ಮನೆಯಲ್ಲಿ ದೊರೆಯುವ ತುಪ್ಪದಲ್ಲಿದೆ ಇಷ್ಟೊಂದು ಆರೋಗ್ಯಕರ ಸೂತ್ರಗಳು

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ತುಪ್ಪ ಅಂದ್ರೆ ಎಲ್ಲರಿಗು ಬಾಯಲ್ಲಿ ನೀರು ಬರುತ್ತದೆ. ಆದರೆ ಇನ್ನೂ ಕೆಲವರಿಗೆ ಈ ತುಪ್ಪದ ವಾಸನೆ ಅಂದ್ರೆ ಇಷ್ಟ ಆಗುವುದಿಲ್ಲ. ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಈ ತುಪ್ಪ ಇಲ್ಲದೆ ಅಪರಿಪೂರ್ಣ ಅಂತ ಹೇಳಿದರೆ ತಪ್ಪಾಗಲಾರದು. ಇದು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ ಆಗಿದೆ ಅಂತ ತುಂಬಾನೇ ಜನರಿಗೆ ಇದರ ಅರಿವು ಇರುವುದಿಲ್ಲ ಮಿತ್ರರೇ. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ನಮ್ಮ ಆರೋಗ್ಯಕ್ಕೆ ತುಪ್ಪವು ಎಷ್ಟೊಂದು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಹಾಗೆಯೇ ಇದರ ಇನ್ನಿತರ ಪ್ರಯೋಜನವನ್ನು ತಿಳಿಯೋಣ ಬನ್ನಿ.

ಈ ತುಪ್ಪವನ್ನು ನಾವು ಸಾಮಾನ್ಯವಾಗಿ ಅಡುಗೆಯನ್ನು ಮಾಡುವಾಗ ಬಳಕೆ ಮಾಡುತ್ತೇವೆ. ಮುಖ್ಯವಾಗಿ ಊಟವನ್ನು ಮಾಡುವಾಗ ಕೂಡ ಊಟದಲ್ಲಿ ಹಾಕಿಕೊಂಡು ಆಹಾರವನ್ನು ಸೇವನೆ ಮಾಡುತ್ತೇವೆ. ಆದರೆ ಕೆಲವು ಸೆಲೆಬ್ರಿಟಿಗಳು ಹೇಳುತ್ತಾರೆ ಈ ತುಪ್ಪದಲ್ಲಿ ಅಡುಗೆಯಲ್ಲಿ ಬಳಕೆ ಮಾಡುವುದಲ್ಲದೆ ಇದು ಬೇಗನೆ ನಿದ್ರೆಗೆ ಜಾರುವಂತೆ ಮಾಡುತ್ತದೆ ಅಂತ ಹೇಳುತ್ತಾರೆ. ಹಾಗೆ ಅಂದ ಮಾತ್ರಕ್ಕೆ ನೀವು ದಿನ ರಾತ್ರಿಯೂ ನೀವು ತುಪ್ಪವನ್ನು ಸೇವನೆ ಮಾಡಬೇಕಾದ ಅವಶ್ಯಕತೆ ಏನು ಬೇಕಾಗಿಲ್ಲ ಮಿತ್ರರೇ. ಬದಲಾಗಿ ನೀವು ಏನು ಮಾಡಬೇಕು ಅಂದ್ರೆ ತುಪ್ಪವನ್ನು ನಿಮ್ಮ ಪಾದದ ಕೆಳಗಡೆ ಹಚ್ಚಿ ಆ ಪಾದಗಳು ಬೆಚ್ಚಗೆ ಆಗುವವರೆಗೆ ಲಘು ಮಸಾಜ್ ಮಾಡಿದರೆ ನಿಮಗೆ ನಿದ್ರೆಗೆ ಜಾರುವಂತೆ ಮಾಡುತ್ತದೆ ಈ ತುಪ್ಪ ಅಂತ ಹೇಳಲಾಗಿದೆ. ಈ ತುಪ್ಪವು ನಿದ್ರೆ ಬರುವಂತೆ ಮಾಡಲು ಸಹಾಯ ಮಾಡುವುದಲ್ಲದೆ ಇದರ ಇನ್ನಿತರ ಪ್ರಯೋಜನಗಳನ್ನು ತಿಳಿಯೋಣ ಬನ್ನಿ. ಮೊದಲನೆಯದು ಈ ತುಪ್ಪವನ್ನು ಪಾದದ ಕೆಳಗಡೆ ಹಚ್ಚುವುದರಿಂದ ಕೀಲು ನೋವು ಕಡಿಮೆ ಮಾಡುತ್ತದೆ ಹಾಗೆಯೇ ದೇಹಕ್ಕೆ ವಿಶ್ರಾಂತಿ ಸಿಕ್ಕಿ ನಿಮಗೆ ನೆಮ್ಮದಿ ಮೂಡ್ ಬಂದು ನೀವು ನಿದ್ರೆಗೆ ಜಾರುತ್ತೀರಿ.ಇನ್ನೂ ಎರಡನೆಯದು, ಉದರ ಸಂಬಂಧಿ ಸಮಸ್ಯೆಗಳು, ಅಜೀರ್ಣತೆ, ಮೂಲವ್ಯಾಧಿ, ಗೊರಕೆ ಸಮಸ್ಯೆ, ನಿದ್ರೆ ಇಂದ ಪದೇ ಪದೇ ಎಚ್ಚರ ಆಗುವುದು, ಹುಳಿ ತೇಗು ಸಮಸ್ಯೆ ಇಂಥಹ ಇನ್ನಿತರ ಹಲವಾರು ಸಮಸ್ಯೆಗಳನ್ನು ಈ ತುಪ್ಪವನ್ನು ದೂರ ಮಾಡಲು ತುಂಬಾನೇ ಸಹಾಯ ಮಾಡುತ್ತದೆ.

ಇನ್ನೂ ಕೆಲವು ಜನರಿಗೆ ತುಂಬಾನೇ ವಾಂತಿ ಭೇಧಿ ಆಗುತ್ತಿರುತ್ತದೆ. ಅವರು ಏನು ಮಾಡಬೇಕು ಅಂದ್ರೆ ತುಪ್ಪವನ್ನು ಪಾದಕ್ಕೆ ಹಚ್ಚಿದರೆ ಕಡಿಮೆ ಆಗುತ್ತದೆ ಜೊತೆಗೆ ಹೊಟ್ಟೆ ಉಬ್ಬರ ಕೂಡ ಕಡಿಮೆ ಆಗುತ್ತದೆ. ಮತ್ತು ತುಪ್ಪದಲ್ಲಿ ಕ್ಯಾನ್ಸರ್ ಗಡ್ಡೆಗಳನ್ನು ಹುಟ್ಟದಂತೆ ನೋಡಿಕೊಳ್ಳುವ ಶಕ್ತಿಯನ್ನು ಹೊಂದಿದೆ ಅಷ್ಟೇ ಅಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಜೀವಸತ್ವಗಳು ಇದ್ದು ಇವು ದೇಹವನ್ನು ಹಲವಾರು ಬಗೆಯ ರೋಗಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ. ಈ ಹಸುವಿನ ತುಪ್ಪವನ್ನು ಮೂಗಿಗೆ ಒಂದು ಹನಿ ಹಾಕಿದರೆ ಮೂಗಿನಿಂದ ಬರುವ ರಕ್ತಸ್ರಾವವನ್ನು ತಪ್ಪಿಸಬಹುದು. ಇನ್ನೂ ಇದರ ಜೊತೆಗೆ ಇದು ಕೂದಲು ಉದುರುವ ಸಮಸ್ಯೆಯನ್ನು ಕೂಡ ಇದು ನಿವಾರಣೆ ಮಾಡುತ್ತದೆ ಜೊತೆಗೆ ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಇಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿ ಅಂದ್ರೆ ನೀವು ಸಾಧ್ಯವಾದಷ್ಟು ಹಸುವಿನ ತುಪ್ಪವನ್ನು ಬಳಕೆ ಮಾಡಿ ಇದು ಒಂದು ಸ್ಲೀಪಿಂಗ್ ಟಾನಿಕ್ ಹಾಗೆ ಕೆಲಸವನ್ನು ಮಾಡುತ್ತದೆ. ಇದರಿಂದ ನೀವು ತುಂಬಾನೇ ಉಲ್ಲಾಸದಿಂದ ಇರುತ್ತೀರಿ ನಿಮ್ಮ ದಿನವೂ ತುಂಬಾನೇ ಉತ್ಸಾಹ ಭರಿತವಾಗಿ ಸಾಗುತ್ತದೆ. ಹಾಗೆಯೇ ಈ ತುಪ್ಪದ ಲೇಪನದಿಂದ ಚರ್ಮದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ನೋಡಿದ್ರಲಾ ಸ್ನೇಹಿತರೇ, ಹಾಗಾದ್ರೆ
ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಶುಭದಿನ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *