ಎಲ್ಲರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವತಹದ್ದು ಸೌತೆಕಾಯಿ.ಸೌತೆ ಕಾಯಿ ತಿನ್ನುವುದಕ್ಕಷ್ಟೇ ರುಚಿಯಲ್ಲ ಸಾಮಾನ್ಯ ಕಾಯಿಲೆಗಳಿಗೆ ಇದು ರಾಮಬಾಣ ಇದ್ದಂತೆ. ಇದನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಸೌತೆ ಕಾಯಿ ನಿಮ್ಮ ದೇಹಕ್ಕೆ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ ಸೌತೆ ಕಾಯಿಯಲ್ಲಿ ಶೇಕಡಾ ತೊಂಬತ್ತೈದರಷ್ಟು ನೀರಿನ ಅಂಶ ಹೊಂದಿದ್ದು ಇದು ನಿಮ್ಮ ದೇಹದಲ್ಲಿ ಹೆಚ್ಚು ನೀರಿನ ಅಂಶ ಇರುವಂತೆ ನೋಡಿಕೊಳ್ಳುತ್ತದೆ.ಸೌತೆ ಕಾಯಿಯಲ್ಲಿ ಪೌಷ್ಟಿಕಾಂಶಗಳು ದಟ್ಟವಾಗಿರುತ್ತವೆ ಅಲ್ಲದೆ ಫೈಬರ್ ಪೊಟ್ಯಾಷಿಯಂ ಹಾಗೂ ಮೆಗ್ನೀಷಿಯಂ ಕೂಡ ಹೆಚ್ಚಾಗಿರುತ್ತದೆ ಈ ಎಲ್ಲ ಪೌಷ್ಟಿಕಾಂಶಗಳು ರಕ್ತದೊತ್ತಡ ಕಡಿಮೆ ಮಾಡುತ್ತವೆ.
ಸೌತೆಕಾಯಿ ನೈಸರ್ಗಿಕವಾಗಿ ನಿಮ್ಮ ಚರ್ಮವನ್ನು ತಕ್ಷಣ ಪುನಶ್ಚೇತನಗೊಳಿಸುತ್ತದೆ. ಸೌತೆ ಕಾಯಿಯಿಂದ ಚರ್ಮಕ್ಕೆ ಹೆಚ್ಚು ಫ್ರೆಶ್ ನೆಸ್ ಬರುತ್ತದೆ. ಹೀಗಾಗಿ ನಿಮ್ಮದು ಒಣಗಿದ ಚರ್ಮವಾಗಿದ್ದರೆ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿದರೆ ನೀವು ಫ್ರೆಶ್ ಆಗಿ ಕಾಣಿಸುತ್ತಿರಿ. ಸೌತೆ ಕಾಯಿಯಲ್ಲಿ ಅಧಿಕ ಜಲಾಂಶವಿದ್ದು ಕಡಿಮೆ ಕ್ಯಾಲರಿಯನ್ನು ಒಳಗೊಂಡಿರುವುದರಿಂದ ತೂಕ ನಷ್ಟ ಹೊಂದುವವರಿಗೆ ಇದು ವರದಾನವಾಗಿದೆ. ಸೌತೆ ಕಾಯಿಯನ್ನು ಸೂಫುಗಳಲ್ಲಿ ಮತ್ತು ಸಲಾಡ್ ಗಳಲ್ಲಿ ಬಳಸಿರಿ.
ಸೌತೆಕಾಯಿಯು ಕೀಲುಗಳು ಆರೋಗ್ಯವನ್ನು ಸುಧಾರಿಸುತ್ತದೆ. ಕೀಲುಗಳ ಮತ್ತು ಸಂದುಗಳ ಬೇನೆಯಿಂದ ವಿಮುಕ್ತಿಗೊಳಿಸುತ್ತದೆ. ಸೌತೆಕಾಯಿಯು ನಿಶ್ಯಕ್ತಿಯನ್ನು ನಿವಾರಣೆ ಮಾಡುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ ಇದ್ದಾಗ ಒತ್ತಡದಿಂದ ತಲೆನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಇದನ್ನು ತಡೆಯುವ ಸಲುವಾಗಿ ನೀವು ಮನೆಯಲ್ಲಿಯೇ ತಯಾರಿಸಿರುವ ಸೌತೆ ಕಾಯಿ ಖಾದ್ಯವನ್ನು ಸೇವಿಸಿ.
ತುಂಬಾಜನರು ತೂಕವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಸೌತೆಕಾಯಿಯ ಜ್ಯೂಸ್ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಅತಿಯಾಗಿ ಕುಡಿದರೆ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಸೌತೆ ಕಾಯಿ ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿರುವ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
ಸೌತೆ ಸೌತೆ ಕಾಯಿಯಲ್ಲಿರುವ ಪೈಟೋ ರಾಸಾಯನಿಕಗಳು ನಿಮ್ಮ ಬಾಯಿಯ ದುರ್ವಾಸನೆಗೆ ಕಾರಣವಾದ ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುತ್ತದೆ. ಬೇಸಿಗೆ ದಿನದಲ್ಲಿ ಹೆಚ್ಚಾಗಿ ಬಳಕೆಯಾಗುವ ಸೌತೆಕಾಯಿ ದೇಹದಲ್ಲಿ ಉಷ್ಣಾಂಶವನ್ನು ತಗ್ಗಿಸುವುದಲ್ಲದೆ ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಈ ರೀತಿಯಾಗಿ ಸೌತೆಕಾಯಿಯು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.