ವಯಸ್ಸಾದ ಮೇಲೆ ಮೂಳೆಗಳು ತಮ್ಮ ಬಲವನ್ನು ಕಳೆದುಕೊಳ್ಳುತ್ತದೆ. ಈವಾಗಂತೂ ಪ್ರತಿಯೊಬ್ಬರೂ ಮಂಡಿ ನೋವು, ಕೀಲು ನೋವು, ಮೂಳೆಗಳ ಬಾಧೆ,ಮೈಕೈ ನೋವು ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆಲ್ಲಾ ಇಂದಿನ ಜೀವನಶೈಲಿಯೂ ಪ್ರಮುಖ ಕಾರಣವೆಂದು ಹೇಳಬಹುದು. ಸರಿಯಾದ ರೀತಿಯಲ್ಲಿ ಆಹಾರ ಕ್ರಮ ಇಲ್ಲದೇ ಇರುವುದು ಕೂಡ ಇದಕ್ಕೆ ಕಾರಣವಾಗಿದೆ. ಹಾಗಿದ್ರೆ ಮೂಳೆಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸಲು ಏನು ಮಾಡಬೇಕು ಎಂದು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ನಮ್ಮ ಆಹಾರ ಪದ್ಧತಿಯಲ್ಲಿ ಕ್ಯಾಲ್ಷಿಯಂ ಅಂಶವನ್ನು ಹೊಂದಿರುವ ಆಹಾರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಮೂಳೆಗಳ ಸಮಸ್ಯೆಯಿರುವುದಿಲ್ಲ ಆದ್ದರಿಂದ ಎಳ್ಳಿನ ಸೇವನೆ ಮಾಡಬೇಕು. ಎಳ್ಳಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಷಿಯಂ ಇದೆ ಇದರ ಸೇವನೆಯಿಂದ ಕೀಲುನೋವು , ಮಂಡಿನೋವು ನಿವಾರಣೆಯಾಗುವುದರ ಜೊತೆಗೆ ಕ್ಯಾಲ್ಸಿಯಂ ಕೊರತೆ ಕೂಡ ನಿವಾರಣೆಯಾಗುತ್ತದೆ.
ಎಳ್ಳನ್ನು ಹೇಗೆ ಸೇವನೆ ಮಾಡಬೇಕು: ಒಂದು ಮಿಕ್ಸಿ ಜಾರಿಗೆ ಬಿಳಿ ಎಳ್ಳನ್ನು ಹಾಕಿ ಪುಡಿ ಮಾಡಿ ಹಾಲನ್ನು ಚೆನ್ನಾಗಿ ಕುದಿಸಿ ಅದಕ್ಕೆ 1 ಚಮಚ ಅರಿಶಿನ ಪುಡಿಯನ್ನು ಸೇರಿಸಿ ಪ್ರತಿ ದಿನ ರಾತ್ರಿ ಮಲಗುವ ಮೊದಲು ಕುಡಿಯಿರಿ. ಈ ರೀತಿ ಮಾಡುವುದರಿಂದ ಕೀಲುನೋವು , ಮಂಡಿನೋವು, ಮೈಕೈ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.
ಕ್ಯಾಲ್ಸಿಯಂ ಕೊರತೆ ಬಂದರೆ ನಾವೆಲ್ಲ ಸಾಮಾನ್ಯವಾಗಿ ಮಾತ್ರೆಗಳ ಮೊರೆ ಹೋಗುತ್ತೇವೆ ಆದರೆ ಅದಕ್ಕೆ ಆಹಾರ ಪದ್ಧತಿಯಲ್ಲಿ ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ.
ಧನ್ಯವಾದಗಳು.
#Nk