ನಮಸ್ತೆ ಪ್ರಿಯ ಓದುಗರೇ, ಎನರ್ಜಿ ಅಂದ್ರೆ ಶಕ್ತಿ ಮನುಷ್ಯನ ದೇಹದಲ್ಲಿ ಶಕ್ತಿ ಇದ್ದರೆ ಆತನು ಎಂಥಹ ಕಠಿಣವಾದ ಕೆಲಸವನ್ನು ಕೂಡ ಮಾಡಿ ಮುಗಿಸಬಲ್ಲನು. ಆದ್ರೆ ಅದೇ ಶಕ್ತಿಹೀನ ಮನುಷ್ಯ ಒಂದು ಚಿಕ್ಕ ಕಡ್ಡಿ ಗಿಡವನ್ನು ಕೂಡ ಎತ್ತಿ ಇಡುವುದಿಲ್ಲ. ಹಾಗಾದ್ರೆ ಶಕ್ತಿ ಬರಲು ಇಂದಿನ ಲೇಖನದಲ್ಲಿ ಒಂದು ಅದ್ಭುತವಾದ ಏನರ್ಜಿಟಿಕ್ ಡ್ರಿಂಕ್ ಬಗ್ಗೆ ತಿಳಿಸಿಕೊಡುತ್ತೇವೆ ಬನ್ನಿ. ನಾವು ಇಂದಿನ ಲೇಖನದಲ್ಲಿ ತಿಳಿಸುವ ಈ ಡ್ರಿಂಕ್ ನಿಂಡ ನಿಮಗೆ ತುಂಬಾ ಆರೋಗ್ಯಕರ ಲಾಭಗಳು ಸಿಗುತ್ತವೆ ಅಂದ್ರೆ ರಕ್ತ ಹೀನತೆ ಸಮಸ್ಯೆ, ಶಕ್ತಿ ಕುಂಠಿತ ಆಗುವ ಸಮಸ್ಯೆ ಮೈ ಕೈ ನೋವು ಈ ಎಲ್ಲ ಸಮಸ್ಯೆಯನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ ಈ ಡ್ರಿಂಕ್ ದೇಹ ತುಂಬಾನೇ ಸದೃಢವಾಗಿ ಬೆಳೆಯುವಲ್ಲಿ ಸಹಾಯ ಮಾಡುತ್ತದೆ ಈ ಡ್ರಿಂಕ್. ಅಷ್ಟೇ ಅಲ್ಲದೇ ನಿಮ್ಮ ದೇಹವನ್ನು ರೋಗ ನಿರೋಧಕ ಶಕ್ತಿ ಇಂದ ತುಂಬಿ ತುಳುಕುವಂತೆ ಮಾಡುತ್ತದೆ. ಕ್ಯಾಲ್ಸಿಯಂ ಹೆಚ್ಚಾಗಿ ತುಂಬಿರುವ ಆಹಾರ ಪದಾರ್ಥ ಅಂತ ಹೇಳಿದರೆ ಈ ಮಾತು ಸುಳ್ಳಾಗದು. ಏಕೆಂದರೆ ವಯಸ್ಸಾದವರಲ್ಲಿ ಕಾಣುವ ಪಾದಗಳ ನೋವು ಕೀಲು ನೋವು ಮೈ ಕೈ ನೋವು ಸೊಂಟ ನೋವು ಈ ಎಲ್ಲ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಈ ಡ್ರಿಂಕ್.
ಮಾನವನ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕಂಡರೆ ಹಲ್ಲುಗಳ ಸಮಸ್ಯೆ ಕಣ್ಣಿನ ಸುತ್ತ ಕಪ್ಪು ಆಗುವುದು ಮುಖದ ಮೇಲೆ ಗುಳ್ಳೆಗಳು ಆಗುವುದು ಕೂದಲು ತುಂಬಾನೇ ಉದುರುವುದು ಹೀಗೆ ಹಲವಾರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಮನಸ್ಸಿನ ಮೇಲೆ ನಿಯಂತ್ರಣ ಇರುವುದಿಲ್ಲ ಜೊತೆಗೆ ಏಕಾಗ್ರತೆ ಅನ್ನುವುದು ಕೂಡ ಕಡಿಮೆ ಆಗುತ್ತದೆ. ಇಷ್ಟೇ ಅಲ್ಲದೇ ದೇಹವು ಬಹುಬೇಗನೆ ದಣಿವು ಆಗುತ್ತದೆ. ಸ್ವಲ್ಪ ನಡೆದರೂ ಕೂಡ ತುಂಬಾನೇ ಸುಸ್ತು ಆಯಾಸ ಆಗುವುದು ದೇಹದಲ್ಲಿ ಶಕ್ತಿ ಇಲ್ಲದಂತೆ ಆಗುವುದು ಹೀಗೆ ತುಂಬಾನೇ ತ್ರಾಸ ಆಗುತ್ತಾ ಇರುತ್ತದೆ ಈ ಕ್ಯಾಲ್ಸಿಯಂ ಕೊರತೆ ಇಂದ. ಈ ಸಮಸ್ಯೆ ಪರಿಹಾರ ಇಲ್ಲವೇ ಅಂತ ನೀವು ಪ್ರಶ್ನಿಸಬಹುದು. ಖಂಡಿತವಾಗಿ ಇದಕ್ಕೆ ಪರಿಹಾರ ಇದೆ ಸ್ನೇಹಿತರೇ ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ನೀವು ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಾಗಾದ್ರೆ ಬನ್ನಿ ಈ ಡ್ರಿಂಕ್ ತಯಾರಿಸಲು ಬೇಕಾದ ಸಾಮಾನುಗಳು ನೋಡೋಣ.
ಮೊದಲಿಗೆ ಗಸಗಸೆ ತುಪ್ಪ, ಹಾಲು. ಈ ಕೇವಲ ಮೂರು ಪದಾರ್ಥಗಳು ಸಾಕು ಈ ಡ್ರಿಂಕ್ ತಯಾರಿಸಲು ಸ್ನೇಹಿತರೇ. ಮೊದಲಿಗೆ ಒಂದು ಪಾತ್ರೆಯನ್ನು ಕಾಯಿಸಿ ಕೊಳ್ಳಿ. ಅದರಲ್ಲಿ ತುಪ್ಪವನ್ನು ಹಾಕಿ ಗಸಗಸೆ ಹುರಿದುಕೊಳ್ಳಿ. ನಂತ್ರ ಅದರಲ್ಲಿ ಒಂದು ಲೋಟ ಹಾಲು ಹಾಕಿ ಕುದಿಸಿ. ಸ್ವಲ್ಪ ಸಕ್ಕರೆ ಅಥವಾ ಜೇನುತುಪ್ಪವನ್ನು ಹಾಕಿ ನಿತ್ಯವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ಇದರಿಂದ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಆಗದಂತೆ ತಡೆಯುತ್ತದೆ. ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಮೂಳೆಗಳು ಸ್ನಾಯುಗಳು ತುಂಬಾನೇ ಬಲಗೊಳ್ಳುತ್ತವೆ. ಇದು ತುಂಬಾನೇ ಅದ್ಭುತವಾದ ಡ್ರಿಂಕ್ ನೀವು ಮನೆಯಲ್ಲಿ ಮಾಡಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಶುಭದಿನ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.