ಅಮೃತಬಳ್ಳಿಯಿಂದ ಲಿವರ್ ಫೇಲಾಗುತ್ತಾ? ಇದರ ಬಗ್ಗೆ ನಿಜಕ್ಕೂ ಇರುವ ಸಂಗತಿ ತಿಳಿಯಿರಿ

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ಅಮೃತ ಬಳ್ಳಿ ಹೆಸರೇ ಸೂಚಿಸುವಂತೆ ಈ ಬಳ್ಳಿಯು ಅಮೃತಕ್ಕೆ ಸಮಾನ ಅಂತ ಹೇಳಲಾಗುತ್ತದೆ. ಈ ಅಮೃತ ಬಳ್ಳಿಯ ಬಗ್ಗೆ ನಾವು ಊಹಿಸಿ ಹೇಳಲು ಸಾಧ್ಯವಾಗುವುದಿಲ್ಲ. ಇದರಲ್ಲಿ ನಿಜಕ್ಕೂ ಆರೋಗ್ಯವನ್ನು ಸುಧಾರಿಸುವ ಅತ್ಯದ್ಭುತವಾದ ಗುಣಶಕ್ತಿಯನ್ನು ಹೊಂದಿದೆ. ಇಂದಿನ ಲೇಖನದಲ್ಲಿ ತಿಳಿಸುವ ಮಾಹಿತಿ ಏನೆಂದರೆ ಅಮೃತ ಬಳ್ಳಿಯನ್ನು ಸೇವನೆ ಮಾಡುವುದರಿಂದ ಲಿವರ್ ಫೇಲಾಗುತ್ತಾ ಎಂಬ ಮಾತು ಕೇಳಿ ಬರುತ್ತದೆ. ಹೌದು ಸ್ನೇಹಿತರೇ ಈ ಮಾತು ನಿಜಕ್ಕೂ ಸುಳ್ಳಿನ ಮಾತು. ಆದರೆ ಈ ಅಮೃತ ಬಳ್ಳಿಯನ್ನು ಯಾವಾಗ ಯಾವ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಅನ್ನುವ ಮಾಹಿತಿಯನ್ನು ಚೆನ್ನಾಗಿ ತಿಳಿದುಕೊಂಡರೆ ಮಾತ್ರ ಈ ಅಮೃತ ಬಳ್ಳಿ ಸೇವನೆ ಇಂದ ಯಾವುದೇ ಅದ್ದ ಪರಿಣಾಮಗಳೂ ಬೀರುವುದಿಲ್ಲ. ಈಗಾಗಲೇ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಅಮೃತ ಬಳ್ಳಿ ಸೇವನೆ ಮಾಡುವುದರಿಂದ ಲಿವರ್ ಹಾಳಾಗುತ್ತದೆ ಅಂತ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು. ಇದು ಆಯುರ್ವೇದಿಕ್ ಪದ್ಧತಿಯಲ್ಲಿ ಸುಳ್ಳು ಇದರಿಂದ ಅಡ್ಡ ಪರಿಣಾಮಗಳೂ ಇವೆ ಅಂತ ವಾದ ವಿವಾದಗಳನ್ನು ಸೃಷ್ಟಿಸಲಾಗಿದೆ. ಆದ್ರೆ ಇಂದಿನ ಲೇಖನದಲ್ಲಿ ನಾವು ಈ ವಿಷಯದ ಬಗ್ಗೆ ಇರುವ ಗೊಂದಲವನ್ನು ಸಂಪೂರ್ಣವಾಗಿ ದೂರ ಮಾಡೋಣ.

ಮೊದಲಿಗೆ ಯಾವ ರೀತಿಯ ಅಮೃತ ಬಳ್ಳಿ ಸೇವನೆ ಮಾಡಬೇಕು. ಅಂತ ಗೊತ್ತಿರುವುದಿಲ್ಲ. ಈ ಅಮೃತ ಬಳ್ಳಿಯಲ್ಲಿ ಎರಡು ವಿಧಗಳಿವೆ. ಸಾಮಾನ್ಯವಾಗಿ ವೈದ್ಯರು ಇದನ್ನು ಗುರುತಿಸುತ್ತಾರೆ ಆದ್ರೆ ಸಾಮಾನ್ಯ ಜನರು ಗುರುತಿಸಲು ಸಾಧ್ಯ ಆಗುವುದಿಲ್ಲ. ಆದ್ರೆ ಗೊತ್ತಿಲ್ಲದೇ ಜನರು ಅಮೃತ ಬಳ್ಳಿ ಯ ಬೇರೆ ವಿಧದ ಜಾತಿಯ ಬಳ್ಳಿಯನ್ನು ಕಷಾಯವಾಗಿ ಸೇವನೆ ಮಾಡಿದರೆ ಲಿವರ್ ಮೇಲೆ ಪರಿಣಾಮ ಬೀರುತ್ತದೆ. ಟಿನೋಸ್ಪೊರಾ ಕಾಲೋಪೋರ್ನಿಯ ಇದು ವೈಜ್ಞಾನಿಕ ಅಮೃತ ಬಳ್ಳಿಯ ಹೆಸರು ಇದನ್ನು ಸೇವನೆ ಮಾಡಬೇಕು ಹೊರತು ಇದೆ ರೀತಿಯ ಇರುವ ಇದೆ ರೀತಿ ಕಾಣುವ ಟಿನೋಸ್ಪೊರಾ ಅಮೃತ ಬಳ್ಳಿ ಅಲ್ಲ. ಇದನ್ನು ಸೇವನೆ ಮಾಡಬಾರದು. ಲಿವರ್ ಗೆ ಸಂಭಂದ ಪಟ್ಟ ಕಾಯಿಲೆಗಳು ಮತ್ತು ಜಾಂಡೀಸ್ ಇನ್ನಿತರ ರೋಗಗಳಿಗೆ ಮದ್ದು. ಹಾಗಾಗಿ ಅಮೃತ್ ಬಳ್ಳಿಯ ಸೇವನೆ ಮಾಡುವುದು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ ಅಮೃತ ಬಳ್ಳಿಯಿಂದ ಯಾವುದೇ ರೀತಿಯ ಲಿವರ್ ಹಾಳಾಗುವುದಿಲ್ಲ. ಮೊದಲಿನ ಕಾಲದಲ್ಲಿ ಜನರು ಏನೇ ರೋಗಗಳು ಬಂದರು ಕೂಡ ನೀವು ಯಾವ ಕಷಾಯವನ್ನು ಕುಡಿಯುತ್ತೀರಿ ಅಂತ ಮೊದಲಿನ ಕಾಲದ ಜನರಿಗೆ ಕೇಳಿದರೆ ಅವರ ಉತ್ತರ ಅಮೃತ ಬಳ್ಳಿಯ ಕಷಾಯದ ಸೇವನೆ ಅನ್ನುತ್ತಿದ್ದರು.

ಆದರೆ ಇದರಲ್ಲಿ ಇದರ ಬಗ್ಗೆ ಗೊತ್ತಿಲ್ಲದವರು ಮಿತಿಮೀರಿ ಸೇವನೆ ಮಾಡುವುದರಿಂದ 100% ರಲ್ಲಿ 5% ಜನರಿಗೆ ಇದರಿಂದ ಸಮಸ್ಯೆ ಆಗಿರಬಹುದು ಆದರೆ ಇದು ನಿಜಕ್ಕೂ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಮಾಹಿತಿ ನಿಜಕ್ಕೂ ಸುಳ್ಳು. ಆದ್ರೆ ಇದರ ನಿಜವಾದ ಸೇವನೆಯ ಪ್ರಮಾಣವನ್ನು ನಾವು ತಿಳಿದುಕೊಂಡಿರಬೇಕು. ಅತಿಯಾದರೆ ಅಮೃತವೂ ವಿಷವೇ ಅನ್ನುವ ಮಾತು ನಿಜಕ್ಕೂ ಸತ್ಯವೇ. ಯಾವುದೇ ಕಾರಣಕ್ಕೂ ಉತ್ತಮವಾದ ಫಲಿತಾಂಶ ಕೊಡುತ್ತಿದ್ದೆ ಅಂದ್ರೆ ಅತಿಯಾಗಿ ಸೇವನೆ ಮಾಡಿದರೆ ವೈದ್ಯರ ಸಲಹೆಯನ್ನು ಪಡೆಯದೆ ಇದ್ದರೆ ಸೇವನೆ ಮಾಡಿದರೆ ಅಡ್ಡಪರಿಣಾಮಗಳು ಬೀರುವುದು ಖಚಿತವಾಗಿದೆ ಯಾರಿಗೂ ಕೆಲವು ಜನರಿಗೆ ತೊಂದರೆ ಆಯಿತು ಅಂತ ಅಮೃತದಂತಹ ಅಮೃತ ಬಳ್ಳಿಯನ್ನು ಸೇವನೆ ಬಿಡುವುದು ತುಂಬಾನೇ ದೊಡ್ಡ ತಪ್ಪು ಆಗಿದೆ. ಈ ಅಮೃತ ಬಳ್ಳಿ ನಿಜಕ್ಕೂ ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಇದರ ಸೇವನೆಯ ಮೇಲೆ ಗಮನ ಇರಲಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *