ಗುಪ್ತಾಂ-ಗದಲ್ಲಿ ತುರಿಕೆ ಆಗುತ್ತಿದೆ ಏನ್ ಮಾಡಬೇಕು ಆತ ಮುಜುಗರ ಆಗುತ್ತಿದ್ದರೆ ಈ ಎಲ್ಲ ಕೆಲಸಗಳನ್ನೂ ಮಾಡಿರಿ

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ. ಗುಪ್ತಾಂ-ಗ ಜಾಗದಲ್ಲಿ ತುರಿಕೆ ಆದ್ರೆ ಮನುಷ್ಯರಿಗೆ ತುಂಬಾನೇ ಮುಜುಗರ ಅಸಹ್ಯ ಹೇಳಿಕೊಳ್ಳಲು ಆಗದಷ್ಟು ಕೆಟ್ಟ ಇರ್ರಿಟೆಷನ್ ಆಗುತ್ತದೆ. ಕೆಲವೊಂದು ಬಾರಿ ಅನಿಯಂತ್ರಣವಾಗಿ ಜನರ ಮಧ್ಯೆ ಕೆಲಸ ಮಾಡುವ ಜಾಗದಲ್ಲಿ ಜನರ ಎದುರಿಗೆ ತುರಿಕೆ ಶುರು ಆಗುತ್ತದೆ. ಈ ತುರಿಕೆ ಸಮಸ್ಯೆ ಯಾಕೆ ಆಗುತ್ತದೆ. ಇದಕ್ಕೆ ಕಾರಣ ಆದರೂ ಏನು ಅಂತ ಎಲ್ಲರೂ ತಿಳಿದುಕೊಳ್ಳಬೇಕು. ಅದು ತುಂಬಾನೇ ಮುಖ್ಯವಾಗಿದೆ. ಈ ಸಮಸ್ಯೆ ಮುಖ್ಯವಾದ ಜಾಗದಲ್ಲಿ ಗಾಳಿ ಆಡದೇ ಇದ್ದರೆ ಅಥವಾ ಬ್ಯಾಕ್ಟೀರಿಯಾ ಅಥವಾ ಶಿಲೀಂದ್ರಗಳಿಂದ ಗುಪ್ತಾಂಗದಲ್ಲಿ ತುರಿಕೆ ಶುರು ಆಗುತ್ತದೆ. ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಲ್ಲದೆ ಪುರುಷರಲ್ಲಿ ತುಂಬಾನೇ ಎಡ ಬಿಡದಂತೆ ಸಮಸ್ಯೆ ಕಾಡುತ್ತದೆ. ಅಲ್ಲದೆ ಅವರಿಗೆ ಪ್ರೈವೇಟ್ ಭಾಗ ಯಾಕಾದರೂ ಇದೆ ಅನ್ನಿಸುವಷ್ಟು ತುರಿಕೆ ಆಗುತ್ತಿರುತ್ತದೆ. ಈ ಸಮಸ್ಯೆ ನಮ್ಮ ದೈನಂದಿನ ಜೀವನದಲ್ಲಿ ಭಾರಿ ಪರಿಣಾಮವನ್ನು ಬೀರುತ್ತದೆ. ಈ ಸಮಸ್ಯೆ ಹೇಗೆ ಬರುತ್ತದೆ ಅಂದ್ರೆ ನೀವು ವ್ಯಾಯಾಮ ಮಾಡಿದಾಗ ತುಂಬಾನೇ ಓಡಾಟ ಮಾಡಿದಾಗ ಕಷ್ಟದ ಕೆಲಸವನ್ನು ಮಾಡಿದಾಗ ಅಂದ್ರೆ ಒಟ್ಟಿನಲ್ಲಿ ಮೈ ಬಗ್ಗಿಸಿ ಕೆಲಸವನ್ನು ಮಾಡಿದಾಗ ಮತ್ತು ಮುಖ್ಯವಾಗಿ ಪುರುಷರು ಬಿಗಿಯಾದ ಬನಿಯಾನ್ ಮತ್ತು ಅಂಡರ್ ವೇರ್ ಹಾಕಿದಾಗ ಅಲ್ಲಿ ಗಾಳಿ ಆಡದೇ ತುರಿಕೆ ಶುರು ಆಗುತ್ತದೆ. ಅಲ್ಲದೆ ಇದು ನಿಮ್ಮ ತ್ವಚೆಯ ರಂಧ್ರಗಳು ತೆರೆದುಕೊಳ್ಳುವಂತೆ ಮಾಡಿ ಇದು ಬೆವರಿನ ಮೂಲಕ ಹೊರಗೆ ಹಾಕುವಂತೆ ಮಾಡುತ್ತದೆ.

ಹೀಗೆ ಇದು ಹೊರಗಡೆ ಹೋಗಲಿಲ್ಲ ಅಂದ್ರೆ ಅಲ್ಲಿ ತುರಿಕೆ ಶುರು ಆಗುತ್ತದೆ. ಗುಪ್ತಾಂಗದಲ್ಲಿ ಗಾಳಿ ಆಡದೇ ಅಲ್ಲಿ ಶಿಲೀಂಧ್ರಗಳು ಬೆಳೆದು ತುರಿಕೆ ಶುರು ಆಗಿ ಫಂಗಸ್ ಕೂಡ ಬೆಳೆಯಲು ಶುರು ಆಗುತ್ತದೆ. ಶ್ರಮ ವಹಿಸಿ ಕೆಲಸ ಮಾಡಿದರೆ ತ್ವಚೆಯ ರಂಧ್ರಗಳು ತೆರೆದು ಅದು ಬೆವರಿನ ಮೂಲಕ ಹೊರಗೆ ಹಾಕುತ್ತದೆ. ಇನ್ನೂ ಸಕ್ಕರೆ ಕಾಯಿಲೆ ಇರುವವರಿಗೆ ಈ ಸಮಸ್ಯೆ ಉಂಟಾದರೆ ಕಡಿಮೆ ಮಾಡಿಕೊಳ್ಳಲು ತುಂಬಾನೇ ಸಮಯ ಬೇಕಾಗುತ್ತದೆ ಕಾರಣ ಸಕ್ಕರೆ ಕಾಯಿಲೆ ಇರುವ ವ್ಯಕ್ತಿಯ ಬೆವರಿನಲ್ಲಿ ಸಕ್ಕರೆಯ ಅಂಶ ಇರುತ್ತದೆ ಇದು ಶಿಲೀಂದ್ರಗಳಿಗೆ ಆಹಾರವಾಗಿ ಪರಿಣಮಿಸಿ ಅವುಗಳು ಅಲ್ಲಿಯೇ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತವೆ. ಈ ತುರಿಕೆಗೆ ಪರಿಹಾರ ಏನು ಅಂತ ಹೇಳುವುದಾದರೆ ನೀವು ಶ್ರಮವುಳ್ಳ ಕೆಲಸವನ್ನು ಮನೆಗೆ ಬಂದು ಅಥವಾ ಆಫೀಸ್ ನಿಂದ ಮನೆಗೆ ಬಂದು ಸ್ನಾನವನ್ನು ಮಾಡಿ ದೇಹವನ್ನು ಚೆನ್ನಾಗಿ ಒರೆಸಿಕೊಂಡು ಒಣಗಿಸಬೇಕು. ನಂತ್ರ ಕಾಟನ್ ಬಟ್ಟೆಯನ್ನು ಧರಿಸಬೇಕು. ಅಂದ್ರೆ ಗಾಳಿ ಆಡುವ ಹಾಗೆ ಬಟ್ಟೆಯನ್ನು ಧರಿಸಬೇಕು ಹೆಚ್ಚಾಗಿ ಬಿಗಿಯಾದ ಬಟ್ಟೆಯನ್ನು ಧರಿಸಬಾರದು. ಇನ್ನೂ ನೀವು ಹೆಚ್ಚಾಗಿ ನೀರು ಕುಡಿಯಬೇಕು.

ಹಾಗೆಯೇ ನೀವು ಜಿಮ್ ವ್ಯಾಯಾಮ ವಾಕಿಂಗ್ ಅಥವಾ ಯಾವುದಾದರೂ ಕೆಲಸವನ್ನು ಮಾಡಿ ಧನಿದರೆ ನೀವು ನಿಮ್ಮ ಒಳಉಡುಪು ಅನ್ನು ಬದಲಾಯಿಸಬೇಕು. ಇನ್ನೂ ನೀವು ಬಳಕೆ ಮಾಡುವ ಒಳಉಡುಪುಗಳನ್ನು ಚೆನ್ನಾಗಿ ತೊಳೆದು ಅವುಗಳನ್ನು ಚೆನ್ನಾಗಿ ಒಣಗಿಸಿ ಉಪಯೋಗ ಮಾಡಬೇಕು. ಇನ್ನೂ ಮುಖ್ಯವಾಗಿ ಮಹಿಳೆಯರು ಋತುಚಕ್ರ ಆದಾಗ ದಿನದಲ್ಲಿ ಆರು ಗಂಟೆಗೆ ಒಳಉಡುಪು ಬದಲಾವಣೆ ಮಾಡಬೇಕು ತೇವಾಂಶ ಹೀರಿಕೊಳ್ಳುವ ಪೌಡರ್ ಅನ್ನು ಬಳಕೆ ಮಾಡಬಹುದು. ಇನ್ನೂ ರಾಸಾಯನಿಕಯುಕ್ತ ಸೋಪೂಗಳನ್ನು ಬಳಕೆ ಮಾಡಬಾರದು. ಇನ್ನೂ ವಾರದಲ್ಲಿ ಎರಡು ಬಾರಿ ಎಣ್ಣೆಯನ್ನು ಮೈ ಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಸ್ನಾನವನ್ನು ಮಾಡಿ. ಇದರಿಂದ ನಿಮ್ಮ ಗುಪ್ತಾಂ-ಗದ ತುರಿಕೆ ಕ್ರಮೇಣ ಕಡಿಮೆ ಆಗುತ್ತದೆ. ಇಲ್ಲವಾದರೆ ಒಂದು ಬಾರಿ ವೈದ್ಯರ ಸಲಹೆ ಪಡೆಯಿರಿ.
ಶುಭದಿನ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *