ಒಣಕೊಬ್ಬರಿ ಸೇವನೆ ಇಂದ ನಿಮ್ಮ ಮೂಳೆಗಳು ಸ್ನಾಯುಗಳು ವಜ್ರದಂತೆ ಬಲಶಾಲಿ ಆಗುತ್ತವೆ

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ಒಣ ಕೊಬ್ಬರಿ ಇದು ನೋಡಲು ಗಟ್ಟಿಯಾಗಿ ಜೊತೆಗೆ ತಿನ್ನಲು ಕೂಡ ತುಂಬಾನೇ ಕಠಿಣವಾಗಿ ಇರುತ್ತದೆ. ಹಸಿ ಕೊಬ್ಬರಿ ಮತ್ತು ಒಣ ಕೊಬ್ಬರಿ ಅಂತ ಎರಡು ವಿಧದಲ್ಲಿ ಇದು ಸಿಗುತ್ತದೆ. ಈ ಒಣ ಕೊಬ್ಬರಿ ಇಂದ ಹಲವಾರು ಅಡುಗೆ ಪದಾರ್ಥಗಳನ್ನು ಮಾಡುತ್ತೇವೆ. ಅಲ್ಲದೆ ಇದನ್ನು ಪೂಜೆ ಹವನಗಳಲ್ಲಿ ತುಂಬಾನೇ ಬಳಕೆ ಮಾಡುತ್ತಾರೆ. ಹೌದು ಸ್ನೇಹಿತರೇ ಇದು ಅಡುಗೆಗೆ ಮಾತ್ರವಲ್ಲದೆ ಪೂಜೆಗಳಿಗೆ ಮಾತ್ರವಲ್ಲದೆ ಇದು ಆರೋಗ್ಯಕ್ಕೆ ತುಂಬಾನೆ ಲಾಭದಾಯಕ ಆಗಿದೆ. ಜೊತೆಗೆ ಮಾನವನ ಆರೋಗ್ಯವನ್ನು ವೃದ್ಧಿಸುತ್ತದೆ. ಒಣ ಕೊಬ್ಬರಿಯ ಆರೋಗ್ಯಕರ ಲಾಭದಾಯಕವನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಒಣ ಕೊಬ್ಬರಿ ತಿನ್ನಲು ಕಷ್ಟ ಅಂತ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಇದನ್ನು ಸರಿಯಾದ ಸಮಯಕ್ಕೆ ಸೇವನೆ ಮಾಡಿದರೆ ನೀವು ಊಹಿಸಲಾರದಷ್ಟು ಉಪಯೋಗವನ್ನು ನೀವು ಪಡೆಯುತ್ತೀರಿ. ದೇವತಾ ವೃಕ್ಷ ಕಲ್ಪವೃಕ್ಷ ಅಂತ ಕರೆಸಿಕೊಳ್ಳುವ ಮತ್ತು ಮತ್ತು ಇದರಿಂದ ದೊರೆಯುವ ತೆಂಗಿನ ಕಾಯಿ ಒಣಕೊಬ್ಬರಿ ಸೇವನೆ ಅತ್ಯಮೂಲ್ಯ. ಈ ಗಿಡದ ಪ್ರತಿಯೊಂದು ಭಾಗವಾದ ಕಾಯಿ ಎಲೆ ಗಿಡ ಕಾಂಡ ಹೂವು ಹಣ್ಣು ತುಂಬಾನೇ ಉಪಯೋಗಕಾರಿ ಆಗಿದೆ. ಇದರ ವಿವರಣೆ ಮಾಡಲು ಹೋದರೆ ಒಂದು ದಿನ ಕೂಡ ಸಾಲದು. ಅಷ್ಟೊಂದು ಆರೋಗ್ಯಕರ ಮಹತ್ವವಾದ ಗುಣಗಳನ್ನು ಹೊಂದಿದೆ.

ಒಣಕೊಬ್ಬರಿ ಅತಿ ಉತ್ತಮ ಅಂತ ಹೇಳುವುದಾದರೆ ಮಹಿಳೆಯರಲ್ಲಿ ಬಂಜೆತನ ಸಮಸ್ಯೆ ಮಾತ್ರ ಕಾಣುವುದಲ್ಲದೆ ಪುರುಷರಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಅಂಥಹ ದೊಡ್ಡ ಸಮಸ್ಯೆಯನ್ನು ನೀಗಿಸುವಲ್ಲಿ ಈ ಒಣ ಕೊಬ್ಬರಿ ತುಂಬಾನೇ ಸಹಾಯ ಮಾಡುತ್ತದೆ. ಜೊತೆಗೆ ಈ ಒಣ ಕೊಬ್ಬರಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳು ಸ್ನಾಯುಗಳು ತುಂಬಾನೇ ಬಲಗೊಳ್ಳುತ್ತದೆ. ಈಗಿನ ಆಧುನಿಕ ಕಾಲದಲ್ಲಿ ಜನರು ಪಾಸ್ಟ್ ಫುಡ್ ಮತ್ತೆ ಜಂಕ್ ಫುಡ್ ಇನ್ನಿತರ ಎಣ್ಣೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ ಜೊತೆಗೆ ಅವರು ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವುದಿಲ್ಲ ಮರೆತು ಹೋಗಿದ್ದಾರೆ ಅಂತ ಹೇಳಿದರೆ ತಪ್ಪಾಗಲಾರದು. ಈ ಕಾರಣದಿಂದ 35-40 ವರ್ಷ ದಾಟುವವರೆಗೆ ಅವರು ಕೀಳು ನೋವು ಮೈ ಕೈ ನೋವು ಸ್ನಾಯುಗಳು ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದ ಜನರು ಆಸ್ಪತ್ರೆ ಸುತ್ತ ಸುತ್ತುತ್ತಾ ದುಡ್ಡನ್ನು ಖರ್ಚು ಮಾಡುತ್ತಾ ಜೊತೆಗೆ ಸಮಯವನ್ನು ಮತ್ತು ಖರ್ಚು ಅನ್ನು ಕೂಡ ವ್ಯರ್ಥ ಮಾಡುತ್ತಾರೆ. ಆದರೆ ಇದರಿಂದ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ.

ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ಇಟ್ಟುಕೊಳ್ಳಬೇಕು ಅಂದ್ರೆ ನಾವು ನಮ್ಮ ಆಹಾರ ಕ್ರಮದ ಮೇಲೆ ನಾವು ಸೇವಿಸುವ ಆಹಾರದ ತುಂಬಾನೇ ಪ್ರಜ್ಞೆ ಕಾಳಜಿ ಇರಬೇಕು. ಈ ಕೈ ಕಾಲುಗಳು ನೋವು ಬರಲು ಕಾರಣ ಮನುಷ್ಯನಲ್ಲಿ ಕ್ಯಾಲ್ಸಿಯಂ ಕೊರತೆ. ಕ್ಯಾಲ್ಸಿಯಂ ಕೊರತೆ ಉಂಟಾದರೆ ಮನುಷ್ಯನು ಮನುಷ್ಯನ ಸ್ನಾಯುಗಳು ಕುಂಠಿತಗೊಳ್ಳುತ್ತದೆ. ಇದಕ್ಕೆ ನಾವು ಪರಿಹಾರ ಆದರೂ ಏನು ಮಾಡಬೇಕು. ನಿಯಮಿತವಾಗಿ ವ್ಯಾಯಾಮವನ್ನು ಮಾಡುವುದರಿಂದ ಈ ಸಮಸ್ಯೆಯಿಂದ ಹೊರಗೆ ಬರಬಹುದು.
ಅಲ್ಲದೆ ಅಧಿಕವಾದ ಕ್ಯಾಲ್ಸಿಯಂ ಅಂಶ ಇರುವ ಒಣ ಕೊಬ್ಬರಿ ಸೇವನೆ ಮಾಡುವುದರಿಂದ ರಕ್ತ ಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಜೊತೆಗೆ ಮೂಳೆಗಳನ್ನು ಬಲಗೊಳಿಸುತ್ತದೆ. ಮೂಳೆಗಳಲ್ಲಿ ಕಟ್ ಕಟ್ ಅಂತ ಶಬ್ದ ಬಂದ್ರೆ ನೀವು ನಿತ್ಯವೂ ಒಣಕೊಬ್ಬರಿ ಸೇವನೆ ಮಾಡಿ. ಇದರಿಂದ ಮೂಳೆ ಸವೆತ ಮೂಳೆಗಳ ಊದಿಕೊಳ್ಳುವುದು ಇವೆಲ್ಲವನ್ನೂ ಕಡಿಮೆ ಮಾಡುತ್ತದೆ. ಹಾಗಾದ್ರೆ ಇದನ್ನು ಹೇಗೆ ಸೇವಿಸಬೇಕು. ಅಂತ ನೋಡೋಣ. ಎರಡು ವಿಧದಲ್ಲಿ ಸೇವನೆ ಮಾಡಬಹುದು. 50ಗ್ರಾಂ ಒಣಕೊಬ್ಬರಿ ಸೇವಿಸಬೇಕು. ಇಲ್ಲವಾದರೆ ಒಣಕೊಬ್ಬರಿ ಪುಡಿ ಮಾಡಿ ಅದರಲ್ಲಿ ಹಾಲು ಹಾಕಿ ಜೇನುತುಪ್ಪ ಹಾಕಿ ಮಧ್ಯಾಹ್ನ ಊಟವನ್ನು ಮಾಡಿದ ನಂತರ ಸೇವಿಸಿ. ಇದು ಜೀರ್ಣಕ್ರಿಯೆ ಸರಿಯಾಗಿ ಆಗುವಂತೆ ಸಹಾಯ ಮಾಡುತ್ತದೆ ಶುಭದಿನ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *