ಮಕ್ಕಳ ಶೀತ ನೆಗಡಿ ಕೆಮ್ಮು ಕಫ ಗಂಟಲು ನೋವಿಗೆ ಇದೊಂದೇ ಎಲೆ ಸಾಕು

ಆರೋಗ್ಯ

ನಮಸ್ತೆ ಪ್ರಿಯ ಮಿತ್ರರೇ, ದೊಡ್ಡವರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾದರೆ ಅವರು ಹೇಗಾದ್ರೂ ಅದನ್ನು ಸಹಿಸಿಕೊಳ್ಳುತ್ತಾರೆ ಆದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆದ್ರೆ ಮಕ್ಕಳು ಚೆನ್ನಾಗಿ ಬೆಳೆಯುವುದಿಲ್ಲ ನೋಡಲು ಅಸ್ತವ್ಯಸ್ತವಾಗಿ ಕಾಣುತ್ತಾರೆ. ದೇಹವು ಸದೃಢವಾಗಿ ಆರೋಗ್ಯವಾಗಿ ಬೆಳೆಯುವುದಿಲ್ಲ. ಹೀಗೆ ಅವರ ದೇಹದ ಪರಿಸ್ಥಿತಿ ಕಂಡು ಬರುತ್ತದೆ ಇದಕ್ಕೆ ಕಾರಣ ನಾವು ಸೇವಿಸುವ ಆಹಾರ ಮತ್ತು ಮಾಲಿನ್ಯಕರವಾದ ಗಾಳಿ. ಮುಖ್ಯವಾಗಿ ಮಕ್ಕಳು ಊಟವನ್ನು ಮಾಡಲು ತುಂಬಾನೇ ಹಠ ಮಾಡುತ್ತಾರೆ. ಇದರಿಂದ ಚಿಕ್ಕ ಮಕ್ಕಳಲ್ಲಿ ಶೀತ ಜ್ವರ ಕೆಮ್ಮು ಕಫದ ಸಮಸ್ಯೆಗಳು ಶುರು ಆಗುತ್ತವೆ. ಇದು ಹೆಚ್ಚಾಗಿ ಐದು ವರ್ಷದ ಮಕ್ಕಳಲ್ಲಿ ಸಾಮಾನ್ಯವಾಗಿ ಇಂಥಹ ಸಮಸ್ಯೆಗಳು ಪದೇ ಪದೇ ಕಂಡು ಬರುವುದು ಉಂಟು. ಅದರಲ್ಲೂ ಈಗಿನ ಸಮಯದಲ್ಲಿ ಮಕ್ಕಳಿಗೆ ಏನಾದ್ರೂ ಆದರೆ ತಕ್ಷಣವೇ ಆಸ್ಪತ್ರೆಗೆ ಹೋಗಲು ತುಂಬಾನೇ ಕಷ್ಟ ಕೂಡ ಆಗುತ್ತಿದೆ ಅಲ್ವಾ. ಹಾಗಾದ್ರೆ ನಿಮ್ಮ ಮಕ್ಕಳಿಗೆ ಏನಾದ್ರೂ ಶೀತ ಕೆಮ್ಮು ಕಫ ಸಮಸ್ಯೆ ಕಾಡುತ್ತಿದ್ದರೆ ಇಂದಿನ ಲೇಖನದಲ್ಲಿ ಅದಕ್ಕೆ ಹಲವು ಸರಳವಾದ ಸೂಪರ್ ಹೋಂ ರೆಮೆಡಿ ತಿಳಿಸಿಕೊಡುತ್ತೇವೆ ಬನ್ನಿ.

ಮಕ್ಕಳು ಸರಿಯಾಗಿ ಆಹಾರವನ್ನು ತಿನ್ನುವುದಿಲ್ಲ, ಡ್ರೈ ಫ್ರೂಟ್ಸ್ ತಿನ್ನುವುದಿಲ್ಲ ಪೋಷಕಾಂಶಯುಕ್ತ ಆಹಾರವನ್ನು ಸೇವನೆ ಮಾಡುವುದಿಲ್ಲ. ಇದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಶಕ್ತಿ ಇಲ್ಲದಂತೆ ಆಗಿ ಅವರು ಶೀತ ನೆಗಡಿ ಕೆಮ್ಮು ಸಮಸ್ಯೆಗೆ ತುತ್ತಾಗುತ್ತಾರೆ. ಅಂಥಹ ಸಮಯದಲ್ಲಿ ನಾವು ಮನೆಯಲ್ಲಿ ಏನು ಮಾಡಬೇಕು ಅಂತ ಸುಲಭವಾದ ಮಾರ್ಗವನ್ನು ತಿಳಿಯೋಣ. ದೊಡ್ಡ ಪತ್ರೆ ಅಥವಾ ಸಾಂಬಾರ ನಟ್ಟಿ. ಇದರಿಂದ ಕೆಲವು ಮನೆಮದ್ದು ಹೇಗೆ ತಯಾರು ಮಾಡಿ ಮಕ್ಕಳನ್ನು ಜ್ವರ ಕಫ ಮತ್ತು ನೆಗಡಿಯಿಂದ ದೂರ ಇಡುವುದು ಹೇಗೆ ಅಂತ ನೋಡೋಣ. ಮೊದಲಿಗೆ ಈ ದೊಡ್ಡ ಪತ್ರೆ ಅಥವಾ ಸಾಂಬಾರ ನಟ್ಟಿ ಅನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆ ಮೇಲೆ ಹಾಕಿ ಅದನ್ನು ಒಣಗಿಸಿ ನಂತ್ರ ಒಂದು ತವೆಯ ಮೇಲೆ ಆ ಎಲೆಯನ್ನು ಚೆನ್ನಾಗಿ ಹುರಿದುಕೊಳ್ಳಿ ಅದರ ಬಣ್ಣ ಬದಲಾಗುವವರೆಗೆ. ಈ ಹುರಿದ ಎಲೆಯನ್ನು ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸಿ ಮಲಗಿಸುವಾಗ ಅದರ ತಲೆಯ ನೆತ್ತಿಯ ಭಾಗದಲ್ಲಿ ಇಟ್ಟು ಮೇಲೆ ಟೋಪಿಯನ್ನು ಕಟ್ಟಿ ಮಲಗಿಸಬೇಕು. ಇದರಿಂದ ಮಕ್ಕಳಲ್ಲಿ ಉಂಟಾದ ಶೀತ ಕ್ರಮೇಣ ಕಡಿಮೆ ಆಗುತ್ತದೆ. ಇನ್ನೂ ಎರಡನೆಯದು ಮಕ್ಕಳಿಗೆ ಕೆಮ್ಮು ಕಫ ಆದಾಗ ಈ ದೊಡ್ಡ ಪತ್ರೆ ಅನ್ನು ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ಅದರ ರಸವನ್ನು ಹಿಂಡಿ ಮಕ್ಕಳು ಎದೆಗೆ ತಲೆಗೆ ಮೂಗಿನ ಕೆಳಗೆ ಹಚ್ಚಬೇಕು. ಇದರಿಂದ ಕಫ ಕಂಪ್ಲೀಟ್ ಆಗಿ ಕರಗಿ ಹೋಗುತ್ತದೆ ಇನ್ನೂ ಮಕ್ಕಳ ಮೂಗು ಕಟ್ಟಿದರೆ ಅದು ಕೂಡ ಸಲೀಸಾಗಿ ಸಡಿಲವಾಗುತ್ತದೆ.

ಮೂರನೆಯದು ಮನೆಮದ್ದು ಮಕ್ಕಳಿಗೆ ಶೀತ ಗಂಟಲು ನೋವು ಕಫ ಆದಾಗ ಮಾಡಬೇಕಾದ ಮನೆಮದ್ದು. ಮೊದಲಿಗೆ ಈ ಸಾಂಬಾರ್ ನಿಟ್ಟಿ ತೆಗೆದುಕೊಂಡು ಹುರಿದು ಅದರ ರಸವನ್ನು ತೆಗೆದುಕೊಳ್ಳಬೇಕು ಆ ರಸಕ್ಕೆ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತ್ರ ಈ ರಸವನ್ನು ಮಕ್ಕಳಿಗೆ ದಿನದಲ್ಲಿ ಎರಡು ಬಾರಿ ಕುಡಿಸಬೇಕು. ಇದರಿಂದ ಮಕ್ಕಳಿಗೆ ಉಂಟಾದ ಕಫವು
ಮೋಷನ್ ಮೂಲಕ ಹೊರಗೆ ಹೋಗುತ್ತದೆ. ಇನ್ನೂ ನಾಲ್ಕನೆಯದು ಸಲಹೆ ಏನೆಂದರೆ ಈ ದೊಡ್ಡ ಪತ್ರೆ ತೆಗೆದುಕೊಂಡು ಅದನ್ನು ಕೈಯಿಂದ ಕಿವುಚಿ ಮಕ್ಕಳು ಮಲಗಿದಾಗ ಅವರ ಪಕ್ಕದಲ್ಲಿ ಇಟ್ಟರೆ ಇದರ ವಾಸನೆಗೆ ಅವರ ಕಫ ಕರಗುತ್ತದೆ ಜೊತೆಗೆ ಚೆನ್ನಾಗಿ ನಿದ್ರೆ ಕೂಡ ಬರುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *