ನಮಸ್ತೆ ಪ್ರಿಯ ಓದುಗರೇ, ಗರಿಕೆ ಹುಲ್ಲು ಇದು ಹುಲ್ಲು ಮಾತ್ರವಲ್ಲದೆ ಗಣೇಶ ದೇವರಿಗೆ ತುಂಬಾನೇ ಪ್ರಿಯವಾದ ವಸ್ತುಗಳಲ್ಲಿ ಒಂದಾಗಿದೆ. ಅಂದ್ರೆ ಗಣೇಶನ ಪೂಜೆಯಲ್ಲಿ ಗರಿಕೆ ಹುಲ್ಲು ಇಲ್ಲದೆ ಇದ್ದರೆ ಆತನಿಗೆ ಪೂಜೆ ಮಾಡುವುದು ಅಪರಿಪೂರ್ಣ ಅಂತ ಹೇಳಿದರೆ ತಪ್ಪಾಗಲಾರದು. ಈ ಗರಿಕೆ ಹುಲ್ಲು ಪೂಜೆಗೆ ಮಾತ್ರವಲ್ಲದೆ ಇದು ಆರೋಗ್ಯಕರ ದೃಷ್ಟಿಯಲ್ಲಿ ತುಂಬಾನೇ ಲಾಭದಾಯಕವಾಗಿದೆ. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ಗರಿಕೆ ಹುಲ್ಲನ್ನು ಸೇವನೆ ಮಾಡಿ ಅನಾರೋಗ್ಯವನ್ನು ದೂರ ಮಾಡಬಹುದು ಅಂತ ವಿವರವಾಗಿ ತಿಳಿಯೋಣ. ಈ ಸಸ್ಯವು ನೋಡಲು ತುಂಬಾನೇ ಚಿಕ್ಕದಾಗಿ ಬಣ್ಣದಲ್ಲಿ ಹಸಿರು ರೂಪದಲ್ಲಿ ಇರುತ್ತದೆ. ಇದು ಧಾರ್ಮಿಕವಾಗಿ ತುಂಬಾನೇ ಪವಿತ್ರವಾದ ಸಸ್ಯವಾಗಿದೆ. ಈ ಗರಿಕೆ ಹುಲ್ಲು ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸಲು ತುಂಬಾನೇ ಸಹಾಯಕಾರಿ ಆಗಿದೆ ಗರಿಕೆ ಹುಲ್ಲಿನಲ್ಲಿ ವಿಶೇಷವಾದ ಔಷಧೀಯ ಗುಣ ಇರುವುದರಿಂದ ಸಾಕಷ್ಟು ಅನಾರೋಗ್ಯಗಳಿಗೆ ಸುಲಭ ಔಷಧವನ್ನಾಗಿ ಬಳಸಬಹುದು. ಇದರಲ್ಲಿ ಇರುವ ಕ್ಯಾಲ್ಸಿಯಂ, ರಂಜಕ, ಫೈಬರ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಸಮೃದ್ಧವಾಗಿರುತ್ತವೆ. ನಿಮಗೆ ಗೊತ್ತೇ ಮಿತ್ರರೇ ರಕ್ತ ಹೀನತೆ ಅನ್ನುವುದು ಮುಖ್ಯವಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ.
ಅದರಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಅಧಿಕವಾದ ರಕ್ತಸ್ರಾವ ಆಗುವುದು ಗರ್ಭಧಾರಣೆ ಆದಾಗ ಹೀಗೆ ವಿವಿಧ ರೂಪಗಳಲ್ಲಿ ರಕ್ತ ಹೀನತೆ ಅನ್ನುವುದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.ಅದರಲ್ಲೂ ಯುವ ಮಹಿಳೆಯರಲ್ಲಿ ಈ ಸಮಸ್ಯೆ ತುಂಬಾನೇ ಮಿತಿ ಮೀರಿ ಕಾಡುತ್ತಿದೆ. ಈ ರಕ್ತಹೀನತೆ ಸಮಸ್ಯೆ ಬರುವುದರ ಜೊತೆಗೆ ಇದರಿಂದ ಇನ್ನಿತರ ಹಲವಾರು ಸಮಸ್ಯೆಗಳು ವ್ಯಕ್ತಿಯನ್ನು ಮುತ್ತಿಕ್ಕುತ್ತದೆ. ಹಾಗಾದ್ರೆ ಈ ರಕ್ತ ಹೀನತೆ ಸಮಸ್ಯೆಯನ್ನು ಹೇಗೆ ಹೋಗಲಾಡಿಸುವುದು ಅದಕ್ಕೆ ಪರಿಹಾರ ಏನು ಅಂತ ನೀವು ತುಂಬಾನೇ ಯೋಚನೆ ಮಾಡುತ್ತಿದ್ದರೆ ಮನೆಯ ಮುಂದೆ ಅಥವಾ ಪಾರ್ಕ್ ನಲ್ಲಿ ಸಿಗುವ ಗರಿಕೆಯನ್ನು ಸೇವನೆ ಮಾಡುವುದರಿಂದ ಈ ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸಬಹುದು. ಈ ಗರಿಕೆ ಹುಲ್ಲಿನ ರಸ ರಕ್ತ ಕಣಗಳನ್ನು ದೇಹದಲ್ಲಿ ಹೆಚ್ಚಿಸುತ್ತದೆ ಅಂದ್ರೆ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಗರಿಕೆ ಹುಲ್ಲನ್ನು ತೆಗೆದುಕೊಳ್ಳಬೇಕು ಅದರಲ್ಲಿ ನೀರು ಹಾಕದೆ ಅದನ್ನು ಚೆನ್ನಾಗಿ ಕಿವುಚಿ ಅದರ ರಸವನ್ನು ತೆಗೆಯಬೇಕು. ಆ ರಸದಲ್ಲಿ ಬೆಲ್ಲವನ್ನು ಮತ್ತು ಕಪ್ಪು ಖರ್ಚೂರವನ್ನು ಹಾಕಿ ಸೇವನೆ ಮಾಡಬೇಕು. ಇದನ್ನು ನೀವು ಬೆಳಿಗ್ಗೆ ಮತ್ತು ರಾತ್ರಿ ಈ ರೀತಿ ಮಾಡಿಕೊಂಡು ನಿತ್ಯವೂ ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತ ಮಟ್ಟವನ್ನು ಹೆಚ್ಚಿಸಿ ನೀವು ಲವಲವಿಕೆ ಇಂದ ಇರುವಂತೆ ಮಾಡುತ್ತದೆ.
ರಕ್ತ ಹೀನತೆ ಸಮಸ್ಯೆಯಿಂದ ನಿಮ್ಮ ಮುಖದ ಮೇಲೆ ಗುಳ್ಳೆಗಳು ಕೂಡ ಆಗುತ್ತವೆ ಇದನ್ನು ಕೂಡ ಕಡಿಮೆ ಮಾಡುತ್ತಾ ಬರುತ್ತದೆ. ರಕ್ತ ಹೀನತೆಯಿಂದ ಅನಿಮಿಯಾ ರೋಗವನ್ನು ಕೂಡ ತಡೆಯುತ್ತದೆ. ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೆಯೇ ಹದಿನೈದು ದಿನಗಳಿಗೊಮ್ಮೆ ಗರಿಕೆ ರಸವನ್ನು ಮಾಡಿ ಕುಡಿಯಬೇಕು. ಮಹಿಳೆಯರಲ್ಲಿ ಬಿಳಿ ರಕ್ತಸ್ರಾವ ಕಂಡು ಬರುತ್ತಿದ್ದರೆ ಗರಿಕೆ ಹುಲ್ಲಿನ ರಸವನ್ನು ಮಾಡಿ ಮಹಿಳೆಯರು ಅದನ್ನು ಮೊಸರಿನಲ್ಲಿ ಮಿಶ್ರಣವನ್ನು ಮಾಡಿ ಸೇವಿಸಿ ಇದರಿಂದ ಬಿಳಿ ಮುಟ್ಟು ಕೂಡ ಕ್ರಮೇಣ ಕಡಿಮೆ ಆಗುತ್ತದೆ. ಜೊತೆಗೆ ಮಹಿಳೆಯರಲ್ಲಿ ಎದೆಹಾಲು ಹೆಚ್ಚಿಸಲು ಗರಿಕೆ ರಸವನ್ನು ಸೇವಿಸಿದರೆ ತಾಯಿಯ ಎದೆಹಾಲು ಹೆಚ್ಚಿಸುತ್ತದೆ ಈ ಗರಿಕೆ ರಸ. ಇಷ್ಟೊಂದು ಲಾಭವನ್ನು ಹೊಂದಿರುವ ಗರಿಕೆ ಹುಲ್ಲನ್ನು ಸೇವನೆ ಮಾಡಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.