ನಿಮ್ಮ ಜೀವನದಲ್ಲಿ ಎಂದಿಗೂ ಕೂಡ ಮಲಬದ್ಧತೆ ಸಮಸ್ಯೆ ಆಗಬಾರದೆಂದರೆ ಈ ಸಿಂಪಲ್ ಟಿಪ್ಸ್ ಗಳನ್ನು ಪಾಲಿಸಿ

ಆರೋಗ್ಯ

ಸಾಮಾನ್ಯವಾಗಿ ಈಗಿನ ಅವಸರದ ಜೀವನಶೈಲಿಯಿಂದ ಬಹುತೇಕರಿಗೆ ಮಲಬದ್ಧತೆಯಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇನ್ನೂ ಮಲಬದ್ಧತೆ ಸಮಸ್ಯೆಗೆ ಅನೇಕ ಕಾರಣಗಲಿವೆ ಅದರಲ್ಲಿ ಪ್ರಮುಖವಾದದೆಂದರೆ ಸರಿಯಾದ ಆಹಾರ ಪದ್ಧತಿ ಸೇವಿಸದಿರುವುದು, ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕುಳಿತು ಕೊಳ್ಳುವುದು, ದೈಹಿಕ ಚಟುವಟಿಕೆ ಇಲ್ಲದಿರುವುದು ಹಾಗೂ ನೀರನ್ನು ಹೆಚ್ಚಾಗಿ ಸೇವಿಸದಿರುವುದು. ಇನ್ನು ನಾವು ಸೇವಿಸುವ ಆಹಾರಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು
ಏಕೆಂದರೆ ಈಗಿನ ಒತ್ತಡದ ಜೀವನ ಶೈಲಿಯಲ್ಲಿ ಹೆಚ್ಚಾಗಿ ಹೊರಗಡೆ ತಿಂಡಿ ತಿನಿಸುಗಳ ಮೇಲೆ ಅವಲಂಬಿತವಾಗಿದ್ದೇವೆ ಅಂದರೆ ಉದಾಹರಣೆಗೆ ಬೇಕರಿ ತಿಂಡಿ ತಿನಿಸುಗಳು,ಚಾಟ್ಸ್ ಇದರಿಂದ ಮಲಬದ್ಧತೆಯಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಫೈಬರ್,ಮಿನರಲ್ಸ್ ಹೆಚ್ಚಾಗಿರುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

ಇನ್ನೂ ಈ ಮಲಬದ್ಧತೆಯನ್ನು ಹೋಗಲಾಡಿಸುವ 1 ಸುಲಭವಾದ ಮನೆಮದ್ದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಹೆಚ್ಚು ನಾರಿನಾಂಶ ಇರುವ ಹಣ್ಣು ತರಕಾರಿಗಳನ್ನು ಪ್ರತಿನಿತ್ಯದ ಆಹಾರಕ್ರಮದಲ್ಲಿ ಸೇವಿಸಬೇಕು. ಸೇಬು, ಕಿತ್ತಳೆ, ಬಾಳೆಹಣ್ಣು ಮತ್ತು ಇನ್ನಿತರ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಸುಲಭವಾಗಿ ಮಲವಿಸರ್ಜನೆಯಾಗುತ್ತದೆ ಹಾಗೂ ಇದರಿಂದ ಮಲಬದ್ಧತೆಯಂಥ ಸಮಸ್ಯೆ ನಿವಾರಣೆಯಾಗುತ್ತದೆ.

ಪ್ರತಿದಿನ ರಾತ್ರಿ ಊಟವಾದ 45 ನಿಮಿಷಗಳ ನಂತರ 1 ಲೋಟ ಬಿಸಿ ನೀರನ್ನು ಕುಡಿಯುವುದರಿಂದ ಚೆನ್ನಾಗಿ ಜೀರ್ಣವಾಗುತ್ತದೆ ಹಾಗೂ ಇದು ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಇದರಿಂದ ದೇಹ ಶುದ್ಧಿಯಾಗಿ ಮುಂಜಾನೆ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ.

ಪ್ರತಿದಿನ ಸರಿಯಾದ ಸಮಯಕ್ಕೆ ಸರಿಯಾದ ಆಹಾರವನ್ನು ಸೇವಿಸುವುದು ಕೂಡ ಬಹಳ ಮುಖ್ಯ. ಪ್ರತಿನಿತ್ಯ ನಮ್ಮ ದೇಹಕ್ಕೆ ಬೇಕಾಗಿರುವಷ್ಟು ಸಾಕಾಗುವಷ್ಟು ನೀರನ್ನು ಕುಡಿಯಬೇಕು. ಹೆಚ್ಚಾಗಿ ಹಣ್ಣು, ತರಕಾರಿ, ಹಸಿರು ಸೊಪ್ಪುಗಳನ್ನು ಸೇವಿಸಬೇಕು. ಖಾರ ಮಸಾಲೆ ಪದಾರ್ಥಗಳು ಹಾಗೂ ಮಾಂಸಾಹಾರಗಳನ್ನು ಮಿತವಾಗಿ ಸೇವಿಸಬೇಕು. ಧೂಮಪಾನ ಮತ್ತು ಮದ್ಯಪಾನದಂತಹ ದುಶ್ಚಟಗಳಿಂದ ದೂರವಿರಬೇಕು. ಸೋಡಾ ಪುಡಿ ಬಳಸಿದ ಆಹಾರ ಮತ್ತು ಮೈದಾ ಬಳಸಿದ ಆಹಾರಗಳನ್ನು ಆದಷ್ಟು ಕಡಿಮೆ ಮಾಡಬೇಕು. ಮುಖ್ಯವಾಗಿ ಆಹಾರವನ್ನು ನಿಧಾನವಾಗಿ ಸೇವಿಸಬೇಕು ಅವಸರವಾಗಿ ಸೇವಿಸಬಾರದು. ಧನ್ಯವಾದಗಳು.
#Nk

Leave a Reply

Your email address will not be published. Required fields are marked *