ನಮಸ್ತೆ ಪ್ರಿಯ ಓದುಗರೇ, ನಮ್ಮ ದೇಶದಲ್ಲಿ ಹಲವಾರು ಬಗೆಯ ಆಹಾರ ಧಾನ್ಯಗಳನ್ನು ಬೆಳೆಯುತ್ತಾರೆ ಆದ್ರೆ ಇಂದಿನ ಲೇಖನದಲ್ಲಿ ನಾವು ನಿಮಗೆ ವಿದೇಶಿ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ನಿಮಗೆ ಆ ಬೆಳೆ ಯಾವುದು ಅಂತ ತಿಳಿಯಲು ಕುತೂಹಲ ಇದ್ದರೆ ನಮ್ಮ ಲೇಖನವನ್ನು ಕೊನೆವರೆಗೂ ಓದಿ. ರೈತನೇ ನಮ್ಮ ದೇಶದ ಬೆನ್ನೆಲುಬು ಅಂತ ನಾವು ಕರೆಯುತ್ತೇವೆ. ಆತನು ದುಡಿಯದೆ ಇದ್ದರೆ ನಾವು ಈ ಭೂಮಿಯ ಮೇಲೆ ಇರುತ್ತಿರಲಿಲ್ಲ. ಆತನೇ ಈ ಭೂಮಿಯ ಒಡೆಯ ಅಂತ ಹೇಳಿದರೆ ತಪ್ಪಾಗಲಾರದು. ನಾವು ಹೊಲದಲ್ಲಿ ಏನು ಬೆಳೆಯನ್ನು ಬೆಳೆದರು ಕೂಡ ಒಂದು ಬಾರಿ ಫಲವನ್ನು ಸಿಕ್ಕರೆ ಇನ್ನೊಂದು ಬಾರಿ ಫಲ ಸಿಗುವುದಿಲ್ಲ. ಹೀಗಾಗಿ ರೈತನು ತುಂಬಾನೇ ಸಾಲವನ್ನು ಮಾಡಿ ಬೆಳೆಯನ್ನು ಬೆಳೆದು ಜೀವನವನ್ನು ಸಾಗಿಸುತ್ತಿದ್ದಾನೆ. ಆದ್ರೆ ಬೆಳೆ ಸರಿಯಾಗಿ ಬಂದಿಲ್ಲ ನಾಶ ಆಗುತ್ತಿದೆ ಅಂತ ನಾವು ಸುಮ್ಮನೆ ಕುಳಿತುಕೊಳ್ಳಲು ಆಗುತ್ತದೆಯೇ. ಜೀವನ ಜೀವನವನ್ನು ಸಾಗಿಸಬೇಕು. ಅದಕ್ಕಾಗಿ ನಾವು ಬೇರೆ ಬೇರೆ ಬಗೆಯ ಆಹಾರ ಧಾನ್ಯಗಳನ್ನು ಬೆಳೆದು ಆದಾಯದ ಮೂಲವನ್ನು ಕಂಡು ಕೊಳ್ಳಬೇಕು.
ಹಾಗಾಗಿ ಇಂದಿನ ಲೇಖನದಲ್ಲಿ ಒಂದು ವಿಶೇಷವಾದ ತರಕಾರಿ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಬನ್ನಿ. ಹಾಗೆಯೇ ಈ ತರಕಾರಿ ಬೆಳೆದು ನೀವು ಉತ್ತಮ ಮಟ್ಟಕ್ಕೆ ಬೆಳೆಯಬಹುದು. ಯಾವುದೇ ಸಾಲದ ಅವಶ್ಯಕತೆ ಬೀಳುವುದಿಲ್ಲ. ಆ ಬೆಳೆಯ ಹೆಸರು ಬ್ರೋಕಲಿನ್ ಇದು ವಿಶೇಷವಾಗಿ ವಿದೇಶದಲ್ಲಿ ಬೆಳೆಯುವ ತರಕಾರಿ ಆಗಿದೆ. ಹಾಗೆಯೇ ಇದರ ಜಾತಿ ಹೂಕೋಸು. ಈ ಬೆಳೆಯಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ವಿಟಮಿನ್ ಪೋಲಿಕ ಆಸಿಡ್ ಜೀವಸತ್ವಗಳು ಇನ್ನಿತರ ಅಂಶವನ್ನು ಹೊಂದಿರುತ್ತದೆ. ಈ ಎಲ್ಲ ಅಂಶಗಳನ್ನು ಹೊಂದಿರುವ ಕಾರಣ ಇದು ದೇಹದಲ್ಲಿ ರಕ್ತ ಸಂಚಾರವನ್ನು ಸರಿಯಾಗಿ ಆಗುವಂತೆ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ಹೃದಯ ಆರೋಗ್ಯವನ್ನು ತುಂಬಾನೇ ಚೆನ್ನಾಗಿ ಕಾಪಾಡುತ್ತದೆ. ಅದಕ್ಕಾಗಿ ಈ ತರಕಾರಿಗೆ ತುಂಬಾನೇ ಬೆಲೆ ಇದೆ ಸ್ನೇಹಿತರೇ. ಈ ತರಕಾರಿ ಸೇವನೆ ಮಾಡುವುದರಿಂದ ನೀವು ಸಾಕಷ್ಟು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಜೊತೆಗೆ ನೀವು ಈ ತರಕಾರಿಯನ್ನು ಒಂದು ವ್ಯಾಪಾರವಾಗಿ ಬಳಕೆ ಮಾಡಿಕೊಂಡು ನೀವು ಹೆಚ್ಚಿನ ಆದಾಯವನ್ನು ಸಂಪಾದನೆ ಮಾಡಬಹುದು.
ಈ ತರಕಾರಿಯನ್ನು ನೀವು ಬೆಳೆಯಲು ಶುರು ಮಾಡಿದರೆ ನಿಮಗೆ ಇದು ಆದಷ್ಟು ಬೇಗನೆ ಫಲಿತಾಂಶ ನೀಡುತ್ತದೆ. ಇಡೀ ತುಂಬಾನೇ ಕಡಿಮೆ ಸಮಯದಲ್ಲಿ ಬೆಳೆಯುವ ಸಸ್ಯವಾಗಿದೆ. ಇದನ್ನು ಸಿಟಿ ಕಡೆಗೆ ತುಂಬಾನೇ ಹೆಚ್ಚಿನ ಬೆಲೆಗೆ ದೊರೆಯುತ್ತದೆ. ಇದರ ಬೆಲೆ ಸುಮಾರು 60-70 ರೂಪಾಯಿ ನಗರದಲ್ಲಿ ಆದರೆ ಪಟ್ಟಣದಲ್ಲಿ ಇದರ ಬೆಲೆ 30-40 ವರೆಗೆ ಸಿಗುತ್ತದೆ. ಇದರ ಇಳುವರಿ ಬಂದು 15-20 ಟನ್ ಗಳಷ್ಟು ಬಯಸಬಹುದು. ಆದರೆ ಇದು ಹೆಚ್ಚಾಗಿ ತೇವಾಂಶ ಇರುವ ಜಾಗದಲ್ಲಿ ಬೆಳೆಯುತ್ತದೆ. ಅಲ್ಲದೆ ಇದಕ್ಕೆ ಉಷ್ಣತೆ ಅಂದ್ರೆ ಆಗುವುದಿಲ್ಲ. ಇದರ ಬೆಳವಣಿಗೆ ಕುಂಠಿತ ಆಗುತ್ತದೆ. ಅಧಿಕ ಉಷ್ಣಾಂಶ ಅಂದ್ರೆ 30-40 ಡಿಗ್ರೀ ಸೆಲ್ಸಿಯಸ್ ನಷ್ಟು ಉಷ್ಣತೆ ಹೆಚ್ಚಾಗಿದ್ದರೆ ಈ ತರಕಾರಿ ಬೆಳೆಯುವುದಿಲ್ಲ. ಈ ಸಸ್ಯ ಹೆಚ್ಚಾಗಿ ಚಳಿಗಾಲದಲ್ಲಿ ನೀವು ಬೆಳೆದರೆ ಉತ್ತಮ. ಈ ತರಕಾರಿ ಬೆಳೆದು ನೀವು ಶ್ರೀಮಂತರು ಆಗಬಹುದು. ಇದು ತುಂಬಾನೇ ಕಡಿಮೆ ಸಮಯದಲ್ಲಿ ಬೆಳೆಯುತ್ತದೆ. ಇದರ ಜೊತೆಗೆ ನೀವು ಟನ್ ಟನ್ ಗಳಷ್ಟು ಈ ಬೆಳೆಯನ್ನು ಬೆಳೆದು ಶ್ರೀಮಂತರು ಆಗಬಹುದು. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಪ್ಲೀಸ್ ಶೇರ್ ಮಾಡಿ ಶುಭದಿನ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.