ಎಂತಹ ಕೆಮ್ಮು ಇದ್ದರು ಹೋಗಲಾಡಿಸುತ್ತೆ ಈ ಎರಡು ಬೇವಿನ ಎಲೆ

ಆರೋಗ್ಯ

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆಯುವ ಗಿಡ ಮರಗಳಲ್ಲಿ ಅನೇಕ ಔಷಧೀಯ ಗುಣಗಳು ಇರುತ್ತವೆ. ಅದೇ ರೀತಿ ಬೇವು ಕೂಡ ಅನೇಕ ಔಷಧೀಯ ಗುಣಗಳನ್ನು ಹೊಂದಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಬೇವಿನ ಮರದ ಪ್ರತಿಯೊಂದು ಭಾಗದಲ್ಲಿಯೂ ಔಷಧಿಯ ಗುಣಗಳಿವೆ.

ಬೇವಿನ ಮರ 130ಕ್ಕಿಂತಲೂ ಹೆಚ್ಚು ಜೈವಿಕ ಗುಣಗಳನ್ನು ಹೊಂದಿದ್ದು, ಎಲೆಗಳು, ಕೊಂಬೆ, ತೊಗಟೆ, ಬೀಜ, ಬೇರು, ಹಣ್ಣು, ಹೂವುಗಳಲ್ಲಿಯೂ ಕೂಡ ಅನೇಕ ಔಷಧಿ ಗುಣಗಳಿವೆ. ಸೋಂಕು, ಜ್ವರ, ಚರ್ಮದ ಕಾಯಿಲೆ, ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಆಯುರ್ವೇದ ಚಿಕಿತ್ಸೆಯಲ್ಲಿ ಬೇವನ್ನು ಬಳಕೆ ಮಾಡುತ್ತಾರೆ. ಬೇವಿನ ಎಲೆಗಳನ್ನು ಅಗೆದು ತಿನ್ನುವುದರಿಂದ ಯಾವ ಉಪಯೋಗ ಪಡೆಯಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಕಣ್ಣಿನ ದೃಷ್ಟಿಗೆ ಒಳ್ಳೆಯದು: ಬೇವಿನ ಎಲೆಗಳಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಆಯುರ್ವೇದ ಹೇಳುತ್ತದೆ. ಬೇವಿನ ಎಲೆಗಳನ್ನು ತಿನ್ನುವುದರಿಂದ ಕಣ್ಣುಗಳ ದೃಷ್ಟಿಗೆ ತುಂಬಾ ಒಳ್ಳೆಯದು. ಇನ್ನು, ತುರಿಕೆ, ದಣಿವು ಅಥವಾ ಕಣ್ಣು ಕೆಂಪಾದರೆ ಬೇವಿನ ಎಲೆಗಳನ್ನು ನೀರಲ್ಲಿ ಬೇಯಿಸಿ, ತಣ್ಣಗಾದ ನಂತರ ಸಮಸ್ಯೆ ಕಾಣಿಸಿಕೊಂಡ ಭಾಗವನ್ನ ಆ ನೀರಿನಿಂದ ತೊಳೆಯುವುದರಿಂದ ಕಣ್ಣಿನ ನೋವು ಕಡಿಮೆ ಆಗುತ್ತದೆ.

ಚರ್ಮಕ್ಕೆ ಸಹಕಾರಿ: ಬೇವಿನ ಎಲೆಗಳಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣ ಇರುತ್ತದೆ. ಇದರಿಂದಾಗಿ ಸೋಂಕುಗಳು ಹಾಗೂ ಯಾವುದೇ ರೀತಿಯ ಚರ್ಮದ ತೊಂದರೆಗಳಿಗೆ ಬೇವಿನ ಎಲೆ ಉತ್ತಮ ಪರಿಹಾರ ಒದಗಿಸುತ್ತದೆ. ಬೇವಿನ ಎಲೆಗಳನ್ನು ಅಗೆದು ತಿನ್ನುವುದರಿಂದ ಚರ್ಮದ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಪಡೆದುಕೊಳ್ಳಬಹುದು. ಇದರಿಂದ ಚರ್ಮವು ಹೊಳಪನ್ನು ಪಡೆದುಕೊಳ್ಳುತ್ತದೆ.

ಕೂದಲ ಪೋಷಣೆ: ಬೇವಿನ ಎಲೆ ತಿನ್ನುವುದರಿಂದ ನಿಮ್ಮ ಕೂದಲಿಗೆ ಉಪಕಾರಿ. ತಲೆ ಹೊಟ್ಟು ನಿವಾರಿಸಲು ಬೇವಿನ ಎಲೆ ತುಂಬಾ ಸಹಾಯ ಮಾಡುತ್ತದೆ. ಬಿಸಿನೀರಿನೊಂದಿಗೆ ಬೇವಿನ ಎಲೆಗಳನ್ನು ಹಾಕಿ ತಲೆ ಸ್ನಾನ ಮಾಡುವುದರಿಂದ ತಲೆ ಹೊಟ್ಟು, ಕೂದಲು ಉದುರುವಿಕೆಯನ್ನ ತಡೆಗಟ್ಟಬಹುದು.

ಕೆಮ್ಮು ನಿವಾರಿಸುತ್ತದೆ: ಬೇವಿನ ತೊಗಟೆಯ ತಿರುಳು ತೆಗೆದು ಜಜ್ಜಿ ಅದರ ಕಷಾಯವನ್ನು ಕುಡಿದರೆ ಅತಿಯಾದ ಕೆಮ್ಮು ಬೇಗ ನಿವಾರಣೆಯಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *