ಇತರೇ ಎಲ್ಲ ಹಣ್ಣುಗಳಿಗಿಂತ ಶ್ರೇಷ್ಠವಾದ ಹಣ್ಣು ಎಂದು ಕರೆಸಿಕೊಳ್ಳುವ ಸೀಬೆಹಣ್ಣಿನ ಔಷಧೀಯ ಗುಣಗಳು

ಆರೋಗ್ಯ

ಅತಿ ಹೆಚ್ಚು ಪೌಷ್ಠಿಕಾಂಶಕತೆಗಳನ್ನು ಹೊಂದಿರುವ ಸೀಬೆಹಣ್ಣಿನ ಸೇವನೆಯಿಂದ ದೇಹಕ್ಕೆ ನಾನಾ ಬಗೆಯ ಉಪಯೋಗಗಳುಂಟು. ಇತರೇ ಎಲ್ಲ ಹಣ್ಣುಗಳಿಗಿಂತ ಶ್ರೇಷ್ಠವಾದ ಹಣ್ಣು ಎಂದು ಕರೆಸಿಕೊಳ್ಳುವ ಸೀಬೆಹಣ್ಣು ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಿದೆ. 688 ಮಿ.ಗ್ರಾಂ ಪೋಟಾಶಿಯಂ, 66ಮಿ.ಗ್ರಾಂ ಫಾಸ್ಪರಸ್, 36 ಮಿ.ಗ್ರಾಂ ಮೆಗ್ನಿಶಿಯಂ, 30ಮಿ.ಗ್ರಾಂ ಕ್ಯಾಲ್ಶಿಯಂ, 3ಮಿ.ಗ್ರಾ ಸೋಡಿಯಂ, 0.43ಮಿಗ್ರಾಂ ಕಬ್ಬಿಣಾಂಶ, ವಿಟಮಿನ್ ಎ, ಬಿ1, ಬಿ2, ಸಿ, ಬಿ6, ಇ, ಕೆ ಅಂಶಗಳು ಯಥೇಚ್ಛವಾಗಿದೆ.

ಈ ಹಣ್ಣಿನಲ್ಲಿರುವ ವಿಟಮಿನ್ ಎ ಅಂಶದಿಂದ ಕಣ್ಣಿನ ಆರೋಗ್ಯ ಸುಧಾರಿಸುವ ಜೊತೆಗೆ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆ ನಿವಾರಿಸುತ್ತದೆ. ಈ ಹಣ್ಣಿನ ನಿಯಮಿತ ಸೇವನೆಯಿಂದ ಕ್ಯಾನ್ಸರ್ ರೋಗ ಹರಡುವಂತಹ ರೋಗಾಣುಗಳನ್ನು ತಡೆಗಟ್ಟುತ್ತದೆ. ಅದರಲ್ಲಿಯೂ ಬ್ರೆಸ್ಟ್ ಕ್ಯಾನ್ಸರ್ ತಡೆಗೆ ಇದೊಂದು ರಾಮಬಾಣವಿದ್ದಂತೆ.

ಸೀಬೆ ಮರದ ಎಲೆಯಿಂದ ತಯಾರಿಸಿರುವ ಎಣ್ಣೆ ಅತ್ಯುತ್ತಮವಾಗಿದ್ದು ಹಲವು ರೀತಿಯ ಉಪಯೋಗವನ್ನು ದೇಹಕ್ಕೆ ಒದಗಿಸುತ್ತದೆ. ಇದೊಂದು ಉತ್ತಮ ಆಂಟಿಆಕ್ಸಿಡೆಂಟ್ ಗುಣ ಹೊಂದಿರುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಅದೇ ರೀತಿ ಹೃದಯಕ್ಕೆ ಸಂಬಂಧಿಸಿದ ಹಲವು ಖಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಈ ಹಣ್ಣು ಹೊಂದಿದೆ.

ಸೀಬೆ ಎಲೆಯನ್ನು ತಿನ್ನುವುದರಿಂದ ಡೈರಿಯಾ ರೋಗ ನಿಯಂತ್ರಣಕ್ಕೆ ಬರುತ್ತದೆ ಹಾಗೇ ಬೇಧಿಯಾಗುವುದನ್ನು ತಡೆಗಟ್ಟಿ ದೇಹದ ನಿತ್ರಾಣವನ್ನು ಶಮನಗೊಳಿಸುತ್ತದೆ. ಬಾಯಿಯ ದುರ್ನಾತ ಹಾಗೂ ಒಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ ಸೀಬೆ ಎಲೆಗಳನ್ನು ಅಗಿದು ತಿನ್ನುತ್ತದೆ ಸಮಸ್ಯೆ ನಿವಾರಣೆಯಾಗುತ್ತದೆ.

ಥೈಯರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವರಿಗೆ ಈ ಹಣ್ಣು ತುಂಬಾ ಒಳ್ಳೆಯದು. ನೆಗಡಿ, ಕೆಮ್ಮು ಹಾಗೂ ಕಫ ಮತ್ತು ಶ್ವಾಸಕೋಶದ ಸೊಂಕಿನಿಂದ ಬಳಲುತ್ತಿರುವವರು ಇದರ ಎಲೆ ಅಥವಾ ಎಣ್ಣೆಯನ್ನು ಬಳಸುವುದು ಉತ್ತಮ.

ಇದರಲ್ಲಿರುವ ವಿಟಮಿನ್ ಸಿ ಮತ್ತು ಕಬ್ಬಿಣಾಂಶದಿಂದ ದೇಹಕ್ಕೆ ಚೈತನ್ಯ ತುಂಬುವುದು. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ ಸೀಬೆಕಾಯಿಯನ್ನು ನಿತ್ಯ ಸೇವನೆ ರೂಢಿಸಿಕೊಳ್ಳಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *