ಕಡಲೆ ಬೀಜವನ್ನು ತಿನ್ನುವ ಮೊದಲು ಈ ಲೇಖನವನ್ನು ತಪ್ಪದೇ ಓದಿ

ಆರೋಗ್ಯ

ಕಡಲೆಬೀಜ ಬಹುತೇಕ ಎಲ್ಲರಿಗೂ ಇಷ್ಟ ಹಾಗಾಗಿ ಇದನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ನಮ್ಮ ಹಿರಿಯರು ಸುಮ್ಮನೇ ಇದನ್ನು ಬಡವರ ಬಾದಾಮಿ ಎಂದು ಕರೆದಿಲ್ಲ. ನಮ್ಮ ದೇಹಕ್ಕೆ ಬಾದಾಮಿಗಿಂತ ಹೆಚ್ಚಾದ ಲಾಭ ನೀಡುವ ಶಕ್ತಿ ಈ ಕಡಲೆ ಬೀಜಗಳಿಗಿದೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡಿದರಷ್ಟೇ ಇದರ ಪೂರ್ತಿಯಾದ ಲಾಭ ನಮ್ಮ ದೇಹಕ್ಕೆ ಸಿಗುತ್ತದೆ.

ಇನ್ನು ಬಲಹೀನತೆ ಹಾಗೂ ರೋಗಗಳನ್ನು ದೂರಮಾಡಲು ಬಾದಾಮಿ ಹಾಗೂ ಮಾಂಸದ ಸೇವನೆ ಮಾಡಿ ಎಂದು ಅನೇಕರು ತಿಳಿಸುತ್ತಾರೆ ಆದರೆ ಈ ಕಡಲೆ ಬೀಜಗಳನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡಿದರೆ ಇದು ಮಾಂಸ ಹಾಗೂ ಬಾದಾಮಿ ಗಿಂತಲೂ ಹೆಚ್ಚಿನ ಲಾಭ ನಮ್ಮ ದೇಹಕ್ಕೆ ನೀಡುತ್ತದೆ. ಇನ್ನು ಮಾಂಸದಲ್ಲಿ 10% ಪ್ರೋಟಿನ್ ಇದ್ದರೆ ಕಡಲೆಬೀಜ ಗಳಲ್ಲಿ 25 % ಪ್ರೊಟೀನ್ ಇರುತ್ತದೆ.

ಇಷ್ಟೆಲ್ಲ ಲಾಭದಾಯಕ ಕಡಲೆಬೀಜವನ್ನು ಹೇಗೆ ಹಾಗೂ ಯಾವಾಗ ಸೇವಿಸಬೇಕು ಇನ್ನೂ ಯಾವ ಕಡಲೆಬೀಜ ತಿಂದರೆ ಒಳ್ಳೆಯದು ಎಂದು ತಿಳಿಯೋಣ ಬನ್ನಿ ದೇಹಕ್ಕೆ ಸಂಪೂರ್ಣ ಲಾಭ ಸಿಗಲು ಕಡಲೆ ಬೀಜವನ್ನು ಈ ರೀತಿಯಾಗಿ ಸೇವಿಸಿ.

ಒಂದು ಹಿಡಿ ಕಡಲೆ ಬೀಜವನ್ನು ಒಂದು ಬೌಲ್ ಗೆ ಹಾಕಿ ಇದಕ್ಕೆ ನೀರು ಹಾಕಿ ನೆನೆಸಿ(ಕಡಲೆಬೀಜ ಮುಳುಗುವವರೆಗೆ ನೀರು ಹಾಕಿದರೆ ಸಾಕು) ಇದನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಬರಿ ಹೊಟ್ಟೆಗೆ ಒಂದು ತುಂಡು ಬೆಲ್ಲದ ಜೊತೆ ಸೇವಿಸಿ ಇದರಿಂದ ನಿಮಗೆ ಜಾಸ್ತಿ ಲಾಭ ಸಿಗುತ್ತದೆ ಹಾಗೂ ಸ್ವಲ್ಪ ದಿನದಲ್ಲಿ ಬದಲಾವಣೆ ಕಂಡುಬರುತ್ತದೆ.

ಯಾವ ಕಡಲೆಬೀಜ ಸೇವಿಸಿದರೆ ಒಳ್ಳೆಯದು ದೇಹಕ್ಕೆ ಒಳ್ಳೆಯ ಲಾಭ ಪಡೆಯಲು ಹಸಿ ಕಡಲೆ ಬೀಜವನ್ನು ನೆನೆಸಿ ಸೇವಿಸಿದರೆ ಒಳ್ಳೆಯದು. ನೆನೆಸಿಟ್ಟ ಕಡಲೆಬೀಜ ಪ್ರತಿನಿತ್ಯ ಸೇವಿಸುವುದರಿಂದ ಆಗುವ ಲಾಭಗಳು: ನೆನೆಸಿದ ಕಡಲೆ ಬೀಜವನ್ನು ಬೆಳಿಗ್ಗೆ ತಿನ್ನುವುದರಿಂದ ಅಸಿಡಿಟಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಬೇಗನೆ ಕಡಿಮೆಯಾಗುತ್ತದೆ. ನೆನೆಸಿಟ್ಟ ಕಡಲೆಬೀಜದ ಸೇವನೆಯಿಂದ ಶ್ವಾಸಕೋಶದ ಆರೋಗ್ಯ ಚೆನ್ನಾಗಿರುತ್ತದೆ. ನಿಮಗೇನಾದರೂ ಉಸಿರಾಟದ ತೊಂದರೆ ಇದ್ದರೆ ಅಥವಾ ಧೂಮಪಾನ ಮಾಡುವ ಅಭ್ಯಾಸವಿದ್ದರೆ ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ನಿಮ್ಮ ಶ್ವಾಸಕೋಶ ಆರೋಗ್ಯವಾಗಿರುತ್ತದೆ.

ಕೆಲವರಿಗೆ ಹಸಿವೂ ಆಗುವುದಿಲ್ಲ ಅಂಥವರು ಈ ನೆನೆಸಿಟ್ಟ ಕಡಲೆಬೀಜವನ್ನು ಬೆಳಗ್ಗೆ ಬರಿಹೊಟ್ಟೆಗೆ ತಿಂದರೆ ಸಾಕು ಈ ಸಮಸ್ಯೆ ಸರಿಹೋಗುತ್ತದೆ. ಕೂದಲ ಹಾಗೂ ಮುಖದ ಸೌಂದರ್ಯಕ್ಕೂ ಕೂಡ ಈ ನೆನೆಸಿಟ್ಟ ಕಡಲೆಬೀಜ ತುಂಬಾನೆ ಒಳ್ಳೆಯದು. ಇದರಲ್ಲಿ ಒಮೆಗಾ-6 ಫ್ಯಾಟಿ ಆಸಿಡ್ ಇದೆ ಇದನ್ನು ಯಾವುದೇ ಸಮಯದಲ್ಲಾದರೂ ಸೇವಿಸಿ ನಿಮ್ಮ ಮುಖದಲ್ಲಿ ಒಳ್ಳೆಯ ಹೊಳಪು ಬರುತ್ತದೆ ಹಾಗೂ ಮುಖದಲ್ಲಿ ನೆರಿಗೆಗಳು ಕಡಿಮೆಯಾಗುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸಿ ನಿಮಗೆ ಹೃದಯ ಸಂಬಂಧಿ ಕಾಯಿಲೆಗಳು ಹತ್ತಿರವೂ ಸುಳಿಯುವುದಿಲ್ಲ. ಇನ್ನು ಕಡಲೆ ಬೀಜಗಳಲ್ಲಿ ಹೇರಳವಾದ ಕ್ಯಾಲ್ಷಿಯಂ ಹಾಗೂ ವಿಟಮಿನ್ ಡಿ ಇದೆ, ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ವಯಸ್ಸಾದವರು ಸೇವಿಸಿದರೆ ಅವರಿಗೆ ಮೂಳೆಗಳ ನೋವು ಕಾಡುವುದಿಲ್ಲ. ನೆನೆಸಿಟ್ಟ ಕಡಲೆ ಬೀಜವನ್ನು ಸೇವಿಸುವುದರಿಂದ ಇನ್ನೂ ಅನೇಕ ಲಾಭಗಳು ನಮ್ಮ ದೇಹಕ್ಕೆ ಸಿಗುತ್ತದೆ. ಇನ್ನು ಮುಂದೆ ಈ ರೀತಿಯಾಗಿ ಕಡಲೆ ಬೀಜವನ್ನು ತಿಂದು ನೋಡಿ, ನಿಮ್ಮ ಮಕ್ಕಳಿಗೂ ಕೂಡ ಕೊಡಿ ಆರೋಗ್ಯವಂತರಾಗಿರಿ. ಧನ್ಯವಾದಗಳು.
#Nk

Leave a Reply

Your email address will not be published. Required fields are marked *