು ಖಂಡಿತ ಫಲ ಕೊಡುತ್ತಾನೆ ಎಂಬ ಮಾತಿದೆ ಹಿಂದೂ ಧರ್ಮದಲ್ಲಿ ಪೂಜೆಗೆ ಪೂಜಾ ವಿಧಾನಕ್ಕೆ ಮತ್ತು ಪೂಜಾ ಸಾಮಗ್ರಿಗಳಿಗೆ ವಿಶೇಷ ಮಹತ್ವವಿದೆ ದೇವರ ಪೂರ್ಣ ಕೃಪೆಗೆ ಪಾತ್ರರಾಗಬೇಕೆಂದರೆ ಕೆಲವೊಂದು ನಿಯಮಗಳನ್ನು ನಿಷ್ಠೆಯಿಂದ ಪಾಲಿಸಬೇಕಾಗುತ್ತದೆ ಕೆಲವೊಮ್ಮೆ ಪೂಜೆಯ ಸಮಯದಲ್ಲಿ ತಿಳಿಯದೇ ಆಗುವ ತಪ್ಪಿನಿಂದ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಪೂಜೆಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಪೂಜಾ ಸಾಮಗ್ರಿಗಳಿಗೂ ಇರುತ್ತದೆ
ಶಾಸ್ತ್ರದಲ್ಲಿ ಹೇಳಿರುವಂತೆ ಕೆಲವೊಂದು ಪೂಜಾ ಸಾಮಗ್ರಿಗಳನ್ನು ನಿಯಮ ಬದ್ಧವಾಗಿ ಉಪಯೋಗಿಸಿದಲ್ಲಿ ಮಾತ್ರ ಪೂಜೆಯ ಫಲ ಸಿಗುವುದು ಪೂಜೆಗೆ ಅನೇಕ ಪರಿಕರಗಳನ್ನು ಬಳಸುತ್ತೇವೆ ಅಷ್ಟೇ ಅಲ್ಲದೆ ಹಿಂದೂ ಧರ್ಮದಲ್ಲಿ ಕೆಲವನ್ನು ಪವಿತ್ರವೆಂದು ಅದನ್ನು ಸರಿಯಾದ ಕ್ರಮದಲ್ಲೇ ಉಪಯೋಗಿಸಬೇಕೆಂಬ ನಿಯಮವಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.